ಇದೇ ತಿಂಗಳ ಡಿಸೆಂಬರ್ 2 ರಂದು ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಬುಧವಾರ ಮತ್ತೊಂದು ಶಾಕ್ ತಟ್ಟಿದೆ.
ಸಬ್ಸಿಡಿಯುಕ್ತ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ದರವನ್ನು ಮತ್ತೆ 50 ರೂ. ಏರಿಸಲಾಗಿದೆ. ಇದರಿಂದಾಗಿ ಒಂದೇ ತಿಂಗಳಲ್ಲಿ ಕೇವಲ 15 ದಿನಗಳ ಅಂತರದಲ್ಲಿ 100 ರೂಪಾಯಿ ಹೆಚ್ಚಾಗಿದೆ.. ಈ ತಿಂಗಳಿನಲ್ಲಿ ಎರಡನೇ ಬಾರಿ ಆಗಿರುವ ದರ ಏರಿಕೆ ಇದು.
ಇದರಿಂದ 14.2ಕೆ.ಜಿಯ ಸಬ್ಸಿಡಿಯೇತರ ಸಿಲಿಂಡರ್‌ನ ದರ 644 ಇದ್ದಿದ್ದು 694ಕ್ಕೆ ಏರಿಕೆ ಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಡಿಸೆಂಬರ್ 1ರಂದು ಪ್ರತಿ ಸಿಲಿಂ ಡರ್ ದರ 50ರಷ್ಟು ಹೆಚ್ಚಿಳ ಆಗಿತ್ತು. 5 ಕೆ.ಜಿ.ಯ ಪ‍್ರತಿ ಸಿಲಿಂಡರ್ ದರ 18 ಹಾಗೂ 19 ಕೆ.ಜಿ ಸಿಲಿಂಡರ್ ದರ 36.50ರಷ್ಟು ಹೆಚ್ಚಾಗಿದೆ.ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದ ಹಣಕಾಸು ಬಿಕ್ಕಟ್ಟು, ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಪೆಟ್ಟು, ಹಣದುಬ್ಬರ ಹೆಚ್ಚಳದಿಂದ ಹೈರಾಣಾಗಿರುವ ಸಾಮಾನ್ಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪರಿಷ್ಕೃತ ದರ (14.2 ಕೆ.ಜಿ. ಸಿಲಿಂಡರ್):
ಬೆಂಗಳೂರು 697 ರೂಪಾಯಿ, ಚೆನ್ನೈ: 710 ರೂಪಾಯಿ, ಕೋಲ್ಕೊತಾ: 720 ರೂಪಾಯಿ, ಮುಂಬಯಿ ರೂಪಾಯಿ, 694 ದಿಲ್ಲಿ 694 ರೂಪಾಯಿ ಇದೆ.
ಸಬ್ಸಿಡಿಯೂ ಸ್ಥಗಿತ:
ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗೆ ಸರಕಾರ ನೀಡುತ್ತಿದ್ದ ಸಬ್ಸಿಡಿ ಕಳೆದ ಆರು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಸಬ್ಸಿಡಿ ಮೊತ್ತವನ್ನು ಸಿಲಿಂಡರ್ ಖರೀದಿಸಿದ ಗ್ರಾಹಕರ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿತ್ತು. ಆದರೆ, ಕಳೆದ ಮೇ ನಂತರ ಎಲ್‌ಪಿಜಿ ಬಳಕೆದಾರರಿಗೆ ಯಾವುದೇ ಸಬ್ಸಿಡಿಯನ್ನು ಸರಕಾರ ನೀಡುತ್ತಿಲ್ಲ.