News

Chandrayaan-3 ನಭಕ್ಕೆ ಜಿಗಿಯಲು ತುದಿಗಾಲಲ್ಲಿ ನಿಂತ ಎಲ್‌ವಿಎಂ-3: ಐತಿಹಾಸಿಕ ಕ್ಷಣಕ್ಕೆ ಕೌಂಟ್‌ಡೌನ್‌!

14 July, 2023 1:42 PM IST By: Hitesh

ಚಂದ್ರಯಾನ-3ಗೆ ಇನ್ನು ಕೆಲವೇ ನಿಮಿಷಗಳು ಬಾಕಿ ಉಳಿದಿವೆ. ಚಂದ್ರಯಾನ-3ರ ಯಶಸ್ಸಿಗಾಗಿ ಇಡೀ ಭಾರತವೇ ಕಾತುರದಿಂದ ಕಾಯುತ್ತಿದೆ.

ಚಂದ್ರಯಾನ -2ರ ಕಹಿಯನ್ನು ಮರೆತು ಚಂದ್ರಯಾನ-3 ಯಶಸ್ಸಾಧಿಸಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ.

ಕಳೆದ ಬಾರಿ ಚಂದ್ರಯಾನ -2ರ ಸಂದರ್ಭದಲ್ಲಿ ಇಸ್ರೋ ಪರಿಶ್ರಮಕ್ಕೆ ತಕ್ಕುದಾದ ಯಶಸ್ಸು ಸಿಕ್ಕಿರಲಿಲ್ಲ.

ಇದೀಗ ಚಂದ್ರಯಾನ -3 ನಭಾಕ್ಕೆ ಜಿಗಿಯಲು ಇನ್ನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ.

ಚಂದ್ರಯಾನ -3 ಇದರ ಹಿನ್ನೆಲೆ ಏನು ?   

2008ರ ಅಕ್ಟೋಬರ್‌ 22ರಂದು ಚಂದ್ರಯಾನ-1 ಅನ್ನು ದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು.

ನಭಕ್ಕೆ ಹಾರಿದ್ದ ಈ ಯಾನವು ತ್ರಿವರ್ಣ ಧ್ವಜ ಬಣ್ಣದ ಚಂದ್ರನೌಕೆಯೊಂದಿಗೆ 2008ರ ನವೆಂಬರ್‌ 8ರಂದು ಚಂದ್ರನನ್ನು ಚುಂಬಿಸಿತ್ತು.  

ಚಂದ್ರ ಗ್ರಹದಲ್ಲಿ ನೀರು ಇದೆ ಎನ್ನುವ ಮಹತ್ವದ ಮಾಹಿತಿಯನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿಯೂ ಸಹ ನಮ್ಮ ಭಾರತಕ್ಕೆ ಸಲ್ಲುತ್ತದೆ.

ಇದಾದ ನಂತರದಲ್ಲಿ 2019ರ ಸೆಪ್ಟೆಂಬರ್‌ ಮಾಸದಲ್ಲಿ ಮೊದಲ ಯಶಸ್ಸಿನ ವಿಶ್ವಾಸದಲ್ಲಿಯೇ

ಭಾರತವು ಮೊತ್ತೊಂದು ಸಾಹಸಕ್ಕೆ ಮುಂದಾಗಿತ್ತು. ಆದರೆ, ಇದು ನಿರೀಕ್ಷಿತ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ.  

.  ಚಂದ್ರನ ದಕ್ಷಿಣ ಧ್ರುವದ ನಿರ್ದಿಷ್ಟ ಜಾಗದಲ್ಲಿ ಇಳಿಯಬೇಕಿದ್ದ ಚಂದ್ರಯಾನ-2ರ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಅಪ್ಪಳಿಸಿ,

ಕಹಿ ಅನುಭವವನ್ನು ನೀಡಿತ್ತು. ಇಸ್ರೋದ ಪರಿಶ್ರಮ ಸಾಧ್ಯವಾಗದೆ ಇರುವುದಕ್ಕೆ ಇಸ್ರೋದ ವಿಜ್ಞಾನಿಗಳು ಕಂಬನಿ ಮಿಡಿದಿದ್ದರು.

ಚಂದ್ರಯಾನ-2 ಯಶಸ್ವಿಯಾಗದೆ ಇರುವುದಕ್ಕೆ ಭಾರತವೇ ಮರುಗಿತ್ತು.      

ಇದೀಗ ಇಸ್ರೋ ಮತ್ತೆ ಪುಟಿದೆದ್ದು, ಚಂದ್ರಯಾನದ ಕನಸನ್ನು ನನಸು ಮಾಡಿಕೊಳ್ಳಲು ಮತ್ತೆ ಪರಿಶ್ರಮವಾಕಿ, ಸಿದ್ಧವಾಗಿ ನಿಂತಿದೆ.

ಸೋಲಿನ ನಂತರ ಸತತ ನಾಲ್ಕು ವರ್ಷಗಳ ಪರಿಶ್ರಮದ ನಂತರದಲ್ಲಿ ಇದೀಗ  

ಇಸ್ರೋ ಚಂದ್ರಯಾನ -3ಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಚಂದ್ರಯಾನ -3ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.  

ಲಾಂಚ್‌ ವೆಹಿಕಲ್‌ ಮಾರ್ಕ್ -3 (ಎಲ್‌ವಿಎಂ-3) ರಾಕೆಟ್‌ನ ಶಿರದಲ್ಲಿ ಚಂದ್ರ ಗ್ರಹದಲ್ಲಿ ಇಳಿಯುವ ರೋವರ್‌ ಸಿದ್ಧವಾಗಿ, ತುದಿಗಾಲಲ್ಲಿ ನಿಂತಿದೆ.

ಇಂದು ಅಂದರೆ ಜುಲೈ 14ರ ಮಧ್ಯಾಹ್ನ 2.30-3.30ರ ನಡುವೆ ರಾಕೆಟ್‌ ಆಕಾಶಕ್ಕೆ ಜಿಗಿಯಲಿದೆ ಎಂದು ಇಸ್ರೋ ಹೇಳಿದೆ.

ಈ ಯಶಸ್ಸು ಕಂಡು ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಆಗುವ ಮೂಲಕ ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.