News

ನ. 5 ರೊಳಗೆ ಚಕ್ರಬಡ್ಡಿ ಮನ್ನಾ ಗ್ರಾಹಕರ ಖಾತೆಗೆ ಜಮೆ ಮಾಡಲು ಆರ್.ಬಿ.ಐ ಸೂಚನೆ

28 October, 2020 12:17 PM IST By:

ಮೊರಟೋರಿಯಂ ಅವಧಿಯ ಚಕ್ರ ಬಡ್ಡಿಯನ್ನು ನವೆಂಬರ್ 5 ರೊಳಗೆ ಮನ್ನಾ ಡಿ, ಗ್ರಾಹಕರ ಖಾತೆಗೆ ಜಮೆ ಮಾಡಬೇಕೆಂದು ಎಲ್ಲಾ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಹಾಗೂ ಬ್ಯಾಂಕುಗಳು 2 ಕೋಟಿ ವರೆಗಿನ ಸಾಲದ ಮೇಲೆ ಮಾರ್ಚ್‌ 1ರಿಂದ ಆರು ತಿಂಗಳ ಅವಧಿಗೆ ವಿಧಿಸಿದ್ದ ಚಕ್ರಬಡ್ಡಿಯ ಮೊತ್ತವನ್ನು ಮನ್ನಾ ಮಾಡಬೇಕು. ನಿರ್ದಿಷ್ಟ ಬಗೆಯ ಸಾಲಗಳ ಮೇಲಿನ ಆರು ತಿಂಗಳ ಅವಧಿಯ ಚಕ್ರಬಡ್ಡಿಯ ಮೊತ್ತವನ್ನು ತಾನೇ ಭರ್ತಿ ಮಾಡಿಕೊಡುವುದಾಗಿ ಕೇಂದ್ರ ಸರ್ಕಾರವು ಹೇಳಿದೆ.

ಚಕ್ರಬಡ್ಡಿ ಮನ್ನಾ ಯೋಜನೆಯನ್ನು ಸಾಧ್ಯವಾದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು ಎಂದು ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 14ರಂದು ಸೂಚಿಸಿತ್ತು.

ಗೃಹ, ಶಿಕ್ಷಣ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ಎಂಎಸ್‌ಎಂಇ ಸಾಲ, ಗ್ರಾಹಕ ವಸ್ತುಗಳ ಖರೀದಿಗೆ ಪಡೆದ ಸಾಲ ಮುಂತಾದವು ಚಕ್ರಬಡ್ಡಿ ಮನ್ನಾ ಯೋಜನೆಯ ಪ್ರಯೋಜನ ಪಡೆಯಲಿವೆ.

ಮಾರ್ಚ್ 1 ರಿಂದ ಆಗಸ್ಟ್ 31ರವರೆಗಿನ ಅವಧಿಗೆ ಆಯಾ ಸಾಲ ನೀಡುವ ಸಂಸ್ಥೆಗಳಿಂದ ಸರಳ ಬಡ್ಡಿ ಮತ್ತು ಸಂಯುಕ್ತ ಬಡ್ಡಿ ನಡುವಿನ ವ್ಯತ್ಯಾಸವನ್ನು ಜಮಾ ಮಾಡುವ ಮೂಲಕ ಕೆಲವು ವರ್ಗದ ಸಾಲಗಾರರಿಗೆ ಎಕ್ಸ್-ಗ್ರೇಷಿಯಾ ಪಾವತಿ ಕಡ್ಡಾಯಗೊಳಿಸುತ್ತದೆ " ಎಂದಿದೆ. ಈ ಯೋಜನೆ ಅನುಸಾರ ಸರ್ಕಾರ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸವನ್ನು ಪಾವತಿಸಲಿದೆ.