News

ಮಂಡ್ಯದ ವಿ.ಸಿ. ಫಾರಂನಲ್ಲಿ ಕೃಷಿ ಮೇಳ ಆಯೋಜನೆ

03 December, 2022 3:41 PM IST By: Kalmesh T

ಮಂಡ್ಯದ ವಿ.ಸಿ. ಫಾರಂನ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಡಿಸೆಂಬರ್ 2 ಹಾಗೂ 3 ರಂದು ಕೃಷಿ ಮೇಳ ಆಯೋಜನೆ ಮಾಡಲಾಗಿದೆ.

ಸರ್ಕಾರದಿಂದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಕೈಗಾರಿಕೆಗಳಿಗೆ 1 ಲಕ್ಷ ಕೋಟಿ ಮೂಲಸೌಕರ್ಯ ನಿಧಿ!

ರೈತರಿಗೆ ಹೊಸ ತಂತ್ರಜ್ಞಾನ ಹಾಗೂ ತಳಿಗಳ ಮಾಹಿತಿ ನೀಡಲಾಗುತ್ತಿದೆ. ಬೆಂಕಿ ರೋಗ ತಡೆಗಟ್ಟಿ ಕಡಿಮೆ ಅವಧಿಯಲ್ಲಿ ಉತ್ತಮವಾಗಿ ಬೆಳೆಯುವ KMP - 225 ಭತ್ತದ ಸುಧಾರಿತ ತಳಿಯನ್ನು ಬಿಡುಗಡೆ ಮಾಡಲಾಗಿದೆ.

ಈ ರೀತಿಯ ಹೊಸ ತಳಿಗಳ ಪರಿಚಯ ಹಾಗೂ ಪ್ರಾತ್ಯಕ್ಷಿಕೆಗಳು ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಿವೆ. ವಿ.ಸಿ.ಫಾರಂನಲ್ಲಿ 17 ಸಾವಿರಕ್ಕೂ ಹೆಚ್ಚಿನ ತಳಿಗಳಿವೆ.

ರೈತರಿಂದ ಬೇಡಿಕೆ ಇರುವ 100-150 ತಳಿಗಳನ್ನು ಸಂತತಿ ನಾಶವಾಗದಂತೆ ಉಳಿಸಿಕೊಳ್ಳಲಾಗಿದೆ. 

ಅವುಗಳನ್ನು ಸಹ ಕೃಷಿ ಮೇಳದಲ್ಲಿ ನೋಡಬಹುದು. ಇದೇ ವೇಳೆ ಕೃಷಿ ಮೇಳದ ಲಾಂಛನ ಬಿಡುಗಡೆ ಮಾಡಲಾಯಿತು.

ಮುಖ್ಯಸ್ಥ ಡಾ. ಎಸ್. ಎಸ್. ಪ್ರಕಾಶ್, ಕೃಷಿ ಮಹಾವಿದ್ಯಾಲಯದ ವಿಸ್ತೀರ್ಣ ವಿಭಾಗದ ಮುಖ್ಯಸ್ಥರಾದ ಡಾ. ರಂಗನಾಥ್, ಸಹ ವಿಸ್ತಾರಣಾ ನಿರ್ದೇಶಕ ಡಾ. ಡಿ. ರಘುಪತಿ ಮುಂತಾದವರು ಉಪಸ್ಥಿತರಿದ್ದರು