News

700 ರೂಪಾಯಿ ದಾಟಿದ ಸಿಲಿಂಡರ್‌ ಬೆಲೆ

05 February, 2021 1:41 PM IST By:
LPG Cylinder

ಕೊರೋನಾ ಸಂಕಷ್ಟದಿಂದ ಪರದಾಡುತ್ತಿರುವ ಜನಸಾಮಾನ್ಯರಿಗೆ ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆ ಒಂದೆಡೆಯಾದರೆ ಎಲ್.ಪಿ.ಜಿ ಸಿಲಿಂಡರ್ ಬೆಲೆ ಏರಿಕೆ ಮತ್ತೊಂದೆಡೆ ಶಾಕ್ ನೀಡಿದೆ. ಹೌದು ಪೆಟ್ರೋಲ್ ಡಿಸೆಲ್ 35 ಪೈಸಿ ಏರಿಕೆಯೊಂದಿಗೆ ಎಲ್ಪಿಜಿ ಸಿಲಿಂಡರ್ ಬೆಲೆಯೂ 25 ರೂಪಾಯಿ ಏರಿಕೆಯಾಗಿದೆ ಗ್ರಾಹಕರಿಗೆ ಶಾಕ್ ನೀಡಿದೆ.

ಫೆಬ್ರವರಿ 4 ರಿಂದ ಜಾರಿಯಾಗುವಂತೆ ಸಬ್ಸಿಡಿಯೇತರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 25 ರೂ. ಹೆಚ್ಚಿಸಲಾಗಿದೆ. ಪ್ರಸ್ತುತ ಸರಕಾರ ಯಾವುದೇ ನೇರ ನಗದು ವರ್ಗಾವಣೆಯಡಿ ಗ್ರಾಹಕರಿಗೆ ಸಬ್ಸಿಡಿ ನೀಡುತ್ತಿಲ್ಲ. ಈಗ ಸಬ್ಸಿಡಿ ಇಲ್ಲದ ಕಾರಣ ಪೂರ್ಣ ಮೊತ್ತ ಪಾವತಿಸುವ ಹೊರೆ ಗ್ರಾಹಕರಮೇಲ ಬಿದ್ದಿದೆ.

ಕಳೆದ ಡಿಸೆಂಬರ್‌ನಲ್ಲಿ ಒಂದೇ ತಿಂಗಳಲ್ಲಿ 2 ಬಾರಿ ಬೆಲೆ ಹೆಚ್ಚಳವಾಗಿತ್ತು. ಎರಡು ಬಾರಿಯೂ ತಲಾ 50 ರೂಪಾಯಿಯಂತೆ ದರ ಹೆಚ್ಚಿದ ಪರಿಣಾಮ ಸಿಲಿಂಡರ್‌ 100 ರೂ. ತುಟ್ಟಿಯಾಗಿತ್ತು. ಜನವರಿ ತಿಂಗಳ ಬಿಡುವಿನ ಬಳಿಕ ಇದೀಗ ಮತ್ತೆ 25 ರೂ. ಏರಿಕೆಯಾಗಿದ್ದರಿಂದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೊದಲೇ ಕೊರೋನಾ ಸಂಕಷ್ಟದಿಂದ ಹೊರಬರುತ್ತಿರುವ ಸಾಮಾನ್ಯ ಜನತೆಗೆ ಬೆಲೆ ಏರಿಕೆ ಇನ್ನಷ್ಟು ಸಂಕಷ್ಟಕ್ಕೆ ನೂಕಿದಂತಾಗಿದೆ.

ಬೆಂಗಳೂರಿನಲ್ಲಿ ಪರಿಷ್ಕೃತ 14.5ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ 722 ರೂಪಾಯಿಗೆ ಜಿಗಿದಿದೆ.ಎಲ್ಪಿಜಿ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಇಲ್ಲಿಯವರೆಗೆ ಎಲ್ಲೂ ಅಧಿಕೃತವಾಗಿ ಹೇಳಿಲ್ಲ. ಆದರೆ ಗ್ರಾಹಕರಿಗೆ ಕಳೆದ ಒಂದು ವರ್ಷದಿಂತ ಸಬ್ಸಿಡಿ ಹಣ ಬರುತ್ತಿಲ್ಲ.