News

MFOI 2023: ಕೃಷಿ ಜಾಗರಣದ ಕಾರ್ಯಕ್ಕೆ ಶ್ಲಾಘನೆ, ಎಂ.ಸಿ ಡೊಮಿನಿಕ್‌ ಹಾಗೂ ಶೈನಿ ಡೊಮಿನಿಕ್‌ ಅವರಿಗೆ ಕರ್ನಾಟಕದ ರೈತರಿಂದ ಸನ್ಮಾನ!

08 December, 2023 4:13 PM IST By: Hitesh
ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಸಂಪಾದಕ ಶ್ರೀ ಎಂ ಸಿ ಡೊಮಿನಿಕ್‌ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀಮತಿ ಶೈನಿ ಡೊಮಿನಿಕ್‌ ಅವರನ್ನು ಕರ್ನಾಟಕದ ರೈತರು ಸನ್ಮಾನಿಸಿ, ಗೌರವಿಸಿದರು. ಮಹೀಂದ್ರಾ ಟ್ರಾಕ್ಟರ್ಸ್‌ನ ಫಾರ್ಮ್ ಎಕ್ಯೂಮೆಂಟ್ಸ್‌ ವಿಭಾಗದ ಸಿಇಒ ವಿಕ್ರಮ್ ವಾಘ್ ಇದ್ದಾರೆ

ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಸಂಪಾದಕ ಶ್ರೀ ಎಂ ಸಿ ಡೊಮಿನಿಕ್‌ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀಮತಿ ಶೈನಿ ಡೊಮಿನಿಕ್‌ ಅವರನ್ನು

ಕರ್ನಾಟಕ ಹಾಗೂ ತಮಿಳುನಾಡಿನ ರೈತರು ಸನ್ಮಾನಿಸಿ, ಗೌರವಿಸಿದರು.  

ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಸಂಪಾದಕ ಶ್ರೀ ಎಂ ಸಿ ಡೊಮಿನಿಕ್‌ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀಮತಿ ಶೈನಿ ಡೊಮಿನಿಕ್‌ ಅವರನ್ನು ಕರ್ನಾಟಕ ಹಾಗೂ ತಮಿಳುನಾಡಿನ ರೈತರು ಸನ್ಮಾನಿಸಿ, ಗೌರವಿಸಿದರು. ಮಹೀಂದ್ರಾ ಟ್ರಾಕ್ಟರ್ಸ್‌ನ ಫಾರ್ಮ್ ಎಕ್ಯೂಮೆಂಟ್ಸ್‌ ವಿಭಾಗದ ಸಿಇಒ ವಿಕ್ರಮ್ ವಾಘ್ ಇದ್ದಾರೆ

ದೇಶದಲ್ಲೇ ಮೊದಲ ಬಾರಿ ಕೃಷಿ ಜಾಗರಣ ಸಂಸ್ಥೆಯು ದೇಶದ ಎಲ್ಲ ಭಾಗದ ರೈತರನ್ನು ಅದರಲ್ಲಿಯೂ ಮುಖ್ಯವಾಗಿ ಶ್ರೀಮಂತ ರೈತರನ್ನು

ಗುರುತಿಸಿ, ಗೌರವಿಸುವ ಯೋಜನೆಯನ್ನು ರೂಪಿಸಿಕೊಳ್ಳಲಾಯಿತು.

ಇದರ ಮುಖ್ಯ ಉದ್ದೇಶ ದೇಶದಲ್ಲಿ ಕೃಷಿ ಮಾಡುವ ರೈತರು ಸಹ ಶ್ರೀಮಂತರಾಗಬಹುದು. ಈಗಾಗಲೇ ದೇಶದಲ್ಲಿ ಸಾವಿರಾರು ಜನ ರೈತರು ಕೃಷಿ ಮಾಡುವ ಮೂಲಕ

ಈಗಾಗಲೇ ಕೋಟ್ಯಾಂತರ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ ಎನ್ನುವುದು ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಸಂಪಾದಕ

ಶ್ರೀ ಎಂ ಸಿ ಡೊಮಿನಿಕ್‌ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀಮತಿ ಶೈನಿ ಡೊಮಿನಿಕ್‌ ಅವರ ಆಶಯವಾಗಿದೆ. 

ಇದೇ ಕಾರಣಕ್ಕಾಗಿ ಕೃಷಿ ಜಾಗರಣ ಸಂಸ್ಥೆಯು ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023 ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಯಿತು.

ಇದಕ್ಕೆ ದೇಶದ ಪ್ರಮುಖ ಟ್ರಾಕ್ಟರ್‌ ಸಂಸ್ಥೆಯಾದ ಮಹೀಂದ್ರ ಟ್ರಾಕ್ಟರ್‌ ಕೈಜೋಡಿಸಿತು.

ಕೃಷಿಜಾಗರಣವು ರೈತರು ಸಹ ಶ್ರೀಮಂತರಾಗಬಹುದು. ಕೋಟಿಗಳಲ್ಲಿ ಮಾತನಾಡಬಹುದು ಎನ್ನುವುದನ್ನು ನಂಬುತ್ತದೆ.

ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಸಂಪಾದಕ ಶ್ರೀ ಎಂ ಸಿ ಡೊಮಿನಿಕ್‌ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀಮತಿ ಶೈನಿ ಡೊಮಿನಿಕ್‌ ಅವರನ್ನು ಕರ್ನಾಟಕದ ರೈತರು ಸನ್ಮಾನಿಸಿ, ಗೌರವಿಸಿದರು. ಮಹೀಂದ್ರಾ ಟ್ರಾಕ್ಟರ್ಸ್‌ನ ಫಾರ್ಮ್ ಎಕ್ಯೂಮೆಂಟ್ಸ್‌ ವಿಭಾಗದ ಸಿಇಒ ವಿಕ್ರಮ್ ವಾಘ್ ಇದ್ದಾರೆ

ದೇಶಕ್ಕೆ ಅನ್ನ ನೀಡುವ ಕೈಗಳನ್ನು ಗುರುತಿಸುವ ಪ್ರಯತ್ನ ನಮ್ಮದಾಗಿದೆ. ಇದೇ ಕಾರಣಕ್ಕಾಗಿ ಮಿಲಿಯೇನರ್‌ ಫಾರ್ಮರ್‌ ಆಫ್‌ ಇಂಡಿಯಾ 2023ಅನ್ನು ಆಯೋಜಿಸಲಾಗಿದೆ.

ಇದಕ್ಕೆ ಮಹೀಂದ್ರ ಟ್ರಾಕ್ಟರ್ಸ್‌ ಮುಖ್ಯ ಪ್ರಾಯೋಜಿಕತ್ವ ವಹಿಸಿದ್ದು, ಹಲವು ಸಂಸ್ಥೆಗಳು ಸಹಕಾರ ನೀಡಿವೆ. RFOI ಅಂದರೆ ರಿಚೆಸ್ಟ್‌ ಫಾರ್ಮರ್‌ ಆಫ್‌ ಇಂಡಿಯಾ ಹಾಗೂ ಮಿಲಿಯನೇರ್‌

ಫಾರ್ಮರ್‌ ಆಫ್‌ ಇಂಡಿಯಾ 2023ರನ್ನು ನಾವು ಪರಿಚಯಿಸಿದ್ದೇವೆ. ರೈತರಿಗೆ ಪ್ರಶಸ್ತಿ ನೀಡುವ ಕೃಷಿ ಜಾಗರಣದ ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನುವುದು ನಮ್ಮ ಹೆಮ್ಮೆ.

ಎಂ.ಸಿ ಡೊಮಿನಿಕ್‌ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೈನಿ ಡೊಮಿನಿಕ್‌.    

ನವದೆಹಲಿಯ ಪೂಸಾ ಮೈದಾನ, ಮೇಳಾ ಗ್ರೌಂಡ್‌ನಲ್ಲಿ ಡಿಸೆಂಬರ್‌ 6ರಿಂದ ಡಿಸೆಂಬರ್‌ 8ರ ವರೆಗೆ ಮೂರು ದಿನಗಳ ಕಾಲ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023

ಮಹೀಂದ್ರ ಟ್ರಾಕ್ಟರ್‌ ಪ್ರಯೋಜಕತ್ವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಇದಕ್ಕೆ ದೇಶದ ಎಲ್ಲ ರಾಜ್ಯಗಳಿಂದಲೂ ರೈತರು ಭಾಗವಹಿಸಿದ್ದರು.

ನೂರಾರು ಜನ ರೈತರನ್ನು ಈ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರೈತರನ್ನು ಗುರುತಿಸಿ ಗೌರವಿಸಿದ್ದಕ್ಕಾಗಿ ಕರ್ನಾಟಕ ಹಾಗೂ ತಮಿಳುನಾಡಿನ

ರೈತರು ಕೃಷಿ ಜಾಗರಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಂಪಾದಕ ಎಂ.ಸಿ ಡೊಮಿನಿಕ್‌ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೈನಿ

ಡೊಮಿನಿಕ್‌ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲದೇ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.