ಭಾರತೀಯ ಹವಾಮಾನ ಇಲಾಖೆಯು ಮಳೆಯ ಆಗಮನಕ್ಕೆ ಮೊದಲು ಮಾಹಿತಿ ನೀಡುವ ಕೆಲವು ಆ್ಯಪ್ ಗಳನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ಉಷ್ಣವಲಯದ ಹವಾಮಾನ ವಿಜ್ಹಾನ ಸಂಸ್ಥೆಯ ಸಂಶೋಧಕರು, ಈಗ ಋತುಮಾನದ ಮುಸ್ಸೂಚನೆಯನ್ನು ಒಂದು ಋತುವಿನಷ್ಟು ಮುಂಚಿತವಾಗಿಯೇ ತಿಳಿಸುವ ವಿಧಾನ ರೂಪಿಸಿದ್ದಾರೆ.
ರೈತರಿಗೆ ಸುಲಭವಾಗಿ ಹವಾಮಾನದ ಮಾಹಿತಿ ನೀಡುವುದಕ್ಕಾಗಿ ಭಾರತೀಯ ಹವಾಮಾನ ಇಲಾಖೆ, ಭಾರತೀಯ ಸಂಶೋಧನಾ ಮಂಡಳಿ ಮತ್ತು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಸಹಯೋಗದಲ್ಲಿ, ರೈತರಿಗೆ ಸ್ಥಳೀಯ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳನ್ನು ನೀಡಲು ಮೇಘಧೂತ ಆ್ಯಪ್ ಅಭಿವೃದ್ಧಿಪಡಸಲಾಗಿದೆ.
ಸ್ವಂತ ಜಮೀನಿಲ್ಲದಿದ್ದರೂ ಓಕೆ.. ಈ ರೀತಿಯ ಕೃಷಿಯಲ್ಲಿ ಇನ್ವೆಸ್ಟ್ ಮಾಡಿ ಕೈತುಂಬ ಆದಾಯ ಗಳಿಸಿ
ಈ ಆ್ಯಪ್ ಮೂಲಕ ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ದೇಶದ 10 ಭಾಷೆಯಗಳಲ್ಲಿ ಜಿಲ್ಲಾವಾರು ಮಾಹಿತಿ ನೀಡುತ್ತದೆ. ಮುಂದಿನ ಐದು ದಿನಗಳ ಹವಾಮಾನ ಆಧಾರಿತ ಮಳೆ, ಉಷ್ಣಾಂಶ, ಆರ್ದ್ರತೆ, ಗಾಳಿಯ ವೇಗ, ಗಾಳಿಯ ದಿಕ್ಕಿನ ಮುನ್ಸೂಚನೆಯನ್ನು ಸಹ ಈ ಆ್ಯಪ್ ನೀಡುತ್ತದೆ.
ಸಲಹೆಗಳು ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಲಭ್ಯವಿದೆ. ಆಸಕ್ತ ಬಳಕೆದಾರರು 'ಮೇಘದೂತ್' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಮತ್ತು ಅವರ ಮೊಬೈಲ್ ಸಂಖ್ಯೆ ಮತ್ತು ಆದ್ಯತೆಯ ಭಾಷೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಬೇಕು. ಈ ಅಪ್ಲಿಕೇಶನ್ ಹಿಂದಿನ ಆಧಾರದ ಮೇಲೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಆಗ್ರೋ ಮೆಟ್ ಫೀಲ್ಡ್ ಯುನಿಟ್‌ಗಳು (AMFU) ನೀಡುವ ಬೆಳೆ ಮತ್ತು ಜಾನುವಾರು ನಿರ್ವಹಣೆಯ ಕುರಿತು ಜಿಲ್ಲಾವಾರು ಸಲಹೆಗಳನ್ನು ಒದಗಿಸುತ್ತದೆ.
ಈ ತಿಂಗಳಲ್ಲಿ 15 ದಿನ ತೆಗೆಯೊಲ್ಲ ಬ್ಯಾಂಕ್..ಈ ದಿನಗಳಂದು ಬ್ಯಾಂಕ್ ರಜೆ
ಬೆಳೆ ಸಲಹೆಯ ಹೊರತಾಗಿ, ಅಪ್ಲಿಕೇಶನ್ ಪ್ರಸ್ತುತ ಹವಾಮಾನ ಮಾಹಿತಿ, ಮಳೆ, ತಾಪಮಾನ, ಆರ್ದ್ರತೆ, ಗಾಳಿಯ ವೇಗ ಮತ್ತು ದಿಕ್ಕಿಗೆ ಸಂಬಂಧಿಸಿದ ಐದು ದಿನಗಳ ಹಿಂದಿನ ಮತ್ತು ಮುನ್ಸೂಚನೆಯ ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ, ಇದು ಕೃಷಿ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದರಿಂದ ರೈತರು ಬದಲಾಗುತ್ತಿರುವ ಹವಾಮಾನಕ್ಕೆ ಅನುಗುಣವಾಗಿ ತಮ್ಮ ಕ್ಷೇತ್ರ ಕಾರ್ಯಾಚರಣೆಯನ್ನು ಯೋಜಿಸಬಹುದು ಮತ್ತು ಬೆಳೆ ನಷ್ಟವನ್ನು ಕಡಿಮೆ ಮಾಡಬಹುದು.
ಡೌನ್ಲೋಡ್ ಮತ್ತು ಬಳಕೆ ಹೇಗೆ?
ಗೂಗಲ್ ಪ್ಲೇ ಸ್ಟೋರ್, ಅಥವಾ ಗೂಗಲ್ ಕ್ರೋಮ್ ನಲ್ಲಿ meghdoot.agro@imd.gov.in ಟೈಪ್ ಮಾಡಿದಾಗ ಮೇಘದೂತ್ ಆ್ಯಪ್ ನ ಹೋಮ್ ಪೇಜ್ ತೆರೆಯುತ್ತದೆ. ಇಲ್ಲಿ ಇನ್ಸಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ಆ್ಯಪ್ ಡೌನ್ಲೋಡ್ ಆದ ಮೇಲೆ ನೋಂದಣಿ ಮಾಡಲು ಭಾಷೆ ಆಯ್ಕೆ, ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆ ಆಯ್ಕೆ ಮಾಡಿ ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನೋಂದಣಿಯಾಗಿರುವುದಾಗಿ ಮೊಬೈಲ್ ಪರದೆಯ ಮೇಲೆ ಹೆಸರು ಬರುತ್ತದೆ. ಇದಾನ ನಂತರ ಲಾಗಿನ್ ಆಗಿ ನೀವು ಮಳೆಯ ಮುನ್ಸೂಚನೆ ಮತ್ತು ಇತರ ಮಾಹಿತಿ ಪಡೆಯಬಹುದು.