News

ಲಾಕ್ ಡೌನ್ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಮೆಮು ರೈಲು ಆರಂಭ

08 December, 2020 9:44 AM IST By:

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದು ಲಾಕ್ ಡೌನ್ ನಂತರ ಸುಮಾರು ಎಂಟು ತಿಂಗಳ ನಂತರ ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ರೈಲ್ವೆ ಸೋಮವಾರದಿಂದ ಕರ್ನಾಟದಲ್ಲಿ ಕಾಯ್ದಿರಿಸದ ಜೋಡಿ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಿದೆ.

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಂಟು ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಮೆಮು ಮತ್ತು ಡೆಮು ರೈಲು ಸೇವೆಗಳು ಪುನಾರಂಭಗೊಂಡಿವೆ ಮೈಸೂರು- ಬೆಂಗಳೂರು ಹಾಗೂ ಬೆಂಗಳೂರು-ಬಂಗಾರಪೇಟೆ ನಡುವೆ ಈ ರೈಲುಗಳು ಸಂಚರಿಸಲಿವೆ.

ಲಾಕ್ ಡೌನ್ ಪರಿಣಾಮ ಮಾರ್ಚ್ 22 ರಿಂದ ಯಾವುದೇ ಸಾಮಾನ್ಯ ಪ್ರಯಾಣಿಕ ರೈಲು ಕಾರ್ಯನಿರ್ವಹಿಸಿರಲಿಲ್ಲ. ಈ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿದ ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರು ರೈಲಿನಲ್ಲಿ ಕೋವಿಡ್-19 ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಿದರು.

ಪ್ರತಿ ದಿನ ಬೆಂಗಳೂರಿಗೆ ಕೆಲಸಕ್ಕೆ ಆಗಮಿಸುವ ನೌಕರರಿಗೆ ಈ ರೈಲು ಸೇವೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಲಾಕ್‌ಡೌನ್‌ ತೆರವುಗೊಂಡ ಬಳಿಕ ಸಾಮಾನ್ಯ ರೈಲುಗಳ ಸಂಚಾರ ಆರಂಭಗೊಂಡರೂ ಡೆಮು ಮತ್ತು ಮೆಮು ರೈಲು ಸೇವೆ ಆರಂಭಿಸಿರಲಿಲ್ಲ.

ಸುತ್ತಮುತ್ತಲ ಊರುಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರು ಮೆಮು ಹಾಗೂ ಡೆಮು ರೈಲು ಆರಂಭಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ ರೈಲುಗಳ ಸಂಚಾರ ಆರಂಭಿಸಿದೆ.