News

LIC: ಭಾರತೀಯ ಜೀವ ವಿಮಾ ನಿಗಮದಲ್ಲಿ ಬಂಪರ್‌ ನೇಮಕಾತಿ..ಅರ್ಜಿ ಸಲ್ಲಿಕೆಗೆ ನಾಳೆ ಕೊನೆಯ ದಿನ

24 August, 2022 2:19 PM IST By: Maltesh
LIC Recruitment 2022 Last Date tomorrow

LIC Recruitment: ನೀವು ಪದವೀಧರರಾಗಿದ್ದರೆ  LICಯಲ್ಲಿ ಕೆಲಸ ಪಡೆಯಲು ಇದು ಉತ್ತಮ ಅವಕಾಶವಾಗಿದೆ. ಸದ್ಯ LIC Housing Finance Limited ಪದವೀಧರ ಉತ್ತೀರ್ಣರಾದ ಅಭ್ಯರ್ಥಿಗಳಿಗೆ  ಉದ್ಯೋಗ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

LIC Recruitment-2022 : ನಾಳೆಯೇ ಕೊನೆ ದಿನ

LIC Housing Finance Limitedನ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಸೈಟ್ lichousing.comಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಇದು 25ನೇ ಆಗಸ್ಟ್ 2022 ರಂದು ಕೊನೆಗೊಳ್ಳುತ್ತದೆ.

ಗುಡ್‌ನ್ಯೂಸ್‌: ಚಿನ್ನದ ಬೆಲೆಯಲ್ಲಿ ಬಂಪರ್‌ ಇಳಿಕೆ..ಎಷ್ಟು..?

LIC Recruitment-2022 : ಎಷ್ಟು ಹುದ್ದೆಗಳಿವೆ.

LIC Housing Finance Limitedನ ಈ ನೇಮಕಾತಿಯಲ್ಲಿ ಒಟ್ಟು 80 ಹುದ್ದೆಗಳಿವೆ.

ವ್ಯವಸ್ಥಾಪಕರ -30

ಸಹಾಯಕರ -50

LIC Recruitment-2022 : ಶೈಕ್ಷಣಿಕ ಅರ್ಹತೆ ಏನು..?

ಆಸಕ್ತ ಅಭ್ಯರ್ಥಿಗಳು LIC Housing Finance Limitedನ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಇದು ಉದ್ಯೋಗಾಕಾಂಕ್ಷಿಗಳಿಗೆ ನೀಡಿರುವ ಕನಿಷ್ಠ ವಿದ್ಯಾರ್ಹತೆಯಾಗಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆಗಳಿಗಾಗಿ ಆಸಕ್ತ ಅಭ್ಯರ್ಥಿಗಳು ಅಧಿಕೃತ ಸೈಟ್‌ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

ನಿಮ್ಮ ಅಕೌಂಟ್‌ನಲ್ಲಿ ಮಿನಿಮಮ್‌ ಬ್ಯಾಲೆನ್ಸ್ ಎಷ್ಟು ಇರಬೇಕು ತಿಳಿದುಕೊಳ್ಳಿ, ಇಲ್ಲದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ

LIC Recruitment-2022: ವಯೋಮಿತಿ

ಈ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ಸಹಾಯಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ವರ್ಷದಿಂದ 40 ವರ್ಷಗಳ ನಡುವೆ ಇರಬೇಕು.

ಆದರೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 28 ವರ್ಷ ವಯಸ್ಸಿನವರಾಗಿರಬೇಕು.

LIC Recruitment-2022:  ಆಯ್ಕೆ ಹೇಗೆ..?

ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯ ಅವಧಿ - 120 ನಿಮಿಷಗಳು.

200 ಪ್ರಶ್ನೆಗಳನ್ನು ಕೇಳಲಾಗುತ್ತದೆ.

LIC Recruitment-2022:  ವೇತನಶ್ರೇಣಿ

ಇಲ್ಲಿ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 33960 ರೂಪಾಯಿ ವೇತನ ನೀಡಲಾಗುತ್ತದೆ.

ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದವರಿಗೆ ಸುಮಾರು 80 ಸಾವಿರ ರೂಪಾಯಿಗಳನ್ನು ವೇತನ ನಿಗದಿಪಡಿಸಲಾಗಿದೆ. ಈ ಕುರಿತು ಅಧಿಸೂಚನೆಯಲ್ಲಿ ವಿವರ ನೀಡಲಾಗಿದೆ.

LIC Recruitment-2022: ಮಹತ್ವದ ದಿನಾಂಕಗಳು

ನೋಂದಣಿ ಪ್ರಕ್ರಿಯೆ ಪ್ರಾರಂಭ ದಿನಾಂಕ: 4ನೇ ಆಗಸ್ಟ್ 2022.

ನೋಂದಣಿಯ ಕೊನೆಯ ದಿನಾಂಕ: 25ನೇ ಆಗಸ್ಟ್ 2022.

 ಪ್ರವೇಶ ಕಾರ್ಡ್‌ನ ವಿತರಣೆ: ಪರೀಕ್ಷೆಗೆ 7 ರಿಂದ 14 ದಿನಗಳ ಮೊದಲು.

ಪರೀಕ್ಷೆಯ ದಿನಾಂಕ: ಸೆಪ್ಟೆಂಬರ್ ಅಥವಾ ಅಕ್ಟೋಬರ್ 2022 (ತಾತ್ಕಾಲಿಕ)