ಪ್ರಸಕ್ತ ಹಂಗಾಮಿನ ಕಬ್ಬಿಗೆ ದರ ನಿಗದಿ ಆಗಲಿದೆ ಎನ್ನುವ ರೈತರ ನಿರೀಕ್ಷೆಗೆ ಸಣ್ಣಮಟ್ಟಿನ ಹಿನ್ನೆಡೆ ಉಂಟಾಗಿದೆ. ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಶನಿವಾರ ಮೂರು ಗಂಟೆಗಳ ಕಾಲ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಯಿತು.
ಬ್ರೇಕಿಂಗ್: ಜನಸಾಮಾನ್ಯರಿಗೆ ಮತ್ತೆ ಶಾಕ್, ಹಾಲಿನ ದರ ಹೆಚ್ಚಿಸಿದ ಅಮುಲ್!
ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಶನಿವಾರ ಮೂರು ಗಂಟೆಗಳ ಕಾಲ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಯಿತು.
ಸಭೆಯಲ್ಲಿ ಸಚಿವರು ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಅಂತಿಮ ಮಾಡಲಾಗುವುದು ಎಂದು ಹೇಳಿದರು.
ATM ನಿರಾಕರಿಸಿದ 500 ರೂ.ಗಳನ್ನು ನೀಡದ ಬ್ಯಾಂಕಿಗೆ ದಂಡ! ಖರ್ಚು, ಬಡ್ಡಿ ಸೇರಿ ಗ್ರಾಹಕನಿಗೆ ₹1,02,700 ಪರಿಹಾರ!
ಸಭೆಯಲ್ಲಿ ಚರ್ಚೆ ಮಾಡಲಾದ ವಿಷಯಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸಭೆ ನಡೆಸಿದ ನಂತರ ದರ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಸಂಘದ ಅಧ್ಯಕ ಬಡಗಲಪುರ ನಾಗೇಂದ್ರ, ರೈತ ನಾಯಕಿ ಸುನಂದಾ ಜಯರಾಂ ಸೇರಿದಂತೆ ಹಲವರು ಪ್ರತಿ ಟನ್ ಕಬ್ಬಿಗೆ 15,500 ರೂಪಾಯಿ ದರ ನಿಗದಿಪಡಿಸಬೇಕು.
ಬೆಂಗಳೂರು ಜಿಕೆವಿಕೆಯಲ್ಲಿ ನವೆಂಬರ್ 3ರಿಂದ ಬೃಹತ್ ಕೃಷಿ ಮೇಳ! ಏನೇನಿರಲಿದೆ ಗೊತ್ತೆ?
ಕಟಾವು ಮತ್ತು ಸಾಗಣೆ ವೆಚ್ಚವನ್ನು ತೆರಿಗೆ ಹೊರೆಯಾಗದಂತೆ ನಿಧಿ ಮಾಡಬೇಕು, ಕಾರ್ಖಾನೆಗಳು ತೂಕದಲ್ಲಿ ಮಾಡುವ ಮೋಸ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ದರ ನಿಗದಿಯ ಬಗ್ಗೆ ಗೊಂದಲ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ದರ ನಿಗದಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿ, ಸಭೆ ಮುಕ್ತಾಯಗೊಳಿಸಿದರು.