News

ಆಗಸ್ಟ್‌ ತಿಂಗಳ  ಮೊದಲ ದಿನವೇ ಗ್ರಾಹಕರಿಗೆ ಬಂಪರ್‌.. LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ

01 August, 2022 9:59 AM IST By: Maltesh
LPG cylinder price slashed again

LPG Cylinder Rate: LPG ಸಿಲಿಂಡರ್‌ಗಳ ಹೊಸ ದರಗಳು ಬಂದಿವೆ. ಆಗಸ್ಟ್ ಮೊದಲನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಗ್ಯಾಹಕರಿಗೆ ಬಂಪರ್‌ ನ್ಯೂಸ್‌ ಸಿಕ್ಕಿದೆ.

ಹೌದು ಸಿಲಿಂಡರ್‌ನ ಬೆಲೆಯಲ್ಲಿ ಭಾರೀ ಕಡಿತಗೊಳಿಸಲಾಗಿದೆ. ಇಂದು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 36 ರೂಪಾಯಿಗಳು ಇಳಿಕೆಯಾಗಿವೆ.ಈ ಬೆಲೆಗಳು ದೆಹಲಿ, ಮುಂಬೈನಿಂದ ಚೆನ್ನೈ ಮತ್ತು ದೇಶದ ಎಲ್ಲಾ ಇತರ ನಗರಗಳಿಗೆ ಅನ್ವಯಿಸುತ್ತವೆ.

LPG ಸಿಲಿಂಡರ್‌ಗಳಲ್ಲಿನ ಪರಿಹಾರವನ್ನು ವಾಣಿಜ್ಯ ಸಿಲಿಂಡರ್‌ಗಳಲ್ಲಿ ನೀಡಲಾಗುತ್ತದೆ. ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಹೊಸ ದರದ ಪ್ರಕಾರ, ಈಗ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 1976.50 ರೂ.ಗೆ ಲಭ್ಯವಾಗಲಿದೆ. ಈ ಹಿಂದೆ ಸಿಲಿಂಡರ್ ಬೆಲೆ 2012.50 ರೂ. ಜುಲೈ 6 ರಂದು ಕೊನೆಯದಾಗಿ ಬೆಲೆ ಕಡಿತ ಮಾಡಲಾಗಿದೆ. ನಂತರ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 2021 ರಿಂದ 2012 ಕ್ಕೆ ಇಳಿಸಲಾಯಿತು.

ಇದನ್ನೂ ಮಿಸ್‌ ಮಾಡ್ದೆ ಓದಿ:

ನಿಮ್ಮ ಜಮೀನಿನಲ್ಲಿ ಈ ಬೆಳೆ ಬೆಳೆಯಿರಿ 90 ದಿನದಲ್ಲಿ ಲಕ್ಷ ಲಕ್ಷ ಆದಾಯ ಬರೋದು ಫಿಕ್ಸ್‌

ಇನ್ನು ಗೃಹ ಬಳಕೆಯ LPG ಸಿಲಿಂಡರ್ ಬಗ್ಗೆ ನೋಡುವುದಾದದರೆ ಪ್ರಸ್ತುತ ದೆಹಲಿಯಲ್ಲಿ ಗೃಹ ಬಳಕೆಯ LPG  ಸಿಲಿಂಡರ್ ಬೆಲೆ 1053 ರೂ. ಈ ಹಿಂದೆ ಮೇ 19 ರಂದು ಈ ಬೆಲೆಗಳನ್ನು ಬದಲಾಯಿಸಲಾಗಿತ್ತು, ನಂತರ ಬೆಲೆಗಳನ್ನು 1003 ರಿಂದ 1053 ಕ್ಕೆ ಹೆಚ್ಚಿಸಲಾಯಿತು. ಪ್ರಸ್ತುತ, ಕೋಲ್ಕತ್ತಾದಲ್ಲಿ ದೇಶೀಯ ಎಲ್‌ಪಿಜಿ ಬೆಲೆ ರೂ.1079, ಮುಂಬೈನಲ್ಲಿ ರೂ.1052. ಚೆನ್ನೈನಲ್ಲಿ 1068.50 ರೂ ಆಗಿದೆ.

LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್‌ ಮಾಡಿ ಸಾಕು

ಸಿಲಿಂಡರ್ ಮೇಲಿನ ಬಿಲ್ ಮಾತ್ರ ಪಾವತಿಸಿದರೆ ಸಾಕು ಎಂಬುದು ನಿಯಮವಾಗಿದ್ದು, ಆದರೆ, ವಿತರಣಾ ಸಿಬ್ಬಂದಿಗೆ 20ರಿಂದ 40 ರೂ.ವರೆಗೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕೆಲವೆಡೆ ಡೆಲಿವರಿ ಸಿಬ್ಬಂದಿ 60 ಅಥವಾ 80 ರೂ.ವರೆಗೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂಬ ದೂರುಗಳಿವೆ.

ಈ ನಡುವೆ ಬಿಲ್‌ನಲ್ಲಿ ನಮೂದಿಸಲಾದ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸದೆಯೇ ಕಟ್ಟಡ/ಫ್ಲಾಟ್‌ಗಳಲ್ಲಿ ನೆಲದ ಸ್ಥಳವನ್ನು ಲೆಕ್ಕಿಸದೆ ಗ್ಯಾಸ್ ಸಿಲಿಂಡರ್ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿಯಾಗಿದೆ. LPG ಸಿಲಿಂಡರ್‌ನ ನಗದು ಜ್ಞಾಪಕ ಪತ್ರದಲ್ಲಿ ಸೂಚಿಸಲಾದ ಚಿಲ್ಲರೆ ಮಾರಾಟದ ಬೆಲೆಗಿಂತ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸಲು ದೇಶೀಯ ಅನಿಲ ವಿತರಕರಿಗೆ ಯಾವುದೇ ನಿಯಮಗಳು ಅಥವಾ ಸೂಚನೆಗಳಿಲ್ಲ.

ಎಲ್‌ಪಿಜಿ ಸಿಲಿಂಡರ್‌ನ ವಿತರಣೆಯ ಮೇಲೆ ಯಾವುದೇ ವಿತರಣಾ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲ. ಇನ್‌ವಾಯ್ಸ್‌ನಲ್ಲಿ ನಮೂದಿಸಲಾದ ಮೊತ್ತವನ್ನು ಮಾತ್ರ ಪಾವತಿಸಬೇಕಾಗುತ್ತದೆ ಒಂದು ವೇಳೆ ಹೆಚ್ಚಿನ ಹಣವನ್ನು ಕೇಳಿದ್ರೆ ಸಂಬಂಧಪಟ್ಟ ವಿತರಣೆ ಎಜೆನ್ಸಿಗೆ ದೂರು ನೀಡಬಹುದಾಗಿದೆ.