News

ಗುಡ್‌ನ್ಯೂಸ್‌: ಮರಾಠ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ! ಅರ್ಹತೆಗಳೇನು ತಿಳಿಯಿರಿ

10 October, 2023 5:20 PM IST By: Maltesh
Loan facility from Maratha Development Corporation!

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿಗೆ ಮರಾಠ ಸಮುದಾಯಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ  ಆಹ್ವಾನಿಸಲಾಗಿದೆ.

ಶಹಜೀರಾಜೇ ಸಮೃದ್ಧಿ ಸ್ವಯಂ ಉದ್ಯೋಗ ವೈಯಕ್ತಿಕ ಸಾಲ, ಅರಿವು-ಶೈಕ್ಷಣಿಕ ಸಾಲ, 2 ರಿಂದ 5 ಎಕರೆ ಜಮೀನು ಹೊಂದಿದವರಿಗೆ ಜೀಜಾವು-ಜಲ ಭಾಗ್ಯ (ಗಂಗಾ ಕಲ್ಯಾಣ ನೀರಾವರಿ), 8 ಲಕ್ಷ ಆದಾಯ ಮಿತಿ ಹೊಂದಿದವರಿಗೆ ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ,ಮರಾಠ ಮಿಲ್ಟ್ರಿ ಹೋಟೆಲ್

ಸ್ವಾವಲಂಬಿ ಸಾರಥಿ, ಬ್ಯಾಂಕುಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಹಾಗೂ ಯುವ ಜನರಿಗೆ ಸರ್ಕಾರಿ ತರಬೇತಿ ಸಂಸ್ಥೆಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಗಳಿಗೆ ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆ ದಿನ. ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆ ದಿನಾಂಕ ಇರುವುದಿಲ್ಲ.

ರಾಜ್ಯದ ಖಾಯಂ ನಿವಾಸಿಗಳಾದ, ಪ್ರವರ್ಗ-3(ಬಿ) ಅಡಿಯಲ್ಲಿ ಬರುವ ಮರಾತ, ಮರಾಠ, ಅರೆ ಕ್ಷತ್ರಿ, ಅರೆ ಮರಾಠ, ಆರ್ಯಮರಾಠ, ಆರ್ಯ, ಆರ್ಯರು, ಕೊಂಕಣ, ಮರಾಠ, ಕ್ಷತ್ರಿಯ ಮರಾತ,/ಕ್ಷತ್ರಿಯ ಮರಾಠ, ಕುಳವಾಡಿ ಸಮುದಾಯಗಳಿಗೆ ಸೇರಿದ ಜಾತಿ ಆದಾಯ ಪ್ರಮಾಣ ಪತ್ರ ಹೊಂದಿದ, 18 ರಿಂದ 55 ವರ್ಷಗಳ ಮಿತಿಯಲ್ಲಿರುವ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ಕುಟುಂಬದ ಒಬ್ಬರಿಗೆ  ಮಾತ್ರ ಸಾಲ ಸೌಲಭ್ಯ ಒದಗಿಸಲಾಗುವುದು, ಶೈಕ್ಷಣಿಕ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ ಸಾಲ ಪಡೆಯುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 30 ವರ್ಷಗಳು ಇರಬೇಕು. ಶೈಕ್ಷಣಿಕ ಸಾಲ ಮಂಜೂರಾತಿ ವಾರ್ಷಿಕ ರೂ.3.5 ಲಕ್ಷ, ಇತರೆ ಯೋಜನೆಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ವಾರ್ಷಿಕ ರೂ.98 ಸಾವಿರ ಹಾಗೂ ನಗರ ಪ್ರದೇಶದಲ್ಲಿ ವಾರ್ಷಿಕ ರೂ.1.20 ಲಕ್ಷ ಆದಾಯ ಮಿತಿ ನಿಗದಿಪಡಿಸಲಾಗಿದೆ. ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ನಿಯಮಾನುಸಾರ ಮಹಿಳೆಯರಿಗೆ ಶೇ.33 ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಿಗಳಿಗೆ ಶೇ.1% ರಷ್ಟು ಮೀಸಲಾತಿಯನ್ನು ನೀಡಲಾಗುವುದು.

ಸೇವಾಸಿಂಧು ಪೋರ್ಟಲ್‍ನಡಿ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ-ಒನ್, ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‍ನಡಿ ಅರ್ಜಿ ಸಲ್ಲಿಸಬಹುದು, ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಬಯಸುವವರೂಸಹ ಆನ್‍ಲೈನ್ ನಲ್ಲಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವುದು,

ಒಂದು ಕುಟುಂಬದ ಬಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು, ಅರ್ಜಿದಾರರು ಸರ್ಕಾರದ ಹಾಗೂ ನಿಗಮದ ನಿರ್ದೇಶಕ ಮಂಡಳಿಯು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ ಮತ್ತು ನಿಬಂಧನೆಗಳನ್ನು ಹೊಂದಿದವರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‍ಸೈಟ್ https://kmcdc.karnataka.gov.in  ಸಂಪರ್ಕಿಸಬಹುದು.