News

LPG ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ಏರಿಕೆ!

02 December, 2023 4:32 PM IST By: Maltesh

ದೇಶದಲ್ಲಿ ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್ ಬೆಲೆಗಳು ಬದಲಾಗುತ್ತವೆ. ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳು ಪ್ರಾರಂಭವಾಯಿತು. ಡಿಸೆಂಬರ್ ಆರಂಭದಲ್ಲಿ ದೇಶದ ತೈಲ ಕಂಪನಿಗಳು ಎಂದಿನಂತೆ ಗ್ಯಾಸ್ ಬೆಲೆಯನ್ನು ಬದಲಾಯಿಸಿವೆ.

ದೇಶದಾದ್ಯಂತ ಐದು ರಾಜ್ಯಗಳ ಚುನಾವಣೆಯ ನಂತರ ಗ್ಯಾಸ್ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಇದರ ಪರಿಣಾಮವಾಗಿ, ಪ್ರಮುಖ ತೈಲ ಕಂಪನಿಗಳು ವ್ಯಾಪಾರಿಗಳು ವ್ಯಾಪಕವಾಗಿ ಬಳಸುವ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಿವೆ. ಪರಿಷ್ಕೃತ ಬೆಲೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಅನಿಲ ವಿತರಣಾ ಕಂಪನಿಗಳು ಅಧಿಕೃತವಾಗಿ ಘೋಷಿಸಿವೆ.

ಸದ್ಯ ಪ್ರತಿ ಸಿಲಿಂಡರ್‌ಗೆ ರೂ.21 ಹೆಚ್ಚಳವಾಗಿದೆ. ಇತ್ತೀಚಿಗೆ ದೇಶದ ಪ್ರಮುಖ ನಗರಗಳಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆ ಬದಲಾವಣೆಯನ್ನು ಗಮನಿಸಿದರೆ, ಬೆಲೆ ಬದಲಾಗುತ್ತಿರುವುದನ್ನು ನಾವು ನೋಡಬಹುದು.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ.1,796.50 ಇದ್ದರೆ, ಕೋಲ್ಕತ್ತಾದಲ್ಲಿ ರೂ.1,908ಕ್ಕೆ ಮಾರಾಟವಾಗುತ್ತಿದೆ. ಅದೇ ಕ್ರಮದಲ್ಲಿ, ವಾಣಿಜ್ಯ ಸಿಲಿಂಡರ್‌ನ ಬೆಲೆ ಮುಂಬೈನಲ್ಲಿ ರೂ.1,749 ಕ್ಕೆ ಏರಿಕೆಯಾಗಿದ್ದು, ಚೆನ್ನೈನಲ್ಲಿ ರೂ.1,968.50 ರಷ್ಟಿದೆ..

ವಾಣಿಜ್ಯ ಅನಿಲ ಸಿಲಿಂಡರ್ ದುಬಾರಿಯಾಗುತ್ತಿರುವ ಪರಿಣಾಮ ಖಾದ್ಯಗಳ ಬೆಲೆ ಏರಿಕೆ

ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಆಹಾರ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಈ ಕಾರಣದಿಂದಾಗಿ, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬೆಲೆ ಏರಿಕೆ ಕಂಡ ಬಂದಿದೆ.