News

ಎಲ್‌ಐಸಿಯಿಂದ ನೂತನ ಬಚತ್ ಪ್ಲಸ್ ಪಾಲಿಸಿ ಯೋಜನೆ

19 March, 2021 9:51 AM IST By:

ಆರ್ಥಿಕ ರಕ್ಷಣೆ ಹಾಗೂ ಉಳಿತಾಯದ ಸೌಲಭ್ಯ ಒದಗಿಸುವ ‘ಬಚತ್ ಪ್ಲಸ್’ ವಿಮಾ ಪಾಲಿಸಿಗೆ ನೂತನ ವಿಮೆ ಯೋಜನೆಯನ್ನು ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಪರಿಚಯಿಸಿದೆ.

ಇದು ಐದು ವರ್ಷಗಳ ಅವಧಿಯ ಪಾಲಿಸಿ. ವಿಮೆ ಅವಧಿ ಪೂರ್ಣಗೊಂಡ ನಂತರ ಪಾಲಿಸಿದಾರರಿಗೆ ನಿರ್ದಿಷ್ಟ ಮೊತ್ತ ಸಿಗಲಿದೆ ಅಥವಾ ಪಾಲಿಸಿ ಹೊಂದಿರುವವರು ಪಾಲಿಸಿಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಹಣಕಾಸಿನ ನೆರವು ಸಿಗಲಿದೆ ಎಂದು ಎಲ್‌ಐಸಿ ತಿಳಿಸಿದೆ.

ಯಾವುದೇ ಷೇರು ಮಾರುಕಟ್ಟೆಯಲ್ಲಿ ಹರೂಡುವ ಉದ್ದೇಶವಿಲ್ಲದ, ವೈಯಕ್ತಿಕ ಉಳಿತಾಯ ಯೋಜನೆಯಾಗಿರುವ ಬಚತ್ ಪ್ಲಸ್ ಪಾಲಿಸಿದಾರರಿಗೆ ರಕ್ಷಣೆಯ ಜೊತೆಗೆ ಹಣ ಉಲಿತಾಯ ಮಾಡುವ ಅವಕಾಶವನ್ನೂ ಕಲ್ಪಿಸುತ್ತದೆ. ಈ ಯೋಜನೆಯು ಮರಣ ಹೊಂದಿದ ಪಾಲಿಸಿದಾರರ ಕುಟುಂಬಕ್ಕೆ ಪಾಲಿಸಿಯ ಅವಧಿ ಪೂರ್ಣಗೊಳ್ಳುವ ಮುನ್ನ ಯಾವುದೇ ಸಮಯದಲ್ಲಿ ಆರ್ಥಿಕ ಸಹಾಯ ಒದಗಿಸುವುದರೊಂದಿಗೆ ಬದುಕುಳಿದ ಪಾಲಿಸಿದಾರರಿಗೆ ಅವಧಿ ಪೂರ್ಣಗೊಂಡ ನಂತರ ಸಂಚಿತ ವಿಮಾ ಮೊತ್ತವನ್ನು ಒದಗಿಸಲಿದೆ.

‘ಸಾವಿನ ನಂತರ ಸಿಗಬೇಕಿರುವ ಮೊತ್ತ ಎಷ್ಟು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದರಲ್ಲಿದೆ. ಇದನ್ನು ಎಲ್‌ಐಸಿ ವೆಬ್‌ಸೈಟ್‌ ಮೂಲಕ ಅಥವಾ ಎಲ್‌ಐಸಿ ಏಜೆಂಟರ ಮೂಲಕ ಖರೀದಿಸಬಹುದು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪಾಲಿಸಿ ಪಡೆಯುವವರು ಪ್ರಿಮಿಯಂ ಮೊತ್ತವನ್ನು ಒಟ್ಟಿಗೇ (ಸಿಂಗಲ್ ಪ್ರಿಮಿಯಂ) ಅಥವಾ 5 ಸೀಮಿತ ಅವಧಿಗೆ ಪಾವತಿಸಲು ಆಯ್ಕೆ ಮಾಡಿಕೊಳ್ಳಬಹುದು. ಸಿಂಗಲ್ ಪ್ರಿಮಿಯಂ ಹಾಗೂ ಸೀಮಿತ ಪ್ರಿಮಿಯಂ ಪಾವತಿಯ ಅಡಿಯಲ್ಲಿ ಯೋಜನೆಯಲ್ಲಿ ಲಭ್ಯವಿರುವ ಎರಡು ಆಯ್ಕೆಗಳ ಅನುಸಾರ ವ್ಯಕ್ತಿಯ ಮರಣದ ನಂತರ ದೊರೆಯುವ ವಿಮಾ ಮೊತ್ತವನ್ನು ಆರಿಸಿಕೊಳ್ಳಬಹುದು.

ಪಾಲಿಸಿ ಜಾರಿಯಲ್ಲಿದ್ದ ಅವಧಿಯಲ್ಲಿ ಪಾಲಿಸಿದಾರನು ಅಕಾಲಿಕ ಮರಣ ಹೊಂದಿದರೆ ವಿಮಾ ಮೊತ್ತ ಪಾವತಿಸಲಾಗುತ್ತದೆ. ಪಾಲಿಸಿ ಅವಧಿ ಪೂರ್ಣಗೊಳ್ಳುವ ಮೊದಲು ಹಾಗೂ ಐದು ಪಾಲಿಸಿ ವರ್ಷಗಳು ಪೂರ್ಣಗೊಂಡ ನಂತರ ಪಾಲಿಸಿದಾರರ ಸಾವು ಸಂಭವಿಸಿದರೆ ವಿಮೆ ಮೊತ್ತದ ಜೊತೆಗೆ ಯಾವುದಾದರೂ ಹೆಚ್ಚುವರಿ ಲಾಯಲ್ಡಿ (ಇದ್ದರೆ) ಅದನ್ನೂ ಸೇರಿಸಿ ಪಾವತಿಸಲಾಗುತ್ತದೆ