News

ನಗರ ಪ್ರದೇಶದ ವಿವಿಧ ಬಡಾವಣೆಯ ರಸ್ತೆಗಳನ್ನು ಬಂದ್ ಮಾಡಿದ ಸ್ಥಳೀಯ ನಿವಾಸಿಗಳು

25 April, 2020 4:33 PM IST By:

ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಕರ್ನಾಟಕದಲ್ಲಿ ಕೋರೋನಾ ಸೋಂಕಿತರ ಜಿಲ್ಲೆಯಷ್ಟೇ ಅಲ್ಲ ಇತರ ಜಿಲ್ಲೆಗಳಲ್ಲಿಯೂ ಜನರು ಸ್ವಯಂಪ್ರೇರಿತರಾಗಿ ಎಚ್ಚೆತ್ತುಕೊಂಡಿದ್ದಾರೆ.

ರಾಜ್ಯಾದ್ಯಂತ  ಲಾಕ್ಡೌನ್ ಮತ್ತು ನಿಷೇಧಾಜ್ಞೆ ಆದೇಶವನ್ನು ಪೆÇಲೀಸರು ಬಿಗಿಗೊಳಿಸಿದ್ದು, ಜನರು ಸ್ವಯಂಪ್ರೇರಿತವಾಗಿ ಎಚ್ಚೆತ್ತುಕೊಂಡಿz್ದÁರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಖರೀದಿಯಲ್ಲಿ ತೊಡಗಿದ್ದಾರೆ. ಮನೆಯಿಂದ ಸಹ ಹೊರಗಡೆ ಬರುತ್ತಿಲ್ಲ.

ಪೊಲೀಸರ ಲಾಠಿ ಏಟಿಗೆ ಹೆದರಿ ಕೊರೋನಾ ಸೋಂಕನ್ನು ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಕರ್ನಾಟಕದಲ್ಲಿ ಇತರ ರಾಜ್ಯಗಳಿಗೆ ಹೊಲಿಸಿದರೆ ಸೋಂಕಿತರ ಸಂಖ್ಯೆ ಕಡಿಮೆಯಿದೆ.  ದೇಶದಲ್ಲಿಯೇ ಮೊದಲ ಕೊರೋನಾ ಸೋಂಕಿತ ಸಾವನ್ನಪ್ಪಿದ್ದು ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಎಂಬುದು ಎಲ್ಲರಿಗೂ ಗೊತ್ತಿದ್ದ ವಿಷಯವಾಗಿದೆ. ಕೊರೋನಾ ಸಾವು ಮೊದಲು ಆಗುತ್ತಿದ್ದಂತೆಯೆ ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಗಂಡಾಂತರ ಸೃಷ್ಟಿ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ  ಜನರ ಸ್ವಯಂ ಪ್ರೇರಣೆ, ಪೆÇಲೀಸರ ದಿಟ್ಟ ಕ್ರಮ ಮತ್ತು ಸರ್ಕಾರದ ಕಟ್ಟುನಿಟ್ಟಿನಿಟ್ಟಿನ ಆದೇಶದಿಂದಾಗಿ ಸೋಂಕಿತರ ಸಂಖ್ಯೆ ಗಣನೀಯವಾಗಿದೆ ಕಡಿಮೆಯಾಗಿದೆ.

 ಜನರು ಹೈ-ಅಲರ್ಟ್ ಆಗಿದ್ದು, ನಗರದ ಎಲ್ಲಾ ಬಡಾವಣೆಗಳಲ್ಲಿ ತಾವೇ ರಸ್ತೆ ಬಂದ್ ಮಾಡಿದ್ದಾರೆ.  ನಗರದ ಬಡಾವಣೆಗಳಲ್ಲಿ ಜನರು ಸಂಚರಿಸದಂತೆ  ಸ್ಥಳೀಯ ನಾಗರಿಕರು ಬೇರೆ ಪ್ರದೇಶದ ಜನರು ಪ್ರವೇಶದಂತೆ ಹಾಗೂ ಅಲ್ಲಿದ್ದ ಜನರೂ ಹೊರ ಹೋಗದಂತೆ ಕ್ರಮ ಕೈಗೊಂಡಿದ್ದಾರೆ.

ಬಡಾವಣೆಗಳ ಮುಖ್ಯ ರಸ್ತೆಗಳಿಗೆ ಅಡ್ಡವಾಗಿ ಮುಳ್ಳಿನ ಕಂಟಿ, ಕಟ್ಟಿಗೆ ದಿಣ್ಣೆಗಳು, ಸಿಮೆಂಟ್ ಇಟ್ಟಿಗೆ ಹಾಗೂ ಪತ್ರಾಗಳು ಹಾಕಿದ್ದಾರೆ. ಕೆಲವರು ಗಾಜಿನ ಚೂರುಗಳು ಹಾಕಿದ್ದಾರೆ. ಮತ್ತೆ ಕೆಲ ಬಡಾವಣೆಯವರು ತಳ್ಳುಬಂಡಿ, ಟಾಂಗಾಗಳನ್ನು ನಿಲ್ಲಿಸಿ ಸ್ವಯಂ ನಿರ್ಬಂಧ ಹೇರಿದ್ದಾರೆ. ಕೆಲ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ನಿಲ್ಲಿಸಿದ್ದಾರೆ. ಪ್ರತಿಯೊಬ್ಬ ವಾಹನ ಸವಾರರ ದಾಖಲೆ ತಪಾಸಣೆ ಮಾಡಿಯೇ ಬಿಡುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಲಾಠಿ ರುಚಿ ತೋರಿಸುತ್ತಿದ್ದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದೆ.

ಬೇರೆ ಜಿಲ್ಲೆಗಳಿಂದ ಹಾಗೂ ಬೇರೆ ಬೇರೆ ಗ್ರಾಮಗಳಿಂದ ಜನರು ತಮ್ಮ ಗ್ರಾಮಗಳಿಗೆ ಕಾಲಿಡಬಾರದು, ಕೊರೋನು ಸೋಂಕನ್ನು ಗ್ರಾಮದ ಆಚೆಯೇ ಹೊಡೆದೋಡಿಸಬೇಕೆಂದು ಸಂಕಲ್ಪ ತಾಳಿದ ಗ್ರಾಮಸ್ಥರು ಸಹ ರಸ್ತೆಗಳನ್ನು ಅಗೆದು ಬಂದ್ ಮಾಡಿದ್ದಾರೆ. ಕೆಲವು ಕಡೆ ಮುಳ್ಳುಕಂಟಿಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದಾರೆ.