News

ರಾಜಸ್ಥಾನದ ಕೋಟಾ ಪ್ರವೇಶಿಸಿದ ʻʻMFOI VVIF ಕಿಸಾನ್‌‌ ಭಾರತ ಯಾತ್ರೆ!ʻʻ

12 December, 2023 2:23 PM IST By: Maltesh
MFOI VVIF Kisan Bharat Yatra!

MFOI: ದೇಶದ ಅತಿದೊಡ್ಡ ಕೃಷಿ ಮಾಧ್ಯಮ ಸಂಸ್ಥೆ ಕೃಷಿ ಜಾಗರಣ ಇತ್ತೀಚಿಗೆ ತನ್ನ ಮೊದಲ ಆವೃತ್ತಿಯ ಬಹುನೀರಿಕ್ಷಿತ MFOI ಅವಾರ್ಡ್‌ ಸ್ಪಾನ್ಸರ್ಡ್‌ ಬೈ ಮಹೀಂದ್ರಾ ಟ್ರ್ಯಾಕ್ರರ್ಸ್‌ ( Mahindra Tractors) ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದೆ.

ಅದರ ಬೆನ್ನಲ್ಲೆ ಮುಂದಿನ ವರ್ಷ ಅಂದ್ರೆ 2024 ರ MFOI ಅವಾರ್ಡ್ಸ್‌ಗೆ ಈಗಾಗಲೇ ನಾಮಿನೇಷನ್‌ಗಳನ್ನು ಕೂಡ ಆರಂಭಿಸಿದೆ. ದೇಶದ ಮಿಲಿಯನೇಯರ್‌ ರೈತರನ್ನು ಗುರುತಿಸಿ ಗೌರವಿಸುವ ಇನ್ನೊಂದು ಭಾಗವಾಗಿ ದೇಶಾದ್ಯಂತ ಸಂಚರಿಸಲಿರುವ MFOI VVIF ಕಿಸಾನ್‌ ಭಾರತ ಯಾತ್ರಾ ಇಂದು ರಾಜಸ್ತಾನಕ್ಕೆ ಪ್ರವೇಶ ಮಾಡಿದೆ.

MFOI VVIF Kisan Bharat Yatra!

ʼMFOI VVIF ಕಿಸಾನ್‌ ಭಾರತ ಯಾತ್ರಾʼ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ರೈತರನ್ನು ಸನ್ಮಾನಿಸಲಾಗುತ್ತಿದೆ. ಸದ್ಯ ಇಂದು ರಾಜಸ್ಥಾನದ ಕೋಟಾದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮಿಲಿಯನೇರ್  ರೈತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಧನೆಗೈದ ಪ್ರಗತಿಪರ ಹಾಗೂ ಅವಾರ್ಡ್‌ ವಿಜೇತ ರೈತರನ್ನು ಸನ್ಮಾನಿಸಲಾಯಿತು.  ಜೊತೆಗೆ ರಾವಿ ಬೆಳೆಗಳಲ್ಲಿನ ರೋಗ ಮತ್ತು ಕೀಟಗಳ ನಿರ್ವಹಣೆ, ರಾಗಿ ಬೇಸಾಯ ಮತ್ತು ಟ್ರ್ಯಾಕ್ಟರ್‌ಗಳ ನಿರ್ವಹಣೆ ಬಗ್ಗೆಯೂ ವಿಶೇಷ ಚರ್ಚೆಗಳು ನಡೆದವು. ಈ ಅಧಿವೇಶನದಲ್ಲಿ ರೈತರಿಗೆ ಹಲವು ಮಹತ್ವದ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು. 

ವಿಶೇಷವಾಗಿ ಛತ್ತೀಸ್‌ಗಢದ ರಾಯ್‌ಪುರದ VNR ನರ್ಸರಿ ಪ್ರೈವೇಟ್ ಲಿಮಿಟೆಡ್ ರೈತರಿಗೆ ವಿವಿಧ ತಳಿಯ ಬೀಜಗಳನ್ನು ಈ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕೃಷಿ ಜಾಗರಣದ ಸಂಸ್ಥಾಪಕ ಸಂಪಾದಕರಾದ ಎಂ ಸಿ ಡೊಮಿನಿಕ್‌ ಅವರಿಗೆ MFOI ಗೆ ನಾಮಿನೇಶನ್‌ ಮಾಡಿಸಿಕೊಂಡು ದೇಶದ ಅತಿದೊಡ್ಡ ಕೃಷಿ ಮಹಾಕುಂಭದಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

MFOI VVIF Kisan Bharat Yatra!

ಈ ಕಾರ್ಯಕ್ರಮದಲ್ಲಿ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕರಾದ ಎಂ ಸಿ ಡೊಮಿನಿಕ್‌ (M C Dominic),  ಡೈರೆಕ್ಟರ್‌ HRD ಹಾಗೂ ಹಿರಿಯ ವಿಜ್ಞಾನಿಗಳು & ಕೋಟಾ KVK ಯ ಮುಖ್ಯಸ್ಥರು ಆದ ಡಾ. ಮಹೇಂದ್ರ ಸಿಂಗ್‌, ಕೋಟಾ ತೋಟಗಾರಿಕೆ ವಿಭಾಗದ ಡೆಪ್ಯೂಟಿ ನಿರ್ದೇಶಕರಾದ ಆನಂದಿ ಲಾಲ್‌ ಮೀನಾ, ಸೇರಿದಂತೆ ಇತರೆ ಗಣ್ಯರು, ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಪ್ರಶಸ್ತಿ ವಿಜೇತ ರೈತರು ಪಾಲ್ಗೊಂಡಿದ್ದರು.