News

MSD ಹೊಸ ಇನ್ನಿಂಗ್ಸ್‌: ರೈತರಿಗೆ ಬೆನ್ನೆಲುಬಾಗಿ ನಿಂತ ಕ್ಯಾಪ್ಟನ್‌ ಕೂಲ್‌ ಧೋನಿ

08 June, 2022 9:35 AM IST By: Maltesh
M S Dhoni invests in drone startup Garuda Aerospace

ಮಹೇಂದ್ರ ಸಿಂಗ್‌ ಧೋನಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ಹೆಲಿಕಾಪ್ಟರ್‌ ಶಾಟ್‌ನಿಂದ್‌ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಧೋನಿ ಎಂಬ ಹೆಸರು ಅಷ್ಟು ಜನಪ್ರಿಯಗೊಂಡಿದೆ.ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni),  ಕ್ರಿಕೆಟ್‌ ನ ಕೂಲ್‌ ಕ್ಯಾಪ್ಟನ್‌ ಎಂದೇ ಪ್ರಸಿದ್ಧಿ ಪಡೆದವರು.  ಸದ್ಯ ಕೆಲವು ದಿನಗಳ ಹಿಂದೆ ಐಪಿಎಲ್ ಸೀಸನ್ ಮುಗಿದಿದಿಎ. ಆದರೆ ಇದೀಗ ಧೋನಿ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ರೈತರಿಗೆ ಸಂಬಂಧಿಸಿದ ವಿಚಾರದಲ್ಲಿ

ಅರೇ ಧೋನಿ ಕ್ರಿಕೆಟ್‌ ಬಿಟ್ಟು ನೇಗಿಲು ಹಿಡಿದ್ರಾ ಎಂದು ನೀವು ಗೊಂದಲಿಕ್ಕೀಡಾದರೆ ಈ ಲೇಖನವನ್ನು ನೀವು ಪೂರ್ಣವಾಗಿ ಓದಲೇಬೇಕು. ಯೆಸ್‌ ಮಹೇಂದ್ರ ಸಿಂಗ್‌ ಧೋನಿ ರೈತರಿಗೆ ಅನಕೂಲವಾಗುವ ಕೃಷಿ ಡ್ರೋನ್‌ ಕಂಪನಿಯೊಂದರಲ್ಲಿ ಶೇರು ಖರೀದಿಸಿದ್ದಾರೆ ಎಂದು ವರದಿಗಳಾಗಿವೆ.

ರೈತರಿಗೆ ಬೆನ್ನೆಲುಬಾಗಿ ನಿಂತ ಮಾಹಿ..

ಪ್ರಸ್ತುತ ಘಟ್ಟದಲ್ಲಿ ವಿಭಿನ್ನವಾಗಿ ದೇಶದ ಕೋಟ್ಯಾಂತರ ಜನ ರೈತರಿಗೆ ಸಹಾಯ ಮಾಡಲು ನಿಂತ ಕ್ಯಾಪ್ಟನ್‌ ಕೂಲ್‌, ಸದ್ಯ ಮಹತ್ವದ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇಂಡಿಯನ್​ ಗರುಡ ಡ್ರೋನ್ ಕಂಪನಿಯಲ್ಲಿ ಶೇರ್​ ಖರೀದಿಸಿರುವ ಮಾಹಿ, ರೈತರಿಗೆ ನೆರವಾಗಲು ನಿರ್ಧಾರ ಕೈಗೊಂಡಿದ್ದಾರೆ.

ಇತ್ತೀಚಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆತಯನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಕೈಗೊಂಡಿದೆ. ಅದಕ್ಕೆ ಅನುಗುಣವಾಗಿ ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಕಂಪನಿಗಳು ರೈತರಿಗೆ ನೆರತವಾಗುವ ಡ್ರೋನ್‌ಗಳನ್ನು ನಿರ್ಮಾಣ ಮಾಡುತ್ತಿವೆ.ಸದ್ಯ ಧೋನಿ ಗರುಡ ಕಂಪನಿಯ ಡ್ರೋನ್​ಗಳಲ್ಲಿ ಶೇರು ಖರೀದಿಸಿದ್ದಾರೆ. ಇದರ ಸಹಾಯದಿಂದ ಕೀಟ ನಾಶಕ, ಕಳೆ ನಾಶಕ, ನೀರು, ರಸಗೊಬ್ಬರವನ್ನು ಸುಲಭವಾಗಿ ಬೆಳೆಗಳಿಗೆ ಸಿಂಪಡಿಸಬಹುದು.

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?

ಗರುಡ ಏರೋಸ್ಪೇಸ್ ಆಗಿರುವ ಧೋನಿ,

ಇದೀಗ ಧೊನಿ ಈ ಕಂಪನಿಯಲ್ಲಿ ಶೇರು ಖರೀದಿ ಮಾಡುವುದರ ಜೊತೆ ಜೊತೆಗೆ ಅದರ ಬ್ರಾಂಡ್‌ ಅಂಬಾಸಿಡರ್‌ ಕೂಡ ಆಗಿದ್ದಾರೆ. ಈ ವೇಳೆ ಅವರು ಗರುಡ ಎರೋಸ್ಪೇಸ್​​ನ ಭಾಗವಾಗಲು ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಗರುಡಾ ಏರೋಸ್ಪೇಸ್ ಅನ್ನು ಅದರ ಸಂಸ್ಥಾಪಕ- ಸಿಇಒ ಅಗ್ನಿಶ್ವರ್  ಜಯಪ್ರಕಾಶ್ ಅವರು  ಮಾತನಾಡಿ ಸದ್ಯ 300 ಡ್ರೋನ್‌ಗಳು ಮತ್ತು 500 ಪೈಲಟ್‌ಗಳು 26 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಡ್ರೋನ್ ಉತ್ಪಾದನಾ ಸೌಲಭ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು.

Ration Card Update: ನೀವು ಪಡಿತರ ಚೀಟಿ ಹೊಂದಿದ್ದರೆ ಕೂಡಲೇ ಈ ಕೆಲಸ ಮಾಡಿ; ಇಲ್ಲದಿದ್ದರೆ ನಿಮಗೆ ತೊಂದರೆ ತಪ್ಪಿದ್ದಲ್ಲ!

EPFO: 6 ಕೋಟಿಗೂ ಹೆಚ್ಚು ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ; ಈ ದಿನದಂದು ನಿಮ್ಮ ಖಾತೆಗೆ ಬರಲಿದೆ ₹80,000!

ಸಿಇಒ ಜಯಪ್ರಕಾಶ್ ಅವರು ತಮ್ಮ ಸಂಸ್ಥೆಯಾದ ಗರುಡಾ ಏರೋಸ್ಪೇಸ್ ಭಾರತೀಯ ಡ್ರೋನ್ ಪರಿಸರ ವ್ಯವಸ್ಥೆಯಲ್ಲಿ ಪ್ರವರ್ತಕವಾಗಿದೆ ಮತ್ತು ಭಾರತದ ಮೊದಲ ಡ್ರೋನ್ ಯುನಿಕಾರ್ನ್ ಸ್ಟಾರ್ಟ್ ಅಪ್ ಆಗುವ ಹಾದಿಯಲ್ಲಿ ದೃಢವಾಗಿ ಸಾಗುತ್ತಿದೆ ಎಂದು ಹೇಳಿದರು.

ಯಾವಾಗಲೂ ಮಹಿ ಭಾಯಿ (ಎಂಎಸ್ ಧೋನಿ) ಅವರ ಉತ್ಕಟ ಅಭಿಮಾನಿಯಾಗಿದ್ದೇನೆ ಮತ್ತು ಗರುಡ ಏರೋಸ್ಪೇಸ್ ಕುಟುಂಬದ ಭಾಗವಾಗಿ ಅವರನ್ನು ಹೊಂದುವುದು ಕನಸು ನನಸಾಗಿದೆ. ಮಾಹಿ ಸಮರ್ಪಣೆಯ ಪ್ರತಿರೂಪವಾಗಿದೆ ಮತ್ತು ನಮ್ಮ ಮೇಜಿನ ಮೇಲೆ ಕ್ಯಾಪ್ಟನ್ ಕೂಲ್ ಇರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ಪ್ರಚಂಡ ಮೌಲ್ಯವನ್ನು ಸೇರಿಸುತ್ತದೆ..," ಶ್ರೀ ಜಯಪ್ರಕಾಶ್ ಹೇಳಿದರು.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ! ಯಾವ ಪ್ರಾಣಿ ಸಾಕಾಣಿಕೆಗೆ ಎಷ್ಟು ಹಣ ಗೊತ್ತೆ?

ಸಾವಯವ ಗೊಬ್ಬರ ಖರೀದಿಸುವ ರೈತರಿಗೆ ಭರ್ಜರಿ ರಿಯಾಯಿತಿ: ಈ ಯೋಜನೆಯಡಿ ₹227.40 ಲಕ್ಷ ಅನುದಾನ ಮೀಸಲು!