News

MFOI ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ: ಪ.ಬಂ ಸಚಿವ ಬಿಪ್ಲಬ್ ರಾಯ್ ಚೌಧರಿ ಮೆಚ್ಚುಗೆ

02 October, 2023 12:58 PM IST By: Hitesh
ನವ‌ದೆಹಲಿಯ ಕೃಷಿ ಜಾಗರಣ ಕಚೇರಿಗೆ ಭೇಟಿ ನೀಡಿದ ಪಶ್ಚಿಮ ಬಂಗಾಳದ ಮೀನುಗಾರಿಕೆ ಸಚಿವ ಬಿಪ್ಲಬ್ ರಾಯ್ ಚೌಧರಿ

ಇಂದಿನ ದಿನಗಳಲ್ಲಿ ಕಲಬೆರಕೆ ಇಲ್ಲದ ಕೃಷಿಯನ್ನು ಉಳಿಸಿಕೊಳ್ಳುವುದೇ ಬಹುದೊಡ್ಡ ಸವಾಲು ಎಂದು ಪಶ್ಚಿಮ ಬಂಗಾಳದ ಮೀನುಗಾರಿಕೆ ಸಚಿವ ಬಿಪ್ಲಬ್ ರಾಯ್ ಚೌಧರಿ ಹೇಳಿದರು.

ಭಾನುವಾರ ನವದೆಹಲಿಯ ಕೃಷಿ ಜಾಗರಣ ಸಂಸ್ಥೆಗೆ ಭೇಟಿ ಸಂವಾದ ನಡೆನಡೆಸಿದರು.  

ಇತ್ತೀಚಿನ ದಿನಗಳಲ್ಲಿ ಮೀನುಗಾರಿಕೆ ಹಾಗೂ ಕೃಷಿಯಲ್ಲಿ ಕಲಬೆರೆಕೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದನ್ನು ತಡೆಯಬೇಕಾಗಿದೆ.

ಕೃಷಿಯಲ್ಲಿ ಯಾವುದೇ ಕಲಬೆರೆಕೆಯಾದರೂ ಅದು ಮನುಕುಲಕ್ಕೆ ಸಂಕಷ್ಟ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನು ಕೃಷಿ ಜಾಗರಣ ಸಂಸ್ಥೆಯ ಹೊರಗೆ ಹಾಗೂ ಒಳಗೆ ಸಸಿಗಳನ್ನು ನೆಟ್ಟು ಹಸಿರುಮಯವನ್ನಾಗಿ ಇರಿಸಿಕೊಂಡಿರುವುದಕ್ಕೆ ಅವರು ಶ್ಲಾಘನೆ ವ್ಯಕ್ತಪಡಿಸಿದರು.  

ಕೃಷಿ ಜಾಗರಣ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಎಂಸಿ ಡೊಮಿನಿಕ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.

ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್, MFOI, ಲಕ್ಷಾಂತರ ಆದಾಯ ಗಳಿಸುತ್ತಿರುವ ಭಾರತೀಯ

ರೈತರ ಶ್ರಮವನ್ನು ಗುರುತಿಸುವ ಪರಿಕಲ್ಪನೆ ಅದ್ಭುತವಾಗಿದೆ ಎಂದರು.   

ಚೌಧರಿ ಅವರು ಕೃಷಿ ಜಾಗರಣದ ಕಚೇರಿಯನ್ನು  ಪ್ರವೇಶಿಸುತ್ತಿದ್ದಂತೆ, ಅವರು ಸಸ್ಯಗಳಿಂದ ತುಂಬಿದ ಕಚೇರಿಯನ್ನು ನೋಡಿ ಉತ್ಸುಕರಾದರು.  

ಕಚೇರಿಯಲ್ಲಿ ಎಷ್ಟು ವಿಧದ ಸಸ್ಯಗಳನ್ನು ಇಟ್ಟಿದ್ದೀರಿ ಎಂದು ಎಂಸಿ ಡೊಮಿನಿಕ್ ಅವರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಂ ಸಿ ಡೊಮಿನಿಕ್‌ ಅವರು ಕಚೇರಿಯಲ್ಲಿ ಕನಿಷ್ಠ 65 ಪ್ರಭೇದದ ವಿವಿಧ ಸಸ್ಯಗಳನ್ನು ಇರಿಸಲಾಗಿದೆ ಎಂದರು.

ಆಗ ಚೌಧರಿ ಅವರು ಡಾಮಿನಿಕ್ ಅವರಿಗೆ  ಪ್ರತಿಯೊಂದು ಗಿಡಕ್ಕೂ ಹೆಸರಿಸಲು ವಿನಂತಿಸಿದರು.

ಕಚೇರಿ ಆವರಣದೊಳಗೆ ಇಷ್ಟೊಂದು ಗಿಡಗಳನ್ನು ನೆಟ್ಟಿರುವ ನಿಮ್ಮೆಲ್ಲರಿಗೂ ಅಭಿನಂದನೆಗಳು ಹಾಗೂ ಇದೊಂದು ಉತ್ತಮ ಪ್ರಯತ್ನ ಎಂದರು. 

ಒಳಾಂಗಣ ಸಸ್ಯವೂ ಆಗಿರುವ ತುಳಸಿ ಗಿಡದ ಪ್ರಸ್ತುತತೆಯನ್ನು ಅವರು ವಿವರಿಸಿದರು.

ತುಳಸಿ ಆರೋಗ್ಯಕ್ಕೆ ಬಹಳ ಮುಖ್ಯ ಮತ್ತು ಪೂಜೆಯಲ್ಲಿ ಬಳಸಲಾಗುತ್ತದೆ.

ಇದು ಇತರ ಸಸ್ಯಗಳಿಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ ಎಂದು ಶ್ರೀ ಚೌಧರಿ ಹೇಳಿದರು.

ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳು ಕೆಜೆ ಚುಪಾಲ್‌ನಲ್ಲಿ ನಡೆದ ಚರ್ಚೆಯಲ್ಲಿ,

ಶ್ರೀ ಚೌಧರಿ ಅವರು ಇತ್ತೀಚಿನ  ದಿನಗಳಲ್ಲಿ ಎ.ಸಿ ಇಲ್ಲದೆ ಮಲಗುವುದು ಕಷ್ಟ, ಏಕೆಂದರೆ ಕಡಿಮೆ ಸಂಖ್ಯೆಯ ಮರಗಳಿಂದಾಗಿ ತಾಪಮಾನ ಹೆಚ್ಚಳವಾಗುತ್ತಿದೆ.

ಪ್ರಪಂಚದಾದ್ಯಂತ ಜನಸಂಖ್ಯೆಯು ವೇಗವಾಗಿ ಏರುತ್ತಿರುವಾಗ, ಮರಗಳ ಸಂಖ್ಯೆಯು ಹೊಂದಿಕೆಯಾಗುತ್ತಿಲ್ಲ.

ಮುಂದಿನ ದಿನಗಳಲ್ಲಿ ಜಾಗತಿಕ ತಾಪಮಾನವು ನಮ್ಮ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು.  

ಪಶ್ಚಿಮ ಬಂಗಾಳದ ಮೀನುಗಾರಿಕೆ ಸಚಿವ ಬಿಪ್ಲಬ್ ರಾಯ್ ಬಿಪ್ಲಬ್ ರಾಯ್ ಚೌಧರಿ ಅವರು ಮೀನುಗಾರಿಕೆ ಸಚಿವರಾಗಿದ್ದಾರೆ.

ಆದರೆ, ಅವರು ಕಳೆದ  30 ವರ್ಷಗಳಿಂದ ನಾನು ಸಸ್ಯಾಹಾರಿಯಾಗಿದ್ದೇನೆ ಎಂದರು.

ಬೆಳೆ ಹಾಗೂ ಮೀನುಗಳ ಗುಣಮಟ್ಟವನ್ನು ಸುಲಭವಾಗಿ ಗುರುತಿಸಬಹುದು ಎಂದರು.

ರೈತರು ಸರಿಯಾದ ಕೃಷಿ ವಿಧಾನಗಳನ್ನು ತಿಳಿದುಕೊಂಡು ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.