News

LPG Update: ಇನ್ಮುಂದೆ ಗ್ರಾಹಕರಿಗೆ ದೊರೆಯಲಿದೆ ವರ್ಷಕ್ಕೆ ಇಷ್ಟೇ ಸಿಲಿಂಡರ್‌ಗಳು! ಹೊಸ ನಿಯಮದಲ್ಲಿ ಸಬ್ಸಿಡಿ ಎಷ್ಟು ಗೊತ್ತೆ?

08 October, 2022 5:05 PM IST By: Kalmesh T
LPG Update: Consumers will now get this many cylinders per year!

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬಳಸುವ ಗ್ರಾಹಕರಿಗೆ ಇಲ್ಲಿದೆ ಹೊಸದಾದ ನಿಯಮ. ಇದರ ಪ್ರಕಾರ ವರ್ಷಕ್ಕೆ ಕೇವಲ ಇಷ್ಟೇ ಸಿಲಿಂಡರ್‌ ದೊರೆಯಲಿದೆ. ಇಲ್ಲಿದೆ ಈ ಕುರಿತ ವಿವರ

ಮತ್ತಷ್ಟು ಓದಿರಿ: ನಿಯಮಗಳ ಉಲ್ಲಂಘನೆ; ಕರ್ನಾಟಕದಲ್ಲಿ Ola, Uber, Rapido ಆಟೋ ಸೇವೆ ಸ್ಥಗಿತಗೊಳಿಸುವಂತೆ ಸರ್ಕಾರಿ ಆದೇಶ!

LPG Cylinder: ಒಂದು ವರ್ಷದಲ್ಲಿ ಗ್ರಾಹಕರು ಎಷ್ಟು ಸಿಲಿಂಡರ್‌ ಪಡೆಯಬಹುದು ಎಂಬುವುದಕ್ಕೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಲಾಗಿದೆ.

ಇನ್ನು ಮುಂದೆ ಗ್ರಾಹಕರಿಗೆ ಎಲ್‌ಪಿಜಿ (LPG Cylinder) ಸಿಲಿಂಡರ್‌ಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಇನ್ನು ಮುಂದೆ ಯಾವುದೇ ಗ್ರಾಹಕರು ವರ್ಷಕ್ಕೆ 15 ಸಿಲಿಂಡರ್‌ಗಳನ್ನು ಮಾತ್ರ ಬುಕ್ ಮಾಡಬಹುದು.

ಅಂದರೆ, ಈಗ ನೀವು ಒಂದು ವರ್ಷದಲ್ಲಿ 15 ಸಿಲಿಂಡರ್‌ಗಳಿಗಿಂತ ಹೆಚ್ಚು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗೆ, ನೀವು ಒಂದು ತಿಂಗಳಲ್ಲಿ 2 ಸಿಲಿಂಡರ್ಗಳಿಗಿಂತ ಹೆಚ್ಚು ತೆಗೆದುಕೊಳ್ಳಲು ಸಾಧ್ಯವಿಲ್ಲ.

ಅಕ್ಟೋಬರ್‌ 11ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಸೂಚನೆ! ಇಲ್ಲಿದೆ ಜಿಲ್ಲಾವಾರು ವಿವರ.

ಈ ಸಿಲಿಂಡರ್ ತೆಗೆದುಕೊಳ್ಳಲು ಹೊಸ ನಿಯಮಗಳನ್ನು ಮಾಡಲಾಗಿದೆ. ಇದುವರೆಗೆ ಸಿಲಿಂಡರ್ ಪಡೆಯಲು ತಿಂಗಳುಗಳು ಅಥವಾ ವರ್ಷಗಳ ಕೋಟಾವನ್ನು ನಿಗದಿಪಡಿಸಲಾಗಿರಲಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ಒಂದು ವರ್ಷದಲ್ಲಿ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆ 12 ಕ್ಕೆ ಏರಿದೆ, ನೀವು 15 ಸಿಲಿಂಡರ್‌ಗಳನ್ನು ತೆಗೆದುಕೊಂಡರೆ ನಿಮಗೆ 12 ಸಿಲಿಂಡರ್‌ಗಳದ್ದಷ್ಟೆ ಸಬ್ಸಿಡಿ ಸಿಗುತ್ತದೆ.

DA Hike: ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್‌ ಸುದ್ದಿ! ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ!

ಅಕ್ಟೋಬರ್‌ನಲ್ಲಿ ಹೊಸ ದರ ಬಿಡುಗಡೆ ಮಾಡಲಾಗಿದೆ

ಅಕ್ಟೋಬರ್ 1 ರಿಂದ ಹೊಸ ಗ್ಯಾಸ್ ಬೆಲೆಗಳನ್ನು ಬಿಡುಗಡೆ ಮಾಡಲಾಗಿದೆ.

ನಂತರ ದೆಹಲಿಯಲ್ಲಿ ಸಿಲಿಂಡರ್ ಬೆಲೆ 1053 ರೂ., ಬೆಂಗಳೂರಿನಲ್ಲಿ 1050 ರೂ. ಇದ್ದು, ಮುಂಬೈನಲ್ಲಿ 1052.5 ರೂ., ಚೆನ್ನೈನಲ್ಲಿ 1068.5 ರೂ. ಮತ್ತು ಕೋಲ್ಕತ್ತಾದಲ್ಲಿ 1079 ರೂ. ಇದೆ.