News

LPG Price: ಗ್ರಾಹಕರಿಗೆ ಹಬ್ಬದ ಗಿಫ್ಟ್‌..LPG ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ

01 October, 2022 9:58 AM IST By: Maltesh
LPG Price: Festive gift to customers..Reduction in LPG cylinder price

ಸಾಳು ಸಾಲು ಹಬ್ಬದ ಸಡಗರದಲ್ಲಿರುವ ಜನಸಾಮಾನ್ಯರಿಗೆ ಅಂತೂ ಇಂತು ತಿಂಗಳ ಮೊದಲ ದಿನದಂದೆ ಶುಭಸುದ್ದಿಯೊಂದು ಸಿಕ್ಕಿದೆ. ಹೌದು ಶನಿವಾರ, ಅಕ್ಟೋಬರ್ 1, 2022 ರಿಂದ, ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಗಳನ್ನು ಎಂದಿನಂತೆ ತಿಂಗಳ ಮೊದಲ ದಿನ ಪರಿಷ್ಕರಣೆ ಮಾಡಲಾಗಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. IOCL ನ ವೆಬ್‌ಸೈಟ್ ಪ್ರಕಾರ, ಅಕ್ಟೋಬರ್ 1 ರಿಂದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಇಂಡೇನ್ ವಾಣಿಜ್ಯ ಸಿಲಿಂಡರ್ ಬೆಲೆ 25.5 ರೂ, ಕೋಲ್ಕತ್ತಾದಲ್ಲಿ ರೂ 36.5, ಮುಂಬೈನಲ್ಲಿ ರೂ 32.5, ಚೆನ್ನೈನಲ್ಲಿ ರೂ 35.5 ಕಡಿಮೆಯಾಗಿದೆ.

Bank Holidays: ಅಕ್ಟೋಬರ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆಗಳಿವೆ ಗೊತ್ತಾ..?

ಅದೇ ಸಮಯದಲ್ಲಿ, 14.2 ಕೆಜಿಯ ದೇಶೀಯ LPG ಸಿಲಿಂಡರ್ ಹಳೆಯ ಬೆಲೆಯಲ್ಲಿ ಮಾತ್ರ ಲಭ್ಯವಿರುತ್ತದೆ. ಪ್ರತಿ ತಿಂಗಳ ಮೊದಲನೆಯ ದಿನ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸುತ್ತೇವೆ. ಜಾಹತಿಕ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯನ್ನು ಅವಲಂಬಿಸಿ ಈ ಬೆಲೆಗಳು ಏರಿಳಿತಗಳನ್ನು ಕಾಣುತ್ತವೆ.

14.2 KG ಸಿಲಿಂಡರ್ ದರಗಳು

ಕೋಲ್ಕತ್ತಾ: ಪ್ರತಿ ಸಿಲಿಂಡರ್‌ಗೆ 1079 ರೂ

ದೆಹಲಿ: ಪ್ರತಿ ಸಿಲಿಂಡರ್‌ಗೆ 1053 ರೂ

ಮುಂಬೈ: ಪ್ರತಿ ಸಿಲಿಂಡರ್‌ಗೆ 1052.5 ರೂ

ಚೆನ್ನೈ: ಪ್ರತಿ ಸಿಲಿಂಡರ್‌ಗೆ 1068.5 ರೂ

ಆರೋಗ್ಯಕರ ಚಹಾ ಯಾವುದು?

17 KG ಸಿಲಿಂಡರ್ ಬೆಲೆ

ಕೋಲ್ಕತ್ತಾ: ಪ್ರತಿ ಸಿಲಿಂಡರ್‌ಗೆ ರೂ 1959 (ಹಿಂದಿನ ತಿಂಗಳ ಬೆಲೆ ರೂ 1995.50)

ದೆಹಲಿ: ಪ್ರತಿ ಸಿಲಿಂಡರ್‌ಗೆ ರೂ 1859.5 (ಹಿಂದಿನ ತಿಂಗಳ ಬೆಲೆ ರೂ 1885)

ಮುಂಬೈ: ಪ್ರತಿ ಸಿಲಿಂಡರ್‌ಗೆ ರೂ 1811.5 (ಹಿಂದಿನ ತಿಂಗಳ ಬೆಲೆ ರೂ 1844)

ಚೆನ್ನೈ: ಪ್ರತಿ ಸಿಲಿಂಡರ್‌ಗೆ ರೂ 2009.50 (ಹಿಂದಿನ ತಿಂಗಳ ಬೆಲೆ ರೂ 2045)

6 ತಿಂಗಳಿಂದ ನಿರಂತರವಾಗಿ ಬೆಲೆ ಇಳಿಕೆಯಾಗುತ್ತಿದೆ

ಈ ಮೂಲಕ ಸತತ ಆರನೇ ತಿಂಗಳಿನಿಂದ ವಾಣಿಜ್ಯ ಸಿಲಿಂಡರ್ (17 ಕೆಜಿ) ಬೆಲೆ ಇಳಿಕೆಯಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಈ ಸಿಲಿಂಡರ್ ಬೆಲೆ 2354 ರೂ.ಗೆ ತಲುಪಿತ್ತು, ಆದರೆ ಅಂದಿನಿಂದ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ. ವಾಣಿಜ್ಯ ಅನಿಲ