ಕೃಷಿ ಜಾಗರಣ ಸಂಸ್ಥೆಯು ಕೃಷಿಯಲ್ಲಿ ಯಶಸ್ಸು ಕಂಡ ರೈತರನ್ನು ಪ್ರಶಸ್ತಿ ನೀಡಲು ಗೌರವಿಸಲು ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023ರನ್ನು ಪರಿಚಯಿಸಿದೆ.
ಇದರಲ್ಲಿ ನೀವೇ ರಾಜ ನೀವೇ ಮಂತ್ರಿ!
ಸಿನಿಮಾ ನಟ ಹಾಗೂ ನಟಿಯರಿಗೆ ಪ್ರಶಸ್ತಿ ಕೊಡುವುದಕ್ಕೂ ಜನರ ಅಭಿಪ್ರಾಯ ಕೇಳಿ ಹೆಚ್ಚು ಮನ್ನಣೆ ಗಳಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡುವುದು ಇದೆ.
ಆದರೆ, ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023 ನಲ್ಲಿ ನೀವೇ ರಾಜ.
ನೀವೇ ನಿಮ್ಮ ಹೆಸರನ್ನು ರಿಜಿಸ್ಟ್ರೇಷನ್ ಮಾಡಿಕೊಂಡು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.
ಹೌದು, ಕೃಷಿ ಜಾಗರಣ ಸಂಸ್ಥೆಯು ಮುಂದಿನಿಂದಲೂ ಎಲೆಮರೆಯಾಗಿರುವ ರೈತರನ್ನು ಗುರುತಿಸಿ ಅವರನ್ನು ಪ್ರಶಂಸಿಸುತ್ತಿದೆ.
ರೈತರಿಗೆ ವೇದಿಕೆ ಕಲ್ಪಿಸುವ ಫಾರ್ಮರ್ ದಿ ಜರ್ನಲಿಸ್ಟ್ ಎನ್ನುವ ಪರಿಕಲ್ಪನೆಯ ಮೂಲಕ ರೈತರೇ ಪತ್ರಕರ್ತರಾಗುವ ಅವಕಾಶವನ್ನು ಕಲ್ಪಿಸಿದೆ.
ಇದೀಗ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023 ಅನ್ನು ಪರಿಚಯಿಸಿದ್ದು, ಕೃಷಿಯಲ್ಲಿ
ಯಶಸ್ಸು ಹಾಗೂ ಅದ್ವಿತೀಯ ಸಾಧಣೆ ಮಾಡಿದ ರೈತರು ಇದಕ್ಕೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ
ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023 ಪ್ರಶಸ್ತಿಗೆ ಕಾಶ್ಮೀರದಿಂದ ಕನ್ಯಾಕುಮಾರಿಗೆ ವರೆಗಿನ ರೈತರು ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.
ದೇಶದ ಎಲ್ಲ ರಾಜ್ಯಗಳಿಂದಲೂ ರೈತರು ಈ ಪ್ರಶಸ್ತಿಗಾಗಿ ನೋಂದಣಿಯನ್ನು ಮಾಡಿಕೊಳ್ಳಬಹುದು.
ದೇಶದ ಮೂಲೆ ಮೂಲೆಯಿಂದಲೂ ರೈತರು ಈಗಾಗಲೇ ರಿಜಿಸ್ಟ್ರೇಷನ್ ಮಾಡಿಕೊಳ್ಳುತ್ತಿದ್ದಾರೆ.
ಸಾಧನೆ ಮಾಡಿದ ರೈತರೆಲ್ಲರನ್ನೂ ಒಂದೇ ವೇದಿಕೆಯಲ್ಲಿ ನೋಡುವುದೇ ಚಂದ.
ಇದೇ ಸಂದರ್ಭದಲ್ಲಿ ಅವರ ಅನುಭವಗಳನ್ನೂ ರೈತರು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.
ಇದೊಂದು ರೀತಿ ನೀವು ಕೃಷಿಯಲ್ಲಿ ಶ್ರೀಮಂತರಾಗುವುದಕ್ಕೆ ಸರಳವಾದ ಟಿಪ್ಸ್ ಮಾದರಿಯಲ್ಲಿ ಸಹಕಾರಿಯಾಗಲಿದೆ.
MFOI ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ ?
ನೀವು ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್‌ಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಅತ್ಯಂತ ಸುಲಭ.
ನೀವು ಸಹ ಸರಳವಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.
MFOI ಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳಲು ನೀವು Googleನಲ್ಲಿ ಹುಡುಕಿದರೆ,
ಫಲಿತಾಂಶಗಳಲ್ಲಿ ಕಂಡುಬರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಸ್ಕ್ರಾಲ್ ಮಾಡಿ ನಾಮನಿರ್ದೇಶನ ಎಂದು ಕಾಣುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ನಂತರ, ನಿಮ್ಮ ಹೆಸರು ಮತ್ತು ನಿಮ್ಮ ಫೋನ್ ಸಂಖ್ಯೆಯಂತಹ ನಿಮ್ಮ
ಸಂಪರ್ಕ ವಿವರಗಳನ್ನು ಭರ್ತಿ ಮಾಡಿ. ಮುಂದೆ ಕ್ಲಿಕ್ ಮಾಡಿ ಮತ್ತು ಪುರುಷ ಅಥವಾ ಮಹಿಳೆ ಆಯ್ಕೆಯನ್ನು
ಆಯ್ಕೆ ಮಾಡಿ, ನಂತರ ರಾಜ್ಯ, ಜಿಲ್ಲೆ ಮತ್ತು ಗ್ರಾಮದಂತಹ ಇತರ ಪ್ರಮುಖ ವಿವರಗಳನ್ನು ಭರ್ತಿ ಮಾಡಿ.
ನಂತರದ ಹಂತದಲ್ಲಿ ನಿಮ್ಮ ಆದಾಯ ಶ್ರೇಣಿ ಮತ್ತು ನಿಮ್ಮ ಜಮೀನು ಹಿಡುವಳಿಗಳನ್ನು ನೀವು ತುಂಬಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಇದು ನಿಮ್ಮನ್ನು ಕೊನೆಯ ಹಂತಕ್ಕೆ ಕೊಂಡೊಯ್ಯುತ್ತದೆ.
ಈ ಹಂತದಲ್ಲಿ ನಿಮ್ಮ ನಾಮನಿರ್ದೇಶನಕ್ಕಾಗಿ ಪ್ರಶಸ್ತಿಯ ವರ್ಗವನ್ನು ಆಯ್ಕೆಮಾಡಿರಿ.
ನಾವು ಹಲವು ವಿಶಿಷ್ಟವಾದ ನಾಮನಿರ್ದೇಶನ ವರ್ಗಗಳನ್ನು ಹೊಂದಿದ್ದೇವೆ.
ಇವುಗಳಿಂದ ನೀವು ಒಂದನ್ನು ಆಯ್ಕೆ ಮಾಡಬಹುದು ಅಥವಾ ಒಂದಕ್ಕಿಂತ ಹೆಚ್ಚು ವರ್ಗಗಳನ್ನು ಆಯ್ಕೆ ಮಾಡಬಹುದು.
ಮುಂದೆ ಕ್ಲಿಕ್ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಯೊಂದಿಗೆ ನಿಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸಿ.
ಇದು ನಂತರದ ಹಂತದಲ್ಲಿ ನಿಮ್ಮ ನಾಮನಿರ್ದೇಶನ ವಿವರಗಳನ್ನು ಎಡಿಟ್ ಮಾಡಲು ಸಹಾಯ ಮಾಡುತ್ತದೆ.
ಈ ಎಲ್ಲ ಪ್ರಕ್ರಿಯೆಗಳ ನಂತರ ನಮ್ಮ ತಂಡದ ಸದಸ್ಯರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ.
ಯಾವಾಗ ಪ್ರಶಸ್ತಿ ಪ್ರದಾನ ಸಮಾರಂಭ ?
ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023 ನಿಮ್ಮಷ್ಟೇ ನಾವೂ ಕಾತುರದಿಂದ ಕಾಯುತ್ತಿದ್ದೇವೆ.
ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023 ಪ್ರಶಸ್ತಿಗಾಗಿ ನಾವು ಭರ್ಜರಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದೇವೆ.
ನಮ್ಮ ತಂಡವು ಇದೇ ವರ್ಷ ಡಿಸೆಂಬರ್ 6, 7 ಮತ್ತು 8 ರಂದು ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ
ಅವಾರ್ಡ್ಸ್‌ನಲ್ಲಿ ನಿಮ್ಮನ್ನು ನಾವು ನಿರೀಕ್ಷಿಸುತ್ತಿದ್ದೇವೆ.
ಭಾರತದ ಮಿಲಿಯನೇರ್ ಫಾರ್ಮರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ.