News

ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ, ಚುನಾವಣಾ ಆಯೋಗ ಹೇಳಿದ್ದೇನು ಗೊತ್ತೆ ?

20 December, 2022 1:49 PM IST By: Hitesh
Linking Aadhaar number to voter ID card, do you know what Election Commission said?

ಆಧಾರ್‌ಗೆ ವಿವಿಧ ಪ್ರಮುಖ ದಾಖಲೆಗಳನ್ನು ಜೋಡಣೆ ಮಾಡುವ ಸಂಬಂಧವಾಗಿ ಹಲವು ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇವೆ.

ಈ ಸಂಬಂಧ ಕೇಂದ್ರ ಸರ್ಕಾರ ತನ್ನ ನಿಲುವು ಹಾಗೂ ವಿವಿಧ ಪ್ರಮುಖ ದಾಖಲೆಗೆ ಯಾವ ಉದ್ದೇಶದಿಂದ ಆಧಾರ್‌ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ ಎನ್ನುವುದರ ಕುರಿತು ಸಹ ತನ್ನ ನಿಲುವನ್ನು ಖಚಿತಪಡಿಸುತ್ತಲೇ ಬಂದಿದೆ.

ಪ್ರಮುಖವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಮುಖ ಯೋಜನೆಗಳ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವುದು ಇದರ ಪ್ರಮುಖ ಉದ್ದೇಶ ಎಂದು ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ.

ಇದೀಗ ಮತದಾರರ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವ ವಿಷಯವು ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನು ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅವಕಾಶ ನೀಡಿದ್ದರೂ, ಈವರೆಗೆ ಒಂದೇ ಒಂದು ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡಿಲ್ಲ ಎನ್ನಲಾಗಿದೆ.

ಕಳೆದ ವರ್ಷ ಆಗಸ್ಟ್ 1ರಂದು ಸ್ವಯಂಪ್ರೇರಿತ ಆಧಾರ್‌-ವೋಟರ್‌ ಐಡಿ ಜೋಡಣೆ ಆಂದೋಲನ ಆರಂಭಿಸಿದ ನಂತರ ಡಿ.12ರವರೆಗೆ 54.32 ಕೋಟಿ ಮತದಾರರಿಂದ ಆಧಾರ್‌ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ.

ಆದರೆ, ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆಧಾರ್‌ ಜೋಡಣೆ ಪ್ರಕ್ರಿಯೆಯೇ ಆರಂಭವಾಗದೆ ಇರುವುದರಿಂದಾಗಿ ಯಾವುದೇ ನಕಲಿ ಮತದಾರರ ಗುರುತಿನ ಚೀಟಿಯನ್ನು ರದ್ದುಪಡಿಸಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಸಲ್ಲಿಕೆಯಾದ ಅರ್ಜಿಗೆ ಉತ್ತರಿಸಿದೆ.

Cylinder ಬಳಕೆದಾರರಿಗೆ ಸಿಹಿಸುದ್ದಿ: ಮುಂದಿನ ತಿಂಗಳಿಂದ ಕೇವಲ 500ಕ್ಕೆ ಸಿಗಲಿದೆ ಸಿಲಿಂಡರ್‌ !

ಇತ್ತೀಚೆಗಷ್ಟೇ ದೇಶದ 95 ಕೋಟಿ ಮತದಾರರ ಪೈಕಿ ಅರ್ಧದಷ್ಟುಮತದಾರರ ವೋಟರ್‌ ಐಡಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗದ (Election Commission) ಅಧಿಕಾರಿಗಳು ಹೇಳಿದ್ದಾರೆಂದು ಎನ್ನಲಾಗಿತ್ತು. ಆದರೆ, ಆರ್‌ಟಿಐ (RTI application)ಅರ್ಜಿಗೆ ಅದಕ್ಕೆ ತದ್ವಿರುದ್ಧವಾದ  ಮಾಹಿತಿ ಲಭ್ಯವಾಗಿದೆ.

ಮತದಾರರ ಗುರುತಿನ ಚೀಟಿಯನ್ನು (voter ID card) ಆಧಾರ್‌ (Aadhaar card) ಜೊತೆ ಜೋಡಣೆ ಮಾಡಲು ಅವಕಾಶ ನೀಡುವ ಚುನಾವಣಾ ಕಾಯ್ದೆಯ ತಿದ್ದುಪಡಿಯನ್ನು ಜೂನ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು.  

ಈ ಪ್ರಕ್ರಿಯೆ ಮುಗಿದ ನಂತರದಲ್ಲಿ ಅಂದರೆ, ಆ.1ರಿಂದ ಚುನಾವಣಾ ಆಯೋಗವು ಮತದಾರರಿಗೆ ತಮ್ಮ ಆಧಾರ್‌ ಸಂಖ್ಯೆಯನ್ನು ಸ್ವಯಂಪ್ರೇರಿತವಾಗಿ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಜನರು ಆಧಾರ್‌ ಸಂಖ್ಯೆ ಸಲ್ಲಿಸಲು 2023ರ ಏ.1 ಕಡೆಯ ದಿನವಾಗಿದೆ.  

 PM Kisan| ಪಿ.ಎಂ ಕಿಸಾನ್‌ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ