News

weather ಕರ್ನಾಟಕದಲ್ಲಿ ವೀಕೆಂಡ್‌ ವೆದರ್‌ ಹೆಂಗಿದೆ ನೋಡಿ !

27 January, 2024 4:19 PM IST By: Hitesh
ರಾಜ್ಯದಲ್ಲಿ ಇನ್ನೆರಡು ದಿನ ವೆದರ್‌ ಹೆಂಗಿರಲಿದೆ ನೋಡಿ

ವೀಕೆಂಡ್‌ನಲ್ಲಿ ಕರ್ನಾಟಕದಲ್ಲಿ ಭಿನ್ನವಾದ ವೆದರ್‌ ಇದೆ. ಆಗಿದ್ದರೆ ಇನ್ನೆರಡು ದಿನದ ವೆದರ್‌ ಹೇಗಿರಲಿದೆ.

ಬಿಜೆಪಿಯ ಮೇಲೆ ಮತ್ತೆ ಸಿ.ಎಂ ಸಿದ್ದರಾಮಯ್ಯ ಅವರು ಕಿಡಿಕಾರಿದ್ದು ಏಕೆ ಎನ್ನುವ ಎಲ್ಲ ಸುದ್ದಿಗಳ ವಿವರ ಇಲ್ಲಿದೆ.

ಇಂದಿನ ಪ್ರಮುಖ ಸುದ್ದಿಗಳ ವಿವರ ಈ ರೀತಿ ಇದೆ.

1. ರಾಜ್ಯದ ವೀಕೆಂಡ್‌ ವೆದರ್‌; ಬಹುತೇಕ ಒಣಹವೆ
2.ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ: ಸಿ.ಎಂ ಸಿದ್ದರಾಮಯ್ಯ
3. ಹಾಲು ಉತ್ಪಾದನೆ ತಲಾವಾರಿನಲ್ಲೂ ನಾವೇ ಮೊದಲು
4. ಕೃಷಿ ಜಾಗರಣಕ್ಕೆ ಭೇಟಿ ನೀಡಿದ ಒಡಿಶಾದ 40 ಜನ ಪ್ರಗತಿಪರ ರೈತರು
5. 30 ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಅವಕಾಶ: ಫ್ರಾನ್ಸ್
6. ಪಿರಿಯಾಪಟ್ಟಣ: 150 ಕೆರೆ - ಕಟ್ಟೆಗಳಿಗೆ ಕಾವೇರಿ ನೀರು
7. ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಸಿ.ಎಂ ಸಿದ್ದರಾಮಯ್ಯ

1. ರಾಜ್ಯದಲ್ಲಿ ವಾರಾಂತ್ಯದಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಗುರುವಾರ ದಾವಣಗೆರೆ ಹಾಗೂ ಬೀದರ್‌ನಲ್ಲಿ ಅತೀ ಕಡಿಮೆ ಚಳಿ ದಾಖಲಾಗಿದ್ದು, 15 ಡಿಗ್ರಿ ಸೆಲ್ಸಿಯಸ್‌ ಚಳಿ ಇತ್ತು.

ಇನ್ನು ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರುತ್ತದೆ.

ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ

ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  
----------------------
2. ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಸಲು ಮುಂದಾಗಿದೆ.

2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕವಾಗಿರುವ ರಾಜ್ಯ ಸರ್ಕಾರದ 13,000 ಸರ್ಕಾರಿ

ನೌಕರರಿಗೆ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಿದೆ. ಈ ಸಂಬಂಧ ಮಾತನಾಡಿರುವ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣೆಗೂ ಪೂರ್ವದಲ್ಲಿ ಎನ್.ಪಿ.ಎಸ್ ನೌಕರರು ಮುಷ್ಕರು ಮಾಡುವ ವೇಳೆ ಸ್ಥಳಕ್ಕೆ

ಭೇಟಿನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿತ್ತು.

ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ ಎಂದಿದ್ದಾರೆ. 

----------------------
3. ಹಾಲು ಉತ್ಪಾದನೆಯಲ್ಲಿ ಭಾರತ, ವಿಶ್ವದಲ್ಲೇ ಅಗ್ರ ಸ್ಥಾನದಲ್ಲಿದೆ.

ಅಲ್ಲದೇ ದೇಶದಲ್ಲಿ ತಲಾವಾರು ಹಾಲು ಲಭ್ಯತೆಯಲ್ಲೂ ಕೂಡ ಮೊದಲ ಸ್ಥಾನದಲ್ಲಿದೆ

ಎಂದು ಕೇಂದ್ರ ಸಚಿವ ಪುರುಷೋತ್ತಮ ರೂಪಾಲ ಅವರು ಹೇಳಿದರು.

ರಾಷ್ಟ್ರೀಯ ಗೋಕುಲ್ ಮಿಷನ್ ಹಾಗೂ ಮೀನುಗಾರಿಗೆ ಇಲಾಖೆಯ

ಫಲಾನುಭವಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.   
------------------------- 

4. ನವದೆಹಲಿಯಲ್ಲಿರುವ ಕೃಷಿ ಜಾಗರಣದ ಪ್ರಧಾನ ಕಚೇರಿಯ ಚೌಪಾಲ್‌ಗೆ ಒಡಿಶಾದ 40 ಜನ ಪ್ರಗತಿಪರ ರೈತರು

ಶನಿವಾರ ಭೇಟಿ ನೀಡಿ ಅವರ ಅನುಭವವನ್ನು ಹಂಚಿಕೊಂಡರು. ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕರಾದ

ಎಂ.ಸಿ ಡೊಮಿನಿಕ್‌ ಅವರು ಹಾಗೂ ಕೃಷಿ ಜಾಗರಣ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೈನಿ ಡೊಮಿನಿಕ್‌ ಅವರು

ಎಲ್ಲ ರೈತರನ್ನೂ ಸನ್ಮಾನಿಸಿದರು. ದೂರದ ಒಡಿಶಾದಿಂದ ರಾಷ್ಟ್ರ ರಾಜಧಾನಿ ದೆಹಲಿಯವರೆಗಿನ ಅವರ ಪಯಣವನ್ನು

ಹಾಗೂ ಕೃಷಿಯಲ್ಲಿ ಒಡಿಶಾ ರೈತರು ಮಾಡಿರುವ ಸಾಧನೆಗೆ ಮೆಚ್ಚುಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಒಡಿಶಾದ ರೈತರು ಅವರ ಕೃಷಿ ಅನುಭವ ಹಾಗೂ ಕೃಷಿ ಜಾಗರಣದೊಂದಿಗೆ

ಅವರಿಗೆ ಒಡನಾಟದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಒಡಿಶಾದಿಂದ ಬಂದ ರೈತರಲ್ಲಿ ಮಹಿಳಾ

ರೈತರ ಸಂಖ್ಯೆಯೂ ಹೆಚ್ಚಾಗಿ ಇದ್ದದ್ದು ವಿಶೇಷವಾಗಿತ್ತು.
-------------------------
5. 2030ರ ವೇಳೆಗೆ 30 ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಅವಕಾಶ ಕಲ್ಪಿಸುವ ಗುರಿಯನ್ನು

ಫ್ರಾನ್ಸ್ ಹಾಕಿಕೊಂಡಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ ತಿಳಿಸಿದ್ದಾರೆ.     
------------------------- 

6. ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆ - ಕಟ್ಟೆಗಳಿಗೆ ಕಾವೇರಿ ನದಿಯ ನೀರು ತುಂಬಿಸುವ ಯೋಜನೆಯನ್ನು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ನಮ್ಮ ಸರ್ಕಾರದ ಒಂದು ಯೋಜನೆ ಕೋಲಾರ, ಚಿಕ್ಕಬಳ್ಳಾಪುರದ ಕೆರೆಗಳಿಗೆ

ಮರು ಹುಟ್ಟು ನೀಡಿದೆ. ಇದೇ ರೀತಿ ಪಿರಿಯಾಪಟ್ಟಣದ ಕೆರೆಗಳಿಗೆ ಮರು ಜೀವ ನೀಡಿ ಇಲ್ಲಿನ ಅಂತರ್ಜಲ

ವೃದ್ಧಿಗೆ ಈ ಯೋಜನೆ ಜೀವದಾನವಾಗಲಿದೆ ಎಂದಿದ್ದಾರೆ.
-------------------------
7. ಬಿಜೆಪಿ ಸರ್ಕಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕಿಡಿಕಾರಿದ್ದಾರೆ.

ನಮ್ಮದು ನುಡಿದಂತೆ , ಕೊಟ್ಟ ಮಾತಿನಂತೆ ನಡೆಯುವ ಸರ್ಕಾರ. ಆದರೆ ಬಿಜೆಪಿ ಕೊಟ್ಟ ಮಾತುಗಳಲ್ಲಿ

ಯಾವುದನ್ನೂ ಈಡೇರಿಸಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೂ ಕರ್ನಾಟಕದ ಪಾಲಿನ ಬರ

ಪರಿಹಾರದ ಹಣವನ್ನು ಕೊಡಿ ಎಂದು ಪತ್ರ ಬರೆಯುತ್ತಿದ್ದೇವೆ. ನಾವೇ ಖುದ್ದಾಗಿ ಹೋಗಿ ಪ್ರಧಾನಿ ಮೋದಿ

ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿದರೂ ಕೇಂದ್ರ ಸರ್ಕಾರ

ಒಂದೇ ಒಂದು ರೂಪಾಯಿಯನ್ನು ಸಹ ಕರ್ನಾಟಕಕ್ಕೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.