News

ಎಲ್ಪಿಜಿ ಸಿಲೆಂಡರ್ ಪಡೆಯಲು ಇನ್ನೂ ಮುಂದೆ ಓಟಿಪಿ ನೀಡಬೇಕು

17 October, 2020 9:18 AM IST By:

ಮುಂದಿನ ತಿಂಗಳಿಂದ (ನವೆಂಬರ್) ಎಲ್ಪಿಜಿ ಸಿಲೆಂಡರ್ ಪಡೆಯಬೇಕೇದಾರೆ ಓಟಿಪಿ ನೀಡಬೇಕಾಗುತ್ತದೆ. ಅಡುಗೆ ಅನಿಲ ಸಿಲಿಂಡರ್‌ ಮನೆ ಬಾಗಿಲಿಗೆ ಸರಬರಾಜಾಗುವ ಸಂದರ್ಭ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ನೀಡಬೇಕಾದ ಹೊಸ ವ್ಯವಸ್ಥೆ ನವೆಂಬರ್ 1 ರಿಂದ ಜಾರಿಗೆ ಬರಲಿದೆ.

ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಈ ಹೊಸ ವಿತರಣಾ ವ್ಯವಸ್ಥೆಯನ್ನು ಮೊದಲು ಜಾರಿಗೆ ತರಲಾಗುವುದು. ಈಗಾಗಲೇ ರಾಜಸ್ಥಾನದ ಜೈಪುರದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಮಾಡಲಾಗಿದೆ.  ಒಮ್ಮೆ ಯೋಜನೆ ಸ್ಮಾರ್ಟ್ ಸಿಟಿಗಳಲ್ಲಿ ಯಶಸ್ವಿಯಾದನಂತರ ಅದನ್ನು ಇತರ ನಗರಗಳಿಗೂ ವಿಸ್ತರಿಸಲಾಗುವುದು. ಹೊಸ ವ್ಯವಸ್ಥೆ ಗ್ರಾಹಕರಿಗೆ ಕಷ್ಟವಾಗಲಿದೆ, ಅವರ ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಯಾವುದೇ ಮಾಹಿತಿ ವ್ಯವಸ್ಥೆಯಲ್ಲಿ ಅಪ್ ಡೇಟ್ ಆಗಿರುವುದಿಲ್ಲ. ಯಾರ ಮೊಬೈಲ್ ಅಪಡೆಟ್ ಆಗಿಲ್ಲವೋ ಅವರು ಶೀಘ್ರ ಅಪಡೇಟ್ ಮಾಡಿಕೊಳ್ಳಬಹುದು.

ಈಗ ನಿಮಗೆ ಸಿಲೆಂಡರ್ ಬೇಕಾದರೆ ಓಟಿಪಿ ನೀಡವುದು ಕಡ್ಡಾಯವಾಗಲಿದೆ. ಅಡುಗೆ ಅನಿಲ ಕಳ್ಳತನ ತಪ್ಪಿಸುವ ಮತ್ತು ಸರಿಯಾದ ಗ್ರಾಹಕನನ್ನು ಗುರುತಿಸುವ ಉದ್ದೇಶದಿಂದ ತೈಲ ಕಂಪೆನಿಗಳು “ಪೂರೈಕೆ ದೃಢೀಕರಣ ಕೋಡ್‌’ (ಡಿಎಸಿ) ಎಂಬ ಹೊಸ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿವೆ.

ಗ್ರಾಹಕರು ಗ್ಯಾಸ್ ಬುಕ್ ಮಾಡಿದರೆ, ಅವರ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಕೋಡ್ ಬರುತ್ತದೆ. ಮತ್ತು ಆರ್ಡರ್ ಮಾಡಿದ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಲು ಇದನ್ನು  ಕೊಡಬೇಕಾಗುತ್ತದೆ. ಒಂದು ಗ್ರಾಹಕರ ಮೊಬೈಲ್ ಸಂಖ್ಯೆ ಅಪ್ ಡೇಟ್ ಆಗದಿದ್ದರೆ,  ಪರಿಶೀಲನೆ ಯ ನಂತರ ಮೊಬೈಲ್ ಫೋನ್ ಸಂಖ್ಯೆಯನ್ನು ಅಪ್ ಡೇಟ್ ಮಾಡಿ ಕೋಡ್ ಜನರೇಟ್ ಮಾಡುತ್ತಾರೆ.

ಏನು ಮಾಡಬೇಕು?
ಸಿಲಿಂಡರ್‌ಗೆ ಬುಕಿಂಗ್‌ ಬಳಿಕ ಗ್ರಾಹಕನ ನೋಂದಾಯಿತ ಮೊಬೈಲ್‌ಗೆ ಒಟಿಪಿ ರವಾನಿಸಲಾಗುತ್ತದೆ. ಸಿಲಿಂಡರ್‌ ತರುವ ವ್ಯಕ್ತಿಗೆ ಈ ಒಟಿಪಿ ಸಂಖ್ಯೆ ನೀಡಬೇಕು. ವಾಣಿಜ್ಯ ಸಿಲಿಂಡರ್‌ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.

ಏನಿದು ಹೊಸ ವ್ಯವಸ್ಥೆ?
ಮೂಲಗಳ ಪ್ರಕಾರ,  ತೈಲ ವ್ಯವಸ್ಥೆಯನ್ನು ಹೊಸ ವ್ಯವಸ್ಥೆಯನ್ನು ವಿತರಣಾ ದೃಢೀಕರಣ ಕೋಡ್ (ಡಿಎಸಿ) ನೊಂದಿಗೆ ಜೋಡಿಸಲು ಯೋಜಿಸಿದೆ. ಇದರಲ್ಲಿ ಸಿಲಿಂಡರ್ ಅನ್ನು ಕಾಯ್ದಿರಿಸಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಕೋಡ್ ಕಾಣಿಸುತ್ತದೆ. ಸಿಲಿಂಡರ್ ವಿತರಣೆಯ ಸಮಯದಲ್ಲಿ ಈ ಕೋಡ್ ಅನ್ನು ಡೆಲಿವರಿ ಹುಡುಗನಿಗೆ ನೀಡಬೇಕಾಗುತ್ತದೆ. ಈ ಕೋಡ್ ಅನ್ನು ತೋರಿಸದ ಹೊರತು ವಿತರಣೆಯು ಪೂರ್ಣಗೊಳ್ಳುವುದಿಲ್ಲ ಮತ್ತು ಸ್ಟೇಟಸ್ ಬಾಕಿ ಉಳಿದಿರುತ್ತದೆ.