ಗೃಹೋಪಯೋಗಿ ಅಡುಗೆ ಅನಿಲ ದುಬಾರಿಯಾಗಲಿದೆ. ಸೋಮವಾರದಿಂದ ಅನ್ವಯವಾಗುವಂತೆ ದೆಹಲಿಯಲ್ಲಿ 50 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಪರಿಷ್ಕೃತ ಎಲ್ಪಿಜಿ ದರ 769 ರೂಪಾಯಿ ಆಗಲಿದೆ.
ಸೋಮವಾರದಿಂದಲೇ (ಫೆಬ್ರವರಿ 15 ) ಪರಿಷ್ಕೃತ ದರವು ಜಾರಿಗೆ ಬರಲಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ತಿಂಗಳ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನದಂದು ಬದಲಾವಣೆಗಳನ್ನು ಮಾಡಲಾಗುತ್ತದೆ. ದೇಶದ ವಿವಿಧ ಕಡೆಗಳಲ್ಲಿ ಸ್ಥಳೀಯ ತೆರಿಗೆಯಿಂದಾಗಿ ಅಡುಗೆ ಅನಿಲ ದರಗಳು ಬದಲಾಗುತ್ತಾ ಹೋಗುತ್ತವೆ.
2020 ರ ಡಿಸೆಂಬರ್ ಬಳಿಕ ಇದು ಮೂರನೇ ಏರಿಕೆಯಾಗಲಿದೆ. ಡಿ. 16 ರಂದು 50 ರೂಪಾಯಿ ಹೆಚ್ಚಿಸಲಾಗಿತ್ತು. ಫೆಬ್ರವರಿ.04ರಂದು ದೇಶದ ಮಹಾನಗರಗಳಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ 719 ರೂಪಾಯಿ ಆಗಿತ್ತು. ಈಗ 50 ರೂಪಾಯಿ ಹೆಚ್ಚಿಸಿದ್ದರಿಂದ ದೆಹಲಿಯಲ್ಲಿ 769 ರೂಪಾಯಿಗೆ ತಲುಪಿದೆ.
ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರ್ ದರವನ್ನು ಸಾಮಾನ್ಯವಾಗಿ ತಿಂಗಳಿಗೊಮ್ಮೆ ಏರಿಕೆ ಮಾಡಲಾಗುತ್ತದೆ. ಸ್ಥಳೀಯ ತೆರಿಗೆ ಆಧಾರದಲ್ಲಿ ದೇಶಾದ್ಯಂತ ಎಲ್ ಪಿಜಿ ದರ ವ್ಯತ್ಯಯವಾಗಲಿದೆ. ಸರ್ಕಾರ ಪ್ರತಿ ವರ್ಷ 12 ಸಬ್ಸಿಡಿ ಸಹಿತ ಸಿಲಿಂಡರ್ ಗಳನ್ನು ನೀಡಲಿದೆ.