News

ಅಡುಗೆ ಅನಿಲ ಸಿಲೆಂಡರ್ ಬೆಲೆ ಹೆಚ್ಚಳ

01 July, 2021 11:18 PM IST By:

ಒಂದೇ ದಿನ ಅಡುಗೆ ಅನಿಲ ಸಿಲೆಂಡರ್ ಬೆಲೆ 25.50 ರೂಪಾಯಿ ಹೆಚ್ಚಳವಾಗಿದ್ದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.. ಈಗ ಪರಿಷ್ಕೃತ ದರದಂತೆ ದೆಹಲಿಯಲ್ಲಿ ಒಂದು 14.2 ಕೆಜಿ ತೂಕದ ಅಡುಗೆ ಅನಿಲ ಸಿಲೆಂಡರ್ ಬೆಲೆ 834.50 ರೂಪಾಯಿಗೆ ಏರಿಕೆಯಾಗಿದೆ.

ಪ್ರತಿತಿಂಗಳ ಮೊದಲ ದಿನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಉ ಗ್ಯಾಸ್ ಸಿಲೆಂಡರ್ ಗಳ ಬೆಲೆ ಪರಿಷ್ಕರಣೆ ಅಗತ್ಯೆ ಇದೇಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ. ಇದಕ್ಕಿಂತ ಮೊದಲು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಎಲ್ಪಿಜಿ ಸಿಲೆಂಡರ್ ಬೆಲೆ ಹೆಚ್ಚಿಸಲಾಗಿತ್ತು. ಕಳೆದ ಆರು ತಿಂಗಳಲ್ಲಿ 140 ರೂಪಾಯಿ ಹೆಚ್ಚಾಗಿದೆ.  ಮೇ ಮತ್ತು ಜೂನ್ ತಿಂಗಳಲ್ಲಿ ಸಿಲೆಂಡರ್ ಬೆಲೆ ಹೆಚ್ಚಳವಾಗಿರಲಿಲ್ಲ.

ಅಡುಗೆ ಅನಿಲ ಸಿಲೆಂಡರ್ ಬೆಲೆಯಂತೆ 19 ಕೆಜಿಯ ವಾಣಿಜ್ಯ ಸಿಲೆಂಡರ್ ಬೆಲೆಯನ್ನು ಸಹ 76 ರೂಪಾಯಿ ಹೆಚ್ಚಿಸಲಾಗಿದೆ. ಈಗ ಇದರ ಬೆಲೆ 1550 ರೂಪಾಯಿ ಆಗಿದೆ.  ಫೆಬ್ರವರಿ ಒಂದೇ ತಿಂಗಳಲ್ಲಿ ಮೂರು ಸಲ ಹೆಚ್ಚಿಸಲಾಗಿತ್ತು. ಫೆಬ್ರವರಿ 4 ರಂದು 25 ರೂಪಾಯಿ, 15 ರಂದು 50 ರೂಪಾಯಿ ಹಾಗೂ ಫೆಬ್ರವರಿ 25 ರಂದು 25 ರೂಪಾಯಿ ಹೆಚ್ಚಳವಾಗಿತ್ತು. ಮಾರ್ಚ್ ತಿಂಗಳಲ್ಲಿ ಮತ್ತೇ 25 ರೂಪಾಯಿ ಹೆಚ್ಚಿಸಲಾಗಿತ್ತು.

ದೇಶದ ಮಹಾನಗರಗಳಲ್ಲಿ ಸಿಲೆಂಡರ್ ಬೆಲೆ ಹೀಗಿದೆ

ವಾಣಿಜ್ಯ ನಗರಿ ಮುಂಬೈನಲ್ಲಿ 809 ಯಿಂದ 834.50 ರೂಪಾಯಿಗೆ ಏರಿಕೆಯಾಗಿದೆ. ಅದರೇ ರೀತಿ ಬೆಂಗಳೂರಿನಲ್ಲಿ 812 ರೂಪಾಯಿಯಿಂದ 837.50 ರೂಪಾಯಿಗೆ ಏರಿಕೆಯಾಗಿದೆ. ಕೊಲ್ಕೋತ್ತಾದಲ್ಲಿ 835.50 ರೂಪಾಯಿ ಸಿಲೆಂಡರ್ ಬೆಲೆ ಈಗ 861 ರೂಪಾಯಿ ಆಗಿದೆ. ಅದೇ ರೀತಿ ದೆಹಲಿಯಲ್ಲಿ  834.50 ರೂಪಾಯಿ ಆಗಿದೆ.

ದೇಶಾದ್ಯಂತ ಬಹುತೇಕ ಎಲ್ಲಾ ರಾಜ್ಯಗಳಲ್ಲಿ 100 ರೂಪಾಯಿಗೂ ಹೆಚ್ಚಿದ ಪೆಟ್ರೋಲ್ ಬೆಲೆ ಈಗ ಸಿಲೆಂಡರ್ ಗ್ರಾಹಕರಿಗೆ ಸಿಲೆಂಡರ್ ಬೆಲೆ ಹೆಚ್ಚಳ ನುಂಗಲಾರದ ತುತ್ತಾಗಿದೆ.