ಕೋವಿಡ್ ಸಂಕಷ್ಟದ ನಡುವೆಯೂ ಮತ್ತೆ ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ಇದರಿಂದಾಗಿ ಮನೆಬಳಕೆ ಹಾಗೂ ವಾಣಿಜ್ಯಕ್ಕಾಗಿ ಬಳಕೆಯಾಗುವ ಸಿಲಿಂಡರ್ ಬೆಲೆ 25 ರೂಪಾಯಿ ಏರಿಯಾಗಿದೆ. ಇದರಿಂದಾಗಿ ಗ್ರಾಹಕರಿಗೆ ಸಿಲಿಂಡರ್ ಬೆಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪೆಟ್ರೋಲಿಯಂ ಕಂಪನಿಗಳು ಮತ್ತೊಮ್ಮೆ ದೇಶೀಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಿವೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು 25 ರೂ.ಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ, 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಈಗ 859.5 ರೂ. ಆಗಿದೆ. ಆದರೆ ಇದಕ್ಕೆ ಮೊದಲು ಅದು 834.50 ರೂಪಾಯಿ ಇತ್ತು. ಈ ಹಿಂದೆ ಜುಲೈ 1ರಂದು ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 25.50 ರೂ.ಗಳಷ್ಟು ಹೆಚ್ಚಿಸಲಾಗಿತ್ತು.
ಮುಂಬೈಯಲ್ಲೂ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ದರ ಈಗ 859.5 ರೂ.ಗಳಷ್ಟಿದೆ, ಆದರೆ ಇಲ್ಲಿಯವರೆಗೆ ಅದು 834.50 ರೂ. ಕೋಲ್ಕತ್ತಾದಲ್ಲಿ ಎಲ್ ಪಿಜಿ ಸಿಲಿಂಡರ್ ದರ ಪ್ರತಿ ಸಿಲಿಂಡರ್ ಗೆ 861 ರೂ.ಗಳಿಂದ 886 ರೂಪಾಯಿಗೆ ಏರಿಕೆಯಾಗಿದೆ, ಇದರಿಂದಾಗಿ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ ಮಂಗಳವಾರದಿಂದ 875.50 ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ 850.50 ರೂ. ಇತ್ತು. ಉತ್ತರ ಪ್ರದೇಶದ ಲಕ್ನೋದಲ್ಲಿ LPG ಸಿಲಿಂಡರ್‌ಗಾಗಿ ನೀವು 897.5 ರೂ. ಪಾವತಿಸಬೇಕಾಗುತ್ತದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಎಲ್‌ಪಿಜಿಗೆ 866.50 ರೂ. ಪಾವತಿಸಬೇಕು.
2021 ವರ್ಷದ ಆರಂಭದಲ್ಲಿ ಅಂದರೆ, ಜನವರಿಯಲ್ಲಿ, ದೆಹಲಿಯಲ್ಲಿ ಎಲ್.ಪಿ.ಜಿ ಸಿಲಿಂಡರ್ ಬೆಲೆ 694 ರೂಪಾಯಿಯಷ್ಟಿತ್ತು. ಇದನ್ನು ಫೆಬ್ರವರಿಯಲ್ಲಿ 719 ರೂ.ಗೆ ಏರಿಸಲಾಯಿತು. ಫೆಬ್ರವರಿ 15 ರಂದು 769 ರೂ.ಗೆ ಹೆಚ್ಚಿಸಲಾಯಿತು. ಇದರ ನಂತರ, ಫೆಬ್ರವರಿ 25 ರಂದು, ಸಿಲಿಂಡರ್ ಬೆಲೆಯನ್ನು 794 ರೂ.ಗೆ ಏರಿಸಲಾಯಿತು..
ವಾಣಿಜ್ಯ ಸಿಲಿಂಡರ್ ಬೆಲೆ ಕೂಡ ದುಬಾರಿ: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಹೊರತುಪಡಿಸಿ, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ )ಕೂಡ 68 ರೂ. ದುಬಾರಿಯಾಗಿದೆ. ಈಗ 19 ಕೆಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1618 ರೂ.ಗೆ ಏರಿಕೆಯಾಗಿದೆ. ಇದು ಮೊದಲು 1550 ರೂ.ಗೆ ಲಭ್ಯವಿತ್ತು.
ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಆರ್ಥಿಕ ಸವಾಲುಗಳು ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಈಗಾಗಲೇ ತತ್ತರಿಸುತ್ತಿರುವ ಕುಟುಂಬಗಳು ಎಲ್ ಪಿಜಿ ಸಿಲಿಂಡರ್ ಬೆಲೆಗಳ ಹೆಚ್ಚಳದೊಂದಿಗೆ ಭಾರಿ ಹೊಡೆತ ನೀಡಿವೆ.