Namma metro: ನವೆಂಬರ್ 1 ರಿಂದ ನಮ್ಮ ಮೆಟ್ರೋ ಹೊಸ ಮಾದರಿಯ ಸೇವೆಯನ್ನು ಪರಿಚಯಿಸಿದೆ.
Gkvk: ಕೃಷಿ ಮೇಳಕ್ಕೆ ಜಿಕೆವಿಕೆ ಸಜ್ಜು; ಈ ಬಾರಿಯ ವಿಶೇಷತೆಗಳೇನು?
ಬಿಎಂಆರ್‌ಸಿಎಲ್ ನಿಗಮವು ನಮ್ಮ ಮೆಟ್ರೋದ ಪುಯಾಣಿಕರಿಗೆ ಸ್ಮಾರ್ಟ್ ಕಾರ್ಡ್, ಕಾಯಿನ್ ಟಿಕೆಟ್‌ಗಳ ಜೊತೆಗೆ ಇದೀಗ ವಾಟ್ಸಾಪ್ ಮೂಲಕ ಹಾಗೂ ಆಪ್ ಮೂಲಕ ಕ್ಯೂಆರ್ ಕೋಡ್‌ಗಳ ಟಿಕೆಟ್‌ಗಳನ್ನು ನೀಡಲು ಮುಂದಾಗಿದೆ.
ನವೆಂಬರ್ 1ರಿಂದ ಸ್ಮಾರ್ಟ್ ಫೋನ್ ಇರುವ ಮೆಟ್ರೋ ಪ್ರಯಾಣಿಕರು ಟೋಕನ್ ಖರೀದಿಸಲು ಟಿಕೆಟ್ ಕೌಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.
ಬಿಎಂಆರ್‌ಸಿಎಲ್ ಗ್ಲೋಬಲ್ ಟ್ರಾನ್ಸಿಟ್ ಸ್ಪೇಸ್‌ನಲ್ಲಿ ವಾಟ್ಸ್ ಆಪ್ (WhatsApp)ನಲ್ಲಿ ಎಂಡ್-ಟು-ಎಂಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ್ದು,
ಈ ಮಾದರಿಯ ಸೇವೆಯನ್ನು ಕಲ್ಪಿಸಿದ ದೇಶದ ಮೊದಲ ಮೆಟ್ರೋ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇದನ್ನೂ ಓದಿರಿ: ಇಂದು ನವೆಂಬರ್ 1; ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಗೊತ್ತೆ?
ಅಲ್ಲದೇ QR ಟಿಕೆಟ್‌ಗಳನ್ನು ಟೋಕನ್ ದರಕ್ಕಿಂತ ಶೇಕಡ 5% ರಿಯಾಯಿತಿಯಲ್ಲಿ ನೀಡಲಾಗುತ್ತಿದೆ.
ಡಿಜಿಟಲೀಕರಣವನ್ನು ಉತ್ತೇಜಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಅನುಕೂಲಕರವಾಗಿ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಸೌಲಭ್ಯವನ್ನು ಬಳಸಿಕೊಳ್ಳಲು ಮೆಟ್ರೋ ಮುಂದಾಗಿದೆ.
ಬಳಸುವುದು ಹೇಗೆ
ನಮ್ಮ ಮೆಟ್ರೋ ಆಪ್ (ಅಪ್ಲಿಕೇಶನ್): ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಇಚ್ಛಿಸುವ ಪ್ರಯಾಣಿಕರು ಆಂಡ್ರಾಯ್ಡ್ ಓಎಸ್ ಹೊಂದಿರುವ ಮೊಬೈಲ್‌ನಿಂದ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಅವರ ಹೆಸರು ಮತ್ತು ವಿವರಗಳನ್ನು ಅದರಲ್ಲಿ ನಮೂದಿಸಬೇಕು.
ವಾಟ್ಸ್ ಆಪ್ (ಅಪ್ಲಿಕೇಶನ್) ವ್ಯವಸ್ಥೆ ವಿವರ
ಅಧಿಕೃತ ಬಿಎಂಆರ್‌ಸಿಎಲ್‌ನ ವಾಟ್ಸ್ ಆಪ್ ಚಾಟ್ ಬಾಟ್ ಮೊಬೈಲ್‌ನ ಸಂಖ್ಯೆ 810 555 66 77 ಅನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸೇವ್ ಮಾಡಿ ಹಾಯ್ (Hi)
ಎಂಬ ಸಂದೇಶವನ್ನು ಕಳುಹಿಸುವ ಮೂಲಕ QR ಟಿಕೆಟ್‌ಗಳನ್ನು ಖರೀದಿಸಲು ಚಾಟ್‌ಬಾಟ್ ನೊಂದಿಗೆ ಸಂವಹನವನ್ನು ಪ್ರಾರಂಭಿಸಬಹುದು.
ಆಂಡ್ರಾಯ್ಡ್ ಮತ್ತು ಐಓಸ್ ಮೊಬೈಲ್ ಬಳಕೆದಾರರಿಗೆ ಚಾಟ್‌ಬಾಟ್ (Chatbot) ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ.
ವಾಟ್ಸಪ್ (WhatsApp) ಚಾಟ್‌ಬಾಟ್ (Chatbot) ವಿಶೇಷತೆ ಈ ರೀತಿ ಇದೆ
- ಪ್ರಯಾಣದ ಯೋಜನೆ (ಜರ್ನಿ ಪ್ಲಾನ್)
- ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಂವಾದ ಮಾಡುವ ಆಯ್ಕೆಗಳು
- OR ಟಿಕೆಟ್‌ಗಳ ಖರೀದಿ ಪ್ರಕ್ರಿಯೆ
- ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳ ರೀಚಾರ್ಜ್
- ಪ್ರಯಾಣಿಕರ ಸಮೀಪದ ಮೆಟ್ರೋ ನಿಲ್ದಾಣದ ವಿವರ
- ವಿವಿಧ ನಿಲ್ದಾಣಗಳಲ್ಲಿ ರೈಲು ಹೊರಡುವ ಸಮಯದ ಮಾಹಿತಿ
- ಯಾವುದೇ ಎರಡು ನಿಲ್ದಾಣಗಳ ನಡುವಿನ ದರದ ಮಾಹಿತಿ
- ಗ್ರಾಹಕರ ಪ್ರತಿಕ್ರಿಯ
- ತ್ವರಿತ ಮತ್ತು ತಡೆರಹಿತ ಪಾವತಿಗಳಿಗಾಗಿ WhatsApp UPI ಮೂಲಕ ವಹಿವಾಟು ಸಹ ಲಭ್ಯವಿರುವುದು ವಿಶೇಷವಾಗಿದೆ.
ನಮ್ಮ ಮೆಟ್ರೋ; QR ಟಿಕೆಟ್ ಅನ್ನು ಬಳಸುವ ವಿಧಾನ
ಪ್ರಯಾಣಿಕರು ದಿನದ ಪ್ರವೇಶ ಹಾಗೂ ತಲುಪಬೇಕಾದ ನಿರ್ದಿಷ್ಟ ನಿಲ್ದಾಣದವನ್ನು ನಿಗದಿಪಡಿಸಿಕೊಳ್ಳುವ ಮೂಲಕ ನಮ್ಮ ಮೆಟ್ರೋ ಅಪ್ಲಿಕೇಶನ್ ಅಥವಾ ವಾಟ್ಯಾಪ್‌ನಲ್ಲಿ WhatsAppನಲ್ಲಿ QR ಟಿಕೆಟ್ ಪಡೆಯಬಹುದು.
ಮೆಟ್ರೋ ನಿಲ್ದಾಣಗಳಲ್ಲಿನ ಸ್ವಯಂಚಾಲಿತ ಗೇಟ್‌ಗಳಲ್ಲಿ ಅಳವಡಿಸಲಾಗಿರುವ ಕ್ಯೂಆರ್ ರೀಡರ್‌ಗಳಿಗೆ ಮೊಬೈಲ್ ಫೋನ್‌ನಲ್ಲಿರುವ QR ಟಿಕೆಟ್‌ಗಳನ್ನು ಪ್ರವೇಶ ಮತ್ತು ನಿರ್ಗಮಿಸುವಾಗ ತೋರಿಸಿ ಫ್ಯಾನ್ ಮಾಡಬೇಕು.
ಖರೀದಿಸಿದ ಮೊಬೈಲ್ QR ಟಿಕೆಟ್‌ಗಳು, ಆ ದಿನ ಮೆಟ್ರೋ ಸೇವೆ ಮುಕ್ತಾಯವಾಗುವ ವರೆಗೆ ಲಭ್ಯವಿರುತ್ತದೆ.
ಈ ನಿರ್ದಿಷ್ಟ ಅವಧಿಯಲ್ಲಿ ಒಂದೊಮ್ಮೆ ಪ್ರಯಾಣ ಮಾಡದಿದ್ದರೆ, ಅದೇ ದಿನದಂದು ಟಿಕೆಟ್ ರದ್ದತಿ ವಿಧಾನವನ್ನು ಬಳಸಿ ಮೊತ್ತವನ್ನು ಮರುಪಾವತಿ ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ.