News

ಮೀನು ಉತ್ಪನ್ನಗಳಿಗೆ ಮಾನ್ಯತೆ ಪಡೆದ ಏಕೈಕ ದಕ್ಷಿಣ ಭಾರತದ ಸಂಸ್ಥೆ ಮಂಗಳೂರಿನ ಮುಕ್ಕಾ ಸೀಫುಡ್

02 October, 2020 7:00 AM IST By:

ಮೀನು ಮತ್ತು ಸಮುದ್ರ ಆಹಾರ ಎಂದರೆ ಯಾರ ಬಾಯಲ್ಲಿ ನೀರೂರುವುದಿಲ್ಲ ಹೇಳಿ. ಮೀನಿನಎಣ್ಣೆ ಮತ್ತು ಮೀನು ಆಹಾರದಲ್ಲಿ ತಾಜಾತನ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಬೇಡಿಕೆ. ಇಂತಹ ಗುಣಮಟ್ಟದ ಮೀನು ಮತ್ತು ಮೀನಿನ ಆಹಾರವನ್ನು ರಫ್ತು ಮಾಡುವದಕ್ಕಾಗಿ ಮಂಗಳೂರಿನ ಮುಕ್ಕಾ ಸೀಫುಡ್ ಸಂಸ್ಥೆಗೆ ಜಾಗತಿಕ ಮನ್ನಣೆ ದೊರೆತಿದೆ. ಈ ಸಂಸ್ಥೆ ರಫ್ತು ಮಾಡುವ ಮೀನು ಮತ್ತು ಶೀತಲಿಕರಿಸಿದ ಹಾಗೂ ಸಂಸ್ಕರಿಸಿದ ಮೀನು ಉತ್ಪನ್ನಗಳನ್ನು ಪರೀಕ್ಷಿಸುವ ರಫ್ತು ಪರೀಕ್ಷಾ ಏಜನ್ಸಿಯಿಂದ ಮಾನ್ಯತೆ ಪಡೆದಿರುವ ಏಕೈಕ ದಕ್ಷಿಣ ಭಾರತದ ಸಂಸ್ಥೆಯಾಗಿದೆ.

ಕರ್ನಾಟಕವು ಮೀನು, ಸಿಗಡಿ, ಏಡಿಗಳು ಮತ್ತು ಕಡಲೇಡಿ ಮುಂತಾದ ಸಮೃದ್ಧ ಸಾಗರ ಸಂಪನ್ಮೂಲಗಳನ್ನು ಹೊಂದಿದೆ. ಈ ಸಾಗರ ಸಂಪತ್ತನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವ ಕಾರ್ಯವನ್ನು ವೃದ್ಧಿಸುವ ಸಲುವಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮುದ್ರ ಆಹಾರ ಪಾರ್ಕನ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಸಿಎಫ್‍ಟಿಆರ್‍ಐ, ಮೈಸೂರು ಕಾಲೇಜ್ ಆಫ್ ಫಿಷರೀಸ್ ಮಂಗಳೂರು ಮತ್ತು ಪಿಐಎಫ್‍ಟಿ ಕೊಚ್ಚಿಯಂತಹ ಸಂಶೋಧನಾ ಸಂಸ್ಥೆಗಳ ಪರಿಣಿತಿಯ ನೆರವನ್ನು ಪಡೆದು ಫಿಷ್‍ಒಪ್ರಿನಿಯರ್ಸ್‍ರವರನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಸಮುದ್ರ ಆಹಾರ ಪಾರ್ಕ್ ಈ ಕೆಳಗಿನ ಸೌಲಭ್ಯಗಳನ್ನು ಹೊಂದಿರುತ್ತದೆ. ಉತ್ತಮವಾಗಿ ಅಭಿವೃದ್ದಿ ಪಡಿಸಲಾದ ನಿವೇಶನಗಳು: ಪೂರ್ವ ಸಂಸ್ಕರಣಾ ಘಟಕಗಳು, ಅಂತರಾಷ್ಟ್ರೀಯ ಮಾನದಂಡಗಳನ್ನು ಹೊಂದಿರುವ ಸಂಸ್ಕರಣಾ ಘಟಕಗಳು, ಐಸ್ ಪ್ಲಾಂಟ್ ಮತ್ತು ಶೀತಲಗೃಹಗಳು, ಘನೀಕೃತ ಸ್ಟೋರೆಜ್, ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ಸಂಸ್ಕರಣಾ ಘಟಕ ಹಾಗೂ ಪ್ಯಾಕೇಜಿಂಗ್ ಯುನಿಟ್‍ಗಳನ್ನು ಸ್ಥಾಪಿಸಲು ವಿದ್ಯುತ್, ನೀರು, ಒಳಚರಂಡಿ, ದೂರಸಂಪರ್ಕ ಇತ್ಯಾದಿ.         

ಕಚೇರಿ ಸ್ಥಳ, ಕಾನ್ಪರೆನ್ಸ್ ಸೌಲಭ್ಯ, ಕ್ಯಾಂಟೀನ್, ಪಾರ್ಕಿಂಗ್, ಅತಿಥಿಗೃಹ, ದೂರಸಂಪರ್ಕ ಸೌಲಭ್ಯ ಗುಣಮಟ್ಟ ಮೇಲ್ವಿಚಾರಣೆ ಪ್ರಯೋಗಾಲಯ, ಪರ್ಯಾಯ ವಿದ್ಯುತ್ ಪೂರೈಕೆ, ನೀರು ಸರಬರಾಜು, ಕಚ್ಚಾ ವಸ್ತುಗಳು ಮತ್ತು ಸಂಸ್ಕರಿಸಿದ ಉತ್ಪನ್ನಗಳಿಗೆ ಸಾಮಾನ್ಯ ಸಂಗ್ರಹ ಸೌಲಭ್ಯಗಳನ್ನು ಒದಗಿಸುವ ಗೋದಾಮು ತ್ಯಾಜ್ಯ ಸಂಸ್ಕರಣಾ ಘಟಕಗಳು ಇತ್ಯಾದಿಗಳನ್ನು ಹೊಂದಿರುವ ಸಾಮಾನ್ಯ ಸೌಲಭ್ಯ ಕೇಂದ್ರ, ಸಮುದ್ರ ಆಹಾರ ಉತ್ಪನ್ನಗಳಿಗೆ ಮೀಸಲಾದ ಆಹಾರ ಪಾರ್ಕನ ಸ್ಥಾಪನೆಯಿಂದ ಮೀನುಗಾರರ ಉತ್ಪನ್ನಗಳ ಮೌಲ್ಯವರ್ಧನೆಗೆ ಆಧುನಿಕ ತಂತ್ರಜ್ಞಾನ ಕೈಗೆಟುವಂತಾಗುತ್ತದೆ. ಇದರಿಂದ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರೆಯುತ್ತದೆ.

ಗ್ರಾಹಕರಿಗೂ ಸಹ ವಿಶ್ವ ದರ್ಜೆಯ ಕಟ್ಟುನಿಟ್ಟಾದ ಮಾನದಂಡಗಳ ಪ್ರಕಾರ ಸಂಸ್ಕರಿಸಿದ ಉತ್ಪನ್ನಗಳು ದೊರಕಲು ಸಹಕಾರಿಯಾಗುತ್ತದೆ. ಆಹಾರ ಪೂರ್ವ ಸಂಸ್ಕರಣಾ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳ ಗುಣಮಟ್ಟಕ್ಕನುಸಾರವಾಗಿ ಮಾಡಲು ಪಾರ್ಕನ್ನು ಸ್ಥಾಪಿಸಲಾಗಿದೆ. ಕೇರಳ ರಫ್ತುದಾರರು, ರಾಜ್ಯ ಸರ್ಕಾರ ವಾಣಿಜ್ಯ ಇಲಾಖೆ, ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ಆಹಾರ ಸಂಸ್ಕರಣಾ ಸಚಿವಾಲಯವು ಒದಗಿಸಿದ ಅನುದಾನ ಸಹಾಯದಿಂದ ಸಾರ್ವಜನಿಕ ಪಾಲುದಾರಿಕೆಯ ಮೂಲಕ ಉದ್ಯಾನವನವು ಬೆಳೆದಿದೆ. ಕೇರಳದಲ್ಲಿ ದೇಶದ ಮೊದಲ ಸಮುದ್ರಾಹಾರ ಉದ್ಯಾನ ಸ್ಥಾಪಿಸಲಾಗಿದೆ. ಈ ಉದ್ಯಾನವು ಪ್ರತ್ಯೇಕವಾದ ಶೇರುದಾರರಿಗೆ ಪ್ರತಿ  10 ಪ್ರತ್ಯೇಕ ಪೂರ್ವ ಸಂಸ್ಕರಣೆ ಘಟಕಗಳನ್ನು ಒಳಗೊಂಡಿದೆ. ಇದು ನೀರಿನ ಸಂಸ್ಕರಣೆ, ಹೊರಹಾಕುವ ವಿಲೇವಾರಿ, ವಿದ್ಯತ್, ಮಳೆನೀರು ಕೊಯ್ಲು ಮತ್ತು ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ಮುಂತಾದ ಸಾಮಾನ್ಯ ಸೌಲಭ್ಯಗಳನ್ನು ಹೊಂದಿದೆ. ಯುರೋಪಿಯನ್ ಯುನಿಯನ್ ಹಾಗೂ ಯುಎಸ್ ಫುಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮಾನಡಂಡಗಳ ಪ್ರಕಾರ ಉದ್ಯಮದ ಪೂರ್ವ ಸಂಸ್ಕರಣಾ ಸೌಲಭ್ಯಗಳನ್ನು ನವೀಕರಿಸುವಲ್ಲಿ ಇದು ವಾಣಿಜ್ಯ ಇಲಾಖೆಯ  ಮೊದಲ ಪ್ರಯತ್ನವಾಗಿದೆ. ರಫ್ತುದಾರರು ಬಂಡವಾಳದ 74%ರಷ್ಟು ಕೊಡುಗೆ ನೀಡಿದ್ದಾರೆ. ಮಂಗಳೂರಿನ ಸಮುದ್ರ ಆಹಾರ ಉದ್ಯಾನವನ್ನು ಸ್ಥಾಪಿಸುವ ಮೂಲಕ ಕಡಲ ಆಹಾರ ರಫ್ತುಗಳನ್ನು ಹೆಚ್ಚಿಸಲು ಕರ್ನಾಟಕ  ರಾಜ್ಯ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮಂಗಳೂರು-ಉಡುಪಿ ಕರಾವಳಿಯಲ್ಲಿ ಸಮುದ್ರ ಆಹಾರ ಉದ್ಯಾನವನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದಾರೆ.

ಇದು 30 ಎಕರೆ ಪ್ರದೇಶವನ್ನು ವ್ಯಾಪಿಸಿದೆ ಮತ್ತು ಅದು 20ಮೀನು ಸಂಸ್ಕರಣೆ ಘಟಕಗಳನ್ನು ನಿರ್ಮಿಸುತ್ತದೆ. ಯೋಜನೆಯ ವೆಚ್ಚ ರೂ.120 ಕೋಟಿ ಎಂದು ಅಂದಾಜಿಸಲಾಗಿದೆ. ಈಗಾಗಲೆ ಮಂಗಳೂರು ಉಡುಪಿ ಪ್ರದೇಶವು ಎಸ್‍ಇಝೆಡ್‍ಗಳಿಂದ ಲೋಡ್ ಆಗುತ್ತಿದೆ. ಮೀನುಗಾರಿಕೆ ಇಲಾಖೆ ನೀಡಿದ ಪರಿಕಲ್ಪನೆಯ ಪ್ರಕಾರ ಕರ್ನಾಟಕದಲ್ಲಿ ಸುಮಾರು 18ಮೀನು ಸಂಸ್ಕರಣೆ ಘಟಕಗಳಿವೆ. ರಾಷ್ಟ್ರೀಯ ಸಾಗರ ಉತ್ಪಾದನೆಯ 10%ರಷ್ಟು ಕರ್ನಾಟಕವನ್ನು ಹೊಂದಿದ್ದರೂ, ದೇಶದಿಂದ ರಫ್ತು ಮಾಡಲ್ಪಟ್ಟ ಒಟ್ಟು ಸಮುದ್ರದ ಮೀನು ಉತ್ಪನ್ನಗಳ ಪೈಕಿ ಸುಮಾರು 4%ರಷ್ಟು ಇದು ಕೊಡುಗೆ ನೀಡುತ್ತದೆ. ಮೌಲ್ಯೀಕೃತ ಮೀನು ಉತ್ಪನ್ನಗಳ ಉತ್ಪಾದನೆಗೆ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸುವ ಎರಡೂ ದೇಶಿಯ ಮೀನು ಮಾರುಕಟ್ಟೆಗಳಿಗೆ ಹೂಡಿಕೆದಾರರ ಗಮನಕ್ಕೆ ಒಂದು ಪ್ರಮುಖ ಪ್ರದೇಶವಾಗಿದೆ. ಈ ನಿಟ್ಟಿನಲ್ಲಿ ಮೀನುಗಾರರು ಚಿಂತಿಸಿ, ಉತ್ತಮ ಮಾರಾಟ ಪದ್ಧತಿಗಳ ಮೂಲಕ ಮಾರಾಟ ಮಾಡಿ, ಅಧಿಕ ಲಾಭ ಗಳಿಸುವಂತಾಗಲಿ ಎಂಬುದು ನಮ್ಮ ಆಶಯ.

ಲೇಖಕರು: ಶಗುಪ್ತಾ ಅ ಶೇಖ