News

ಇನ್ನು ಮುಂದೆ ಗೋ ಸಾಗಣೆಗೆ ಪರವಾನಗಿ ಕಡ್ಡಾಯಗೊಳಿಸಲಾಗಿದೆ

18 January, 2021 6:00 AM IST By:
Cattle

ಪ್ರತಿಪಕ್ಷಗಳ ಪ್ರತಿರೋಧದ ನಡುವೆಯೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ನಿರ್ಧರಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಯು ರಾಜ್ಯದಲ್ಲಿ ಜನವರಿ 18 ರಿಂದ ಜಾರಿಯಾಗುವಂತೆ ರಾಜ್ಯ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.ಗೋವು ಸಾಗಾಟದ ಸಂದರ್ಭ ಕೆಲವು ನಿಯಮಗಳನ್ನು ರೂಪಿಸಲಾಗಿದೆ.

ರೈತರು ಕೃಷಿ ಉದ್ದೇಶಕ್ಕೆ ಸ್ಥಳೀಯವಾಗಿ 15 ಕಿಲೋಮೀಟರ್‌ ದೂರದವರೆಗೆ ಪರವಾನಗಿ ಇಲ್ಲದೆ ಎರಡು ಹಸು ಮತ್ತು ಎರಡು ಕರುಗಳನ್ನು ಮಾತ್ರ ಕೊಂಡೊಯ್ಯಬಹುದು. ರಾತ್ರಿ ವೇಳೆ ಗೋವುಗಳ ಸಾಗಣೆ ಸಂಪೂರ್ಣ ನಿಷೇಧ ಮಾಡಲಾಗಿದೆ.

 ಕೃಷಿ ಅಥವಾ ಪಶುಸಂಗೋಪನೆಯ ಉದ್ದೇಶಕ್ಕೆ ಹಸು, ಕರು, ಎತ್ತು, ಎಮ್ಮೆ, ಕೋಣಗಳನ್ನು ಸಾಗಿಸುವಾಗಲೂ ಸಾಗಣೆಯ ಪರವಾನಗಿ ಹೊಂದಿರಬೇಕಾ ದುದು ಕಡ್ಡಾಯ. ಅದರೊಂದಿಗೆ ಮಾಲೀಕತ್ವದ ದಾಖಲೆ ಮತ್ತು ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನೂ ಹೊಂದಿರಬೇಕು.

ಜಾನುವಾರುಗಳ ಮಾಲೀಕರು ಮಾಲೀಕತ್ವದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಸಾಗಣೆ ಪರವಾನಗಿ ಪಡೆಯುವುದು ಕಡ್ಡಾಯ. ನಿಯಮಗಳ ಉಲ್ಲಂಘನೆಯಾದಲ್ಲಿ ಗೋವುಗಳ ಮಾಲೀಕರು ಅಥವಾ ಅವರ ಪ್ರತಿನಿಧಿ, ವಾಹನ ಮಾಲೀಕರು, ಜತೆಗಿರುವ ಸಿಬ್ಬಂದಿ ಕೂಡ ಹೊಣೆಗಾರರಾಗುತ್ತಾರೆ ಎಂಬ ಅಂಶ ಕರಡು ನಿಯಮಗಳಲ್ಲಿದೆ.

25 ಕಿ.ಮೀ. ವೇಗಮಿತಿ: ಗೋವುಗಳನ್ನು ಸಾಗಿಸುವ ವಾಹನವನ್ನು ಪ್ರತಿ ಗಂಟೆಗೆ 25 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಓಡಿಸುವಂತಿಲ್ಲ. ವಾಹನದೊಳಗೆ ಗೋವುಗಳು ಪ್ರತ್ಯೇಕವಾಗಿ ಇರುವುದಕ್ಕೆ ಪೂರಕವಾಗಿ ವಿಭಜನಾ ವ್ಯವಸ್ಥೆ ಮಾಡಿರ

ಬೇಕು. 100 ಕೆ.ಜಿ.ಗಿಂತ ಕಡಿಮೆ ತೂಕ ಹೊಂದಿದ್ದಲ್ಲಿ 1.5 ಚ.ಮೀ.ಮತ್ತು 100 ಕೆ.ಜಿ.ಗಿಂತ ಹೆಚ್ಚು ತೂಕ
ವಿದ್ದಲ್ಲಿ 2 ಚ.ಮೀ. ಸ್ಥಳಾವಕಾಶ ಕಲ್ಪಿಸ ಬೇಕು. ಸಾಗಣೆ ಸಮಯದಲ್ಲಿ ಗೋವು ಗಳ ಸಾವು ಸಂಭವಿಸಿದರೆ ಮರಣೋತ್ತರ ಪರೀಕ್ಷೆ ನಡೆಸಿ, ವರದಿ ಪಡೆದ ಬಳಿಕವೇ ಮೃತದೇಹವನ್ನು ಸಾಗಿಸಬಹುದು.