News

ಒಣಬೇಸಾಯದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಮಹಾದೇವ

29 December, 2023 4:36 PM IST By: Hitesh
ಯುವ ರೈತ ಮಹಾದೇವ ದಂಡೋತಿಕರ್

ಕಲಬುರ್ಗಿ ಜಿಲ್ಲೆಯ ಶಾಹಬಾದ ತಾಲ್ಲೂಕಿನ ಜೀವಣಿಗಿಯ ಯುವ ರೈತ ಮಹಾದೇವ ದಂಡೋತಿಕರ್ ಅವರು ಒಣಬೇಸಾಯದಲ್ಲಿಯೂ ಯಶಸ್ಸು ಸಾಧಿಸಿದ್ದಾರೆ.

ರೈತ ಮಹಾದೇವ ದಂಡೋತಿಕರ್ ಅವರು  ಕೃಷಿಯೊಂದಿಗೆ ಉಪಕಸುಬಿನಲ್ಲೂ ತೊಡಗಿಸಿಕೊಂಡಿದ್ದಾರೆ.

ಒಣಭೂಮಿಯಲ್ಲೂ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಒಣಬೇಸಾಯದ ಮೂಲಕವೇ ಕಲಬುರ್ಗಿ ಜಿಲ್ಲೆಯ ಶಾಹಬಾದ ತಾಲ್ಲೂಕಿನ ಜೀವಣಿಗಿಯ

ಯುವ ರೈತ ಮಹಾದೇವ ದಂಡೋತಿಕರ್ ಅವರು ಯಶಸ್ಸು ಸಾಧಿಸುತ್ತಿದ್ದಾರೆ.

ಯುವಕರು ಇಂದಿನ ದಿನದಲ್ಲಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.

ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತಿಲ್ಲ ಎನ್ನುವುದು ಬಹುತೇಕ

ಯುವಕರ ಮಾತಾಗಿದೆ. ಆದರೆ, ಮಹಾದೇವ ದಂಡೋತಿಕರ್ ಅವರು ಇರುವ ನಾಲ್ಕೂವರೆ ಎಕರೆ ವ್ಯಾಪ್ತಿಯಲ್ಲಿ ಕೃಷಿ

ಮಾಡುತ್ತಿದ್ದು, ಒಣಬೇಸಾಯದಲ್ಲಿ ಯಶಸ್ಸು ಸಾಧಿಸಿದ್ದಾರೆ. 

ನೀರಾವರಿ ಇಲ್ಲದೆ ಒಣಬೇಸಾಯವನ್ನೇ ನಂಬಿಕೊಂಡಿದ್ದರೂ  ಮಹಾದೇವ ಅವರು

ಮಳೆಯಾಗುವ ಸಂದರ್ಭದಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಿದ್ದಾರೆ.  

ಕಾಳು, ಬೆಳೆಗಳ ಮೂಲಕ ಲಾಭ

ಮಹಾದೇವ ಅವರು ಒಣಬೇಸಾಯವನ್ನೇ ನೆಚ್ಚಿಕೊಂಡಿದ್ದು, ಕಾಳುಗಳನ್ನು ಬೆಳೆಯುವ ಮೂಲಕ ಲಾಭ ಗಳಿಸುತ್ತಿದ್ದಾರೆ.

ಮಹಾದೇವ ದಂಡೋತಿಕರ್ ಅವರು ಕಲಬುರ್ಗಿ ಜಿಲ್ಲೆಯ ಶಾಹಬಾದ ತಾಲ್ಲೂಕಿನ ಜೀವಣಿಗಿ ಎನ್ನುವ ಸಣ್ಣ ಹಳ್ಳಿಯಲ್ಲಿರುವ ನಾಲ್ಕೂವರೆ

ಎಕರೆ ವ್ಯಾಪ್ತಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಾದೇವ ಅವರು 10ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.  

ಕೃಷಿಯ ಬಗ್ಗೆ ಅವರು ಹೇಳುವುದು ಹೀಗೆ, “ನಾನು ಇರುವ ನಾಲ್ಕೂವರೆ ಎಕರೆ ವ್ಯಾಪ್ತಿಯಲ್ಲಿ ಒಣಬೇಸಾಯ ಪದ್ಧತಿಯಲ್ಲಿ ತೊಡಗಿಸಿಕೊಂಡಿದ್ದೀನಿ.  

ಕೃಷಿಯಲ್ಲಿ ಜೋಳ, ತೋಗರಿ, ಉದ್ದು, ಹೆಸರುಕಾಳು, ಹತ್ತಿ ಬೆಳೆಗಳನ್ನು ಬೆಳಯುತ್ತಿದ್ದೇವೆ. ಯಾವುದೇ ನೀರಾವರಿ ಇಲ್ಲ.

ಒಣಬೇಸಾಯದಲ್ಲಿ  ತೊಗರಿ, ಹತ್ತಿ, ಜೋಳ, ಹೆಸರು, ಉದ್ದು, ಅಲಸಂದೆ ಹಾಗೂ ಕಡ್ಲೆ ಕಾಳು ಬೆಳೆಗಳನ್ನು ಬೆಳೆದುಕೊಳ್ಳಬಹುದು.

ಈ ಬೆಳೆಗಳನ್ನು ಆದ್ಯತೆಯ ಮೇಲೆ ಬೆಳೆಯುತ್ತಿದ್ದೇವೆ ಎನ್ನುತ್ತಾರೆ.

ಜೋಳದಿಂದ ಲಾಭ

ಈಚೆಗೆ ಎರಡು ಬೆಳೆಗಳನ್ನು ಬೆಳೆದ ಮಹಾದೇವ ಅವರು ಜೋಳ ಬೆಳೆಯನ್ನು ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸಿದ್ದಾರೆ.

ಒಣಬೇಸಾಯದ ಪದ್ಧತಿಯಲ್ಲಿ ಹೆಸರು, ಉದ್ದು ಬೆಳೆಯಲಾಗಿತ್ತು. ಅದಲ್ಲದೇ ಜೋಳವನ್ನು ಸಹ ಬೆಳೆಯಲಾಗಿತ್ತು.

ಜೋಳದ ಬೆಳೆಯು ಬರೋಬ್ಬರಿ 57 ಮೂಟೆಗೂ ಹೆಚ್ಚಾಗಿ ಸಿಕ್ಕಿತ್ತು.

ಇದರಿಂದ ಮೂರುವರೆ ಲಕ್ಷ ರೂಪಾಯಿ ಆದಾಯ ಬಂದಿತ್ತು ಎಂದು ಯಶಸ್ಸಿನ ಸಂತಸ ಹಂಚಿಕೊಳ್ಳುತ್ತಾರೆ.

ಮುಂಗಾರಿನಲ್ಲಿ ಹೆಸರು, ಉದ್ದು, ಅಲಸಂದೆ ಬೆಳೆಗಳನ್ನು ಬೆಳೆಯುತ್ತೀನಿ.

ಉತ್ರಿ ಮಳೆಯಲ್ಲಿ ಜೋಳವನ್ನು ಬೆಳೆಯಲಾಗುತ್ತದೆ. ಜೂನ್‌ನಿಂದ ಡಿಸೆಂಬರ್‌ ವರೆಗೆ ಎರಡು ಬೆಳೆಗಳನ್ನು ಬೆಳೆದುಕೊಳ್ಳುತ್ತೀವಿ.

ತೊಗರಿ ಆರು ತಿಂಗಳ ಬೆಳೆಯಾಗಿದ್ದು, ವರ್ಷದಲ್ಲಿ ಒಮ್ಮೆ ಬೆಳೆದರೆ ಆಗುತ್ತದೆ.

ನೀರಾವರಿ ಇದ್ದರೆ ಎರಡು ಫಸಲು ಬೆಳೆಯಬಹುದು ಎನ್ನುತ್ತಾರೆ ಅವರು.  

ಒಣಭೂಮಿಯಲ್ಲೂ ಹಲವು ಮಾದರಿ

ಒಣಭೂಮಿಯಲ್ಲೂ ಹಲವು ಭಿನ್ನವಾದ ಮಾದರಿಗಳಿವೆ. ಅವುಗಳಲ್ಲಿ ಕೆಲವು ಅಲ್ಪ ಪ್ರಮಾಣದಲ್ಲಿ ನೀರು ಸಿಕ್ಕರೂ ಉತ್ತಮ ಇಳುವರಿ ನೀಡುತ್ತವೆ.

ಇನ್ನೂ ಕೆಲವು ಕಡೆಗಳಲ್ಲಿ ಹೆಚ್ಚು ನೀರು ಬಳಸಬೇಕು ಹೆಚ್ಚು ನೀರು ಬಳಸಿದರೂ, ಕೆಲವೊಮ್ಮೆ ಇಳುವರಿ ಕೊಡುವ ಸಾಧ್ಯತೆ ಇದೆ.

ಹೀಗಾಗಿ, ಆಯಾ ಭೂಮಿಯ ಅನುಗುಣಕ್ಕೆ ತಕ್ಕಂತೆ ವ್ಯವಸಾಯ ಮಾಡಬೇಕು.

ವ್ಯವಸಾಯ ಮಾಡುವ ಸಂದರ್ಭದಲ್ಲಿ ಇದು ಗಮನಕ್ಕೆ ಬರುತ್ತದೆ.

ಆಗ ನಾವು ಬದಲಾವಣೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಮಹಾದೇವ. 

ಉಪಕಸುಬು ಮೂಲಕವೂ ಆದಾಯ

ಮಹಾದೇವ ಅವರು ಉಪಕಸುಬಿನ ಮೂಲಕವೂ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಹೌದು ಅವರು ಕೃಷಿಯೊಂದಿಗೆ ಅವರ ಫ್ಯಾಷನ್‌ ಹಾಗೂ ಉಪಕಸುಬನ್ನೂ ಮುಂದುವರಿಸುತ್ತಿದ್ದಾರೆ.

ಮನೆಗಳನ್ನು ಕಟ್ಟುವುದು, ಪ್ಲಾಸ್ಟರಿಂಗ್‌ ಮಾಡುವುದರಲ್ಲಿಯೂ ಅವರು ತೊಡಗಿಸಿಕೊಂಡಿದ್ದು, ಈ ಮೂಲಕವೂ ಆದಾಯ ಗಳಿಸುತ್ತಿದ್ದಾರೆ.