News

ಜೂನ್ 1ಕ್ಕೆ ಕೇರಳ ತಲುಪಲಿದೆ ಮಾನ್ಸೂನ್: 5 ದಿನ ಮುಂಚೆಯೇ ಮುಂಗಾರು ಆರಂಭ

30 May, 2020 1:14 PM IST By:

ದಕ್ಷಿಣ ಕರಾವಳಿ ಭಾಗದಿಂದ ಮುಂಗಾರು ಮಾರುತ ಜೂನ್‌ 1ರಂದು ಭಾರತ ಪ್ರವೇಶಿಸುವ ಸಾಧ್ಯತೆ ಇದೆ ಎಂದು  ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1ರ ವೇಳೆಗೆ ಮಾನ್ಸೂನ್‌ ಮಾರುತಗಳು ಕೇರಳ ತೀರ ಪ್ರವೇಶಿಸಲಿವೆ. ಮೇ 31ರಿಂದ ಜೂನ್‌ 4ರವರೆಗೆ ನೈರುತ್ಯ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ. ಹೀಗಾಗಿ 5 ದಿನ ಮುಂಚಿತವಾಗಿಯೇ ಮಾನ್ಸೂನ್‌ ಮಾರುತಗಳು ಕೇರಳ ತೀರ ಪ್ರವೇಶಿಸಲಿವೆ.  ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯಾಗಿರುವ ದೇಶಕ್ಕೆ ನಾಲ್ಕು ತಿಂಗಳ ಮಳೆಗಾಲದ ಅವಧಿಗೆ ಪ್ರಾಮುಖ್ಯತೆ ಇದೆ.

ಬೇಸಿಗೆಯ ಬಿಸಿಲಿನಿಂದ ಮಳೆಗಾಲಕ್ಕೆ ಹೊರಳುವ ಪೂರಕ ವಾತಾವರಣ 2020ರ ಜೂನ್‌ 1ರಿಂದ ಸೃಷ್ಟಿಯಾಗಲಿದ್ದು, ಕೇರಳ ಕರಾವಳಿಯಿಂದ ಮುಂಗಾರು ಮಾರುತ ಪ್ರವೇಶಿಸಲಿದೆ

ಕೇರಳದಲ್ಲಿ ಜೂನ್‌ 5ರಿಂದ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಭಾರತದ ಅರ್ಧದಷ್ಟು ಕೃಷಿ ಭೂಮಿ ಬೆಳೆಗಾಗಿ ಜೂನ್‌–ಸೆಪ್ಟೆಂಬರ್‌ ಮಳೆಯನ್ನೇ ನೆಚ್ಚಿಕೊಂಡಿದೆ. ಈ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಇಲ್ಲ. ಮಳೆಯಾದರೆ ಭತ್ತ, ಜೋಳ, ಕಬ್ಬು, ಹತ್ತಿ ಹಾಗೂ ಸೋಯಾಬಿನ್‌ ಬೆಳೆಯಲು ಸಾಧ್ಯವಾಗುತ್ತದೆ.ಇದರಿಂದ ಮುಂಗಾರು ಮಳೆ ತರುವ ಮಾನ್ಸೂನ್‌ ಮಾರುತಗಳಗಳ ಚಲನೆ ತಡೆರಹಿತವಾಗಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ಮೀನುಗಾರರಿಗೆ ಎಚ್ಚರಿಕೆ: 

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯುವ ಮೀನುಗಾರರು ಮೇ 29ರಿಂದ ಜೂನ್‌ 4ರವೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.