News

ದಕ್ಷಿಣ ಭಾರತದಲ್ಲಿ ಉತ್ತಮ ಮಳೆ ಮುನ್ಸೂಚನೆಯಿದ್ದರೆ ಮಧ್ಯಭಾರದಲ್ಲಿ ಸಾಧಾರಣ ಮಳೆ

11 June, 2020 11:41 AM IST By:

ಕೇರಳ ಕಡಲ ತೀರಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದೆ ಎಂದು ಹವಾಮಾನ ಇಲಾಖೆ ಮುಂಗಾರು ಆಗಮನ ಕುರಿತು ದೃಢಪಡಿಸಿದೆ. ಇದರೊಂದಿಗೆ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಮಳೆಯಾಗಲಿದೆ  ಮೋಡ ಕವಿದ ವಾತಾವರಣ ಹಾಗೂ ಮಳೆಯೂ ಪ್ರಾಂಭವಾಗಿದೆ. ಇದರಿಂದಾಗಿ ಬಿಸಿಲಿನಿಂದ ತತ್ತರಿಸಿರುವ ಜನರ ಮೊಗದಲ್ಲಿ ಸಂತಸ ಮೂಡಿದೆ. ರೈತರಲ್ಲಿ ಸಂತಸ ಇಮ್ಮಡಿಯಾಗಿದೆ. ಕೇರಳದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ತಿರುವನಂತಪುರ, ಕೊಲ್ಲಂ, ಎರ್ನಾಕುಳಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ.

ಆದರೆ  ಉತ್ತರ ಭಾರತದ ರಾಜ್ಯಗಳಲ್ಲಿಯೂ ಕಳೆದ ಒಂದು ವಾರದಿಂದ ಹವಾಮಾನ ಬದಲಾವಣೆಯಾಗಿದೆ. ಉತ್ತರ ಭಾರತದ ಎಲ್ಲ ರಾಜ್ಯಗಳಲ್ಲೂ ಮಳೆ ಆಗಮನ ತಡವಾಗಲಿದೆ. ಹೀಗಾಗಿ, ಇನ್ನೂ ಒಂದು ವಾರ ಉತ್ತರ ಭಾರತದ ಹಲವೆಡೆ ಸೂರ್ಯನ ಪ್ರಖರತೆ ಇರಲಿದೆ. ಈ ಬಾರಿಯ ಬೇಸಿಗೆಯಲ್ಲಿ ಉತ್ತರ, ಮಧ್ಯ ಹಾಗೂ ದಕ್ಷಿಣ ಭಾರತ ಕೆಲವು ಭಾಗಗಳಲ್ಲಿ 45 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ರಾಜಸ್ಥಾನದಲ್ಲಂತೂ 50ರ ಗಡಿ ಮುಟ್ಟಿತ್ತು.

ಜೂನ್ ತಿಂಗಳಲ್ಲಿ ಉತ್ತಮ ಮಳೆ ಸುರಿದರೆ ಕೃಷಿ ಚುಟುವಟಿಕೆಗಳು ಆರಂಭವಾಗಲಿವೆ. ಜಾನುವಾರುಗಳ ಮೇವಿಗೂ ಆಧಾರವಾಗಲಿದೆ. ಕರ್ನಾಟಕದ ಬಹುತೇಕ ಕಡೆ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಈ ತಿಂಗಳಲ್ಲಿ ಉತ್ತಮ ಮಳೆ ಸುರಿದರೆ ಕೆರೆ, ಕಟ್ಟೆ ತುಂಬಿ ನೀರಿಗೆ ಮೂಲವಾಗಲಿದೆ.

ಕಳೆದ 24 ಗಂಟೆಗಳಳಲ್ಲಿ ಹೇಗಿತ್ತು ಹವಾಮಾನ

ಕಳೆದ 24 ಗಂಟೆಗಳಲ್ಲಿ  ಗುಜರಾತ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದೆ.ಕೆಲವು ಇಲಾಖೆಗಳಲ್ಲಿ ದಾಖಲೆಯ ಮಳೆಯಾಗಿದೆ. ಪಶ್ಚಿಮಬಂಗಾಳ, ಓರಿಸ್ಸಾದ ಉತ್ತರ ಭಾಗದಲ್ಲಿಯೂ ಸಹ ಮಳೆಯಾದ ವರದಿಯಾಗಿದೆ.