News

ಈ ಗ್ರಾಮದ ನಿವಾಸಿಗಳು ಇಂದಿಗೂ ಹಾಲನ್ನು (Milk) ಉಚಿತವಾಗಿ ವಿತರಿಸುತ್ತಾರೆ

14 August, 2020 10:26 AM IST By:

ನಮಗೇ ಕಾಫಿ, ಟೀಗೆ ಹಾಲು (Milk) ಬೇಕು. ಮಕ್ಕಳಿಗೂ ಪೌಷ್ಠಿಕ ಆಹಾರವಿದು. ಹೈನುಗಾರಿಕೆ ಈಗ ಬಹುತೇಕ ಗ್ರಾಮೀಣ ಕುಟುಂಬಗಳ ಆದಾಯದ ಮೂಲವೂ ಹೌದು. ಹಾಲಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಹೆಚ್ಚು ಆದಾಯ ಮಾಡಿಕೊಳ್ಳಲು ಯುವಕರು ಹೈನುಗಾರಿಕೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹೀಗಿರುವಾಗ ಇಲ್ಲೊಂದು  ಗ್ರಾಮದಲ್ಲಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಉಚಿತವಾಗಿ ಹಂಚುವುದು ವಿಶೇಷತೆಯಿದೆ.

ಈ ಗ್ರಾಮದ ಜನರು ಹಾಲು ಮಾರಾಟ ಮಾಡುವುದಿಲ್ಲ, ಅಗತ್ಯವಿರುವವರಿಗೆ ಉಚಿತವಾಗಿ ವಿತರಣೆ ಮಾಡುತ್ತಾರೆ.  ಇದು ಒಂದೆರೆಡು ದಿನವಲ್ಲ.  ಅವರು ಪರಂಪರೆಯಿಂದ ಉಚಿತವಾಗಿ ಹಾಲು ವಿತರಿಸುತ್ತಾ ಬಂದಿದ್ದಾರೆ. ಇದರ ವಿಶೇಷವೇನೆಂದುಕೊಂಡಿದ್ದೀರಾ... ಹಾಗಾದರೆ ಈ ಕೆಳಗಿನ ಮಾಹಿತಿ ಓದಿ.

ಮಹಾರಾಷ್ಟ್ರದ (Maharastra) ಹಿಂಗೋಲಿ ಜಿಲ್ಲೆಯಲ್ಲಿರುವ ಎಲೆಗೌಂವ್ ಗೌಳಿ ಗ್ರಾಮದ (Yelegaon Gawali Village)  ಜನರು ತಮ್ಮನ್ನು ತಾವು ಶ್ರೀಕೃಷ್ಣನ ವಂಶಸ್ಥರು ಎಂದು ಕರೆದುಕೊಳ್ಳುತ್ತಾರೆ ಮತ್ತು ಅವರು  ಹಾಲು ಮಾರಾಟ ಮಾಡುವುದಿಲ್ಲ (does not sell) ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ವಿತರಣೆ (Free of cost distribute) ಮಾಡುತ್ತಾರಂತೆ.. ವಿಶೇಷವೆಂದರೆ ಈ ಗ್ರಾಮದ ಪ್ರತಿ ಮನೆಯಲ್ಲಿಯೂ ಕೂಡ ಹೈನು ನೀಡುವ ಹಸು, ಎಮ್ಮೆ ಹಾಗೂ ಮೇಕೆಗಳಿವೆ.

ಕೃಷ್ಣನೇ ಕುಲದೈವ! (Lord Krishna):


ಈ ಗ್ರಾಮದಲ್ಲೊಂದು ಕೃಷ್ಣನ ದೇವಾಲಯವಿದೆ. ಇಲ್ಲಿ ಪ್ರತಿ ವರ್ಷ ಕೃಷ್ಣಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 550 ಕುಟುಂಬಗಳು ಈ ಗ್ರಾಮದಲ್ಲಿ ವಾಸವಾಗಿದ್ದು ಗೌಳಿಗರೇ ಹೆಚ್ಚಿನ ಸಂಖ್ಯೆಯಲಿದ್ದಾರೆ. ವಿವಿಧ ಧರ್ಮಗಳ ಜನರೂ ನೆಲೆಸಿದ್ದಾರೆ. ಅವರು ಕೂಡ ತಮ್ಮ ಮನೆಯ ಹಾಲನ್ನು ಹಣಕ್ಕೆ ಮಾರಿಕೊಳ್ಳುವುದಿಲ್ಲ. ''ಈ ಗ್ರಾಮದ ಮೂಲ ನಿವಾಸಿಗರು ಕೃಷ್ಣನ ವಂಶಸ್ಥರು. ಹೀಗಾಗಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಹಣಕ್ಕೆ ಮಾರುವುದಿಲ್ಲವೆಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

ತಲೆತಲಾಂತರದ ಸಂಪ್ರದಾಯ (Tradition):


ಲೀಟರ್‌ಗಟ್ಟಲೆ ಸಂಗ್ರಹವಾದರೂ ಉಚಿತವಾಗಿಯೇ ಪೂರೈಕೆ ಮಾಡಲಾಗುತ್ತದೆ. ಹಾಲಿನ ಉತ್ಪನ್ನಗಳಿಗೂ ನಯಾಪೈಸೆ ಪಡೆಯಲ್ಲ ಇದು ಗ್ರಾಮದಲ್ಲಿ ತಲೆಮಾರುಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.