News

ಮಹೀಂದ್ರಾ ಟ್ರ್ಯಾಕ್ಟರ್ಸ್‌ ತೆಕ್ಕೆಗೆ ‘Millionaire Farmer of India Awards 2023’ ಶೀರ್ಷಿಕೆ ಪ್ರಾಯೋಜಕತ್ವ!

14 November, 2023 1:41 PM IST By: Maltesh

ಉತ್ಕೃಷ್ಟ ಶ್ರೇಣಿಯಲ್ಲಿ ʻಮಹೀಂದ್ರಾ ಟ್ರ್ಯಾಕ್ಟರ್ಸ್‌ʼ

ಮಹೀಂದ್ರಾ ಟ್ರ್ಯಾಕ್ಟರ್ಸ್‌ ತೆಕ್ಕೆಗೆ ‘Millionaire Farmer of India Awards 2023’ ಶೀರ್ಷಿಕೆ ಪ್ರಾಯೋಜಕತ್ವ!

ಭಾರತದ ಪ್ರಮುಖ ಕೃಷಿ-ಮಾಧ್ಯಮ ಸಂಸ್ಥೆ, ಕೃಷಿ ಜಾಗರಣ (Krishi Jagran) ತನ್ನ ಮಹತ್ವಾಕಾಂಕ್ಷೆಯ MFOI 2023 ಕುರಿತು ದೊಡ್ಡ ಘೋಷಣೆಯೊಂದನ್ನು ತಮ್ಮ ಜೊತೆ ಹಂಚಿಕೊಳ್ಳಲು ಹಂಚಿಕೊಳ್ಳಲು ಖುಷಿಯಾಗುತ್ತದೆ. ಹೌದು ಭಾರತದ ನಂಬರ್ ಒನ್ ಟ್ರಾಕ್ಟರ್ ಬ್ರಾಂಡ್ ʻಮಹೀಂದ್ರಾ ಟ್ರಾಕ್ಟರ್ಸ್ʼ - 'ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023' ಗಾಗಿ (MFOI 2023) ಶೀರ್ಷಿಕೆ ಪ್ರಾಯೋಜಕರಾಗಿ ಹೊರಹೊಮ್ಮಿದೆ.

ಹೌದು ರಾಷ್ಟ್ರ ರಾಜಧಾನಿ ನವದೆಹಲಿಯ ಹೃದಯಭಾಗದಲ್ಲಿರುವ ಪುಸಾ ಮೈದಾನದಲ್ಲಿ ಡಿಸೆಂಬರ್ 6 ರಿಂದ ಡಿಸೆಂಬರ್ 8,ರವರೆಗೆ 'ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023' (MFOI 2023) ನಡೆಯಲು ನಿರ್ಧರಿಸಲಾಗಿದೆ. ಮೂರು ದಿನಗಳ ಈ ಸಮಾರಂಭದಲ್ಲಿ ಪ್ರಶಸ್ತಿ ಸಮಾರಂಭಗಳು, ಪ್ರದರ್ಶನಗಳು, ವ್ಯಾಪಾರ ಅವಕಾಶಗಳು ಮತ್ತು ಕೃಷಿ ಸೆಮಿನಾರ್‌ಗಳ ಪರಿಪೂರ್ಣವಾಗಿ ರೈತರಿಗೆ, ಉದ್ಯಮಿಗಳಿಗೆ, ಕೃಷಿ ಉಪಕರಣಗಳ ತಯಾರಕರಿಗೆ ಸೇರಿದಂತೆ ಎಲ್ಲರಿಗೂ ಉಪಯುಕ್ತವಾಗುವಂತೆ ಇದನ್ನು ರೂಪಿಸಲಾಗಿದೆ.

ಮಹೀಂದ್ರಾ ಟ್ರಾಕ್ಟರ್ಸ್ ಹಾಗೂ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಅವಾರ್ಡ್ಸ್ 2023 - ರೈತರ ಆದಾಯವನ್ನು ದ್ವಿಗುಣಗೊಳಿಸಿದ್ದು ಮಾತ್ರವಲ್ಲದೆ, ತಮ್ಮ ಅವಿರತ ಪ್ರಯತ್ನಗಳ ಮೂಲಕ ಮಿಲಿಯನೇರ್‌ಗಳಾಗಿ ವಿಕಸನಗೊಂಡ ಭಾರತೀಯ ರೈತರ ಅಸಾಧಾರಣ ಸಾಧನೆಗಳನ್ನು ಗುರುತಿಸಲು  MFOI 2023 ಮೂಲಕ ಪ್ರಯತ್ನಿಸುತ್ತದೆ.

ಮಹೀಂದ್ರಾ ಟ್ರ್ಯಾಕ್ಟರ್ಸ್‌ MFOI ಪ್ರಶಸ್ತಿಗಳು 2023 ಭಾರತದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ನಿಜವಾದ ಸಾಧಕರನ್ನು ಗುರುತಿಸಲು, ಗೌರವಿಸಲು ಮತ್ತು ಶ್ರೀಮಂತ ಮತ್ತು ಪ್ರಗತಿಪರ ರೈತರೊಂದಿಗೆ ಕೆಲವು ಉನ್ನತ ಕಾರ್ಪೊರೇಟ್‌ಗಳನ್ನು ಒಂದೇ ಸೂರಿನಡಿ ತರುವ ಕೆಲಸ ಮಾಡುತ್ತಿದೆ. ಜಗತ್ತಿನ ಜೀವಿಗಳಿಗೆ ಅನ್ನ ನೀಡೋ ಕೈ ಗಳಿಗೆ ಗೌರವಿಸೋ ಈ ಮಹೋನ್ನತ ಕಾರ್ಯವನ್ನು ಮೆಚ್ಚಿ ಮಹೀಂದ್ರಾ ಟ್ರ್ಯಾಕ್ಟರ್ಸ್‌ MFOI 2023ಯ ಶೀರ್ಷಿಕೆ ಪ್ರಾಯೋಜಕತ್ವವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ.

MFOI ನಾಮಿನೇಷನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

“ನಮ್ಮ MFOI 2023 ಶೀರ್ಷಿಕೆ ಪ್ರಾಯೋಜಕರಾಗಿ ಮಹೀಂದ್ರಾ ಟ್ರ್ಯಾಕ್ಟರ್ಸ್‌ ಬ್ರ್ಯಾಂಡ್‌ನ್ನು ಹೊಂದಲು ನಮಗೆ ತುಂಬು ಹೃದಯದ ಸಂತಸ ಹಾಗೂ ಗೌರವವಿದೆ. ದೇಶದ ನಂಬರ್‌ ಒನ್‌ ರೈತ ಸ್ನೇಹಿ ಬ್ರ್ಯಾಂಡ್‌ ನಮ್ಮ ಜೊತೆಗೂಡಲು ಇದಕ್ಕಿಂತ ಇನ್ನೇನು ಬೇಕು? 27 ವರ್ಷಗಳ ಹಿಂದೆ ಕಂಡಂತ ಕನಸು ಈ MFOI. ಅಂದು ಇದು ಒಂದು ಕನಸಾಗಿತ್ತು ಅಷ್ಟೇ,  ಆಗ ನನಗೆ MFOI ನ್ನು ಯಶಸ್ವಿಗೊಳಿಸಿ ಅನ್ನ ನೀಡೋ ಕೈಗಳಿಗೆ ಸನ್ಮಾನ ಮಾಡಲು  ನಿಷ್ಠಾವಂತ ಮತ್ತು ನಂಬಲರ್ಹವಾದವರು ನನ್ನ ಜೊತೆಗೂಡಿ ಹೆಜ್ಜೆ ಹಾಕುವವರು ಬೇಕಾಗಿದ್ದಾರೆ ಎಂದು ನಾನು ಭಾವಿಸಿದೆ. ಅದರಂತೆಯೇ ಇಂದು ನನ್ನ ಹಾಗೂ ನಮ್ಮ MFOI 2023 ತಂಡದ ಜೊತೆಗೆ ಜಗತ್ತಿನ ವಿಶ್ವಾಸಾರ್ಹ ಬ್ರಾಂಡ್‌ ಜೊತೆಯಾಗಿ ನಿಂತಿರುವುದು ಅತೀವ ಸಂತೋಷವನ್ನು ನೀಡುತ್ತಿದೆ.ʼʼ- M C ಡೊಮಿನಿಕ್, ಸಂಸ್ಥಾಪಕರು, ಪ್ರಧಾನ ಸಂಪಾದಕ, ಕೃಷಿ ಜಾಗರಣ ಮತ್ತು ಅಗ್ರಿಕಲ್ಚರ್ ವರ್ಲ್ಡ್

ಕೃಷಿ ಜಾಗರಣ ವ್ಯವಸ್ಥಾಪಕ ನಿರ್ದೇಶಕಿ ಶೈನಿ ಡೊಮಿನಿಕ್ ಮಾತನಾಡುತ್ತಾ,  ಈ MFOI ಎಂಬ ಕನಸನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ʻʻಅಕ್ಕಸಾಲಿಗರು ಮಾತ್ರ ನಿಜವಾದ ರತ್ನವನ್ನು ಗುರುತಿಸುವ ಕಣ್ಣನ್ನು ಹೊಂದಿರುತ್ತಾರೆʼʼ ಎನ್ನುತ್ತಾರೆ. ಇನ್ನು ಮಹೀಂದ್ರಾ ಟ್ರಾಕ್ಟರ್ಸ್‌ ಜೊತೆಗಿನ  MFOI ಅವಾರ್ಡ್ಸ್ 2023 ಈ ಪಯಣ  ಭಾರತೀಯ ಕೃಷಿ  ವಲಯದಲ್ಲಿಯ ಆಸ್ಕರ್ ಆಗುವ ಹಾದಿಯಲ್ಲಿದೆ ಎಂದರೇ ಅತಿಶಯೋಕ್ತಿ ಎನಿಸಲಾರದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ