News

ಜೂ.5ರಂದು ಆರೋಗ್ಯ ಮತ್ತು ಆದಾಯಕ್ಕಾಗಿ ಪರಿಸರ ಪುನಶ್ಚೇತನ’ ಕುರಿತು ಉಪನ್ಯಾಸ

04 June, 2021 9:38 PM IST By: KJ Staff

ವಿಶ್ವ ಪರಿಸರ ದಿನದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರಗಳ ವತಿಯಿಂದ ಪರಿಸರ ಪುನಶ್ಚೇತನ ಕುರಿತು ಜೂನ್ 5ರಂದು ವಿಶೇಷ ಉಪನ್ಯಾಸ ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜೂನ್ 5ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ‘ಆರೋಗ್ಯ ಮತ್ತು ಆದಾಯಕ್ಕಾಗಿ ಪರಿಸರ ಪುನಶ್ಚೇತನ’ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಗೂಗಲ್ ಮೀಟ್ ವೇದಿಕೆಯಲ್ಲಿ ಉಪನ್ಯಾಸವು ನಡೆಯಲಿದ್ದು, ಆಸಕ್ತರು  https://meet.google.com/rgt-fdib-ddp ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಉಪನ್ಯಾಸದಲ್ಲಿ ಭಾಗವಹಿಸಬಹುದು.

ಈ ವೇಳೆ ಐಸಿಎಂಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ.ದೇವರಾಜ ಟಿ.ಎನ್. ಅವರು, ‘ನಗರಗಳಲ್ಲಿ ಕಿರು ಅರಣ್ಯಗಳ ಸೃಷ್ಟಿಯ ಅನಿವಾರ್ಯತೆ’ ಕುರಿತು ಉಪನ್ಯಾಸ ನೀಡುವರು. ‘ಅರಣ್ಯ ಇಲಾಖೆಯ ಸೌಲಭ್ಯಗಳು’ ವಿಷಯ ಕುರಿತು ದಾವಣಗೆರೆಯ ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿರುವ ಟಿ.ರಾಜಣ್ಣ ಅವರು ಮಾಹಿತಿ ನೀಡುವರು. ಐಸಿಎಂಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತç ವಿಷಯ ತಜ್ಞರಾಗಿರುವ ಮಲ್ಲಿಕಾರ್ಜುನ ಬಿ.ಓ. ಅವರು, ‘ಕೃಷಿ ಅರಣ್ಯದ ಉಪಯುಕ್ತತೆ’ ಕುರಿತು ಉಪನ್ಯಾಸ ಪ್ರಸ್ತುತಪಡಿಸುವರು.

ಪರಿಸರ ಸಂರಕ್ಷಣೆ ಮಹತ್ವ ಕುರಿತು ಕಾರ್ಯಾಗಾರ

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಹನುಮನಮಟ್ಟಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜೂನ್ 5 ರಂದು ಶನಿವಾರ ಬೆಳಗ್ಗೆ 10.30ಕ್ಕೆ ‘ಪರಿಸರ ಸಂರಕ್ಷಣೆಯ ಮಹತ್ವ ಕುರಿತು ರೈತರಿಗಾಗಿ ಆನ್‌ಲೈನ್ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ಶಾಸ್ತç ವಿಷಯ ತಜ್ಞರಾಗಿರುವ ಡಾ.ಶಾಂತವೀರಯ್ಯ, ಹಾವೇರಿ ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ ಹಾಗೂ ಗದಗ ಜಿಲ್ಲೆ ಮುಳಗುಂದದ ಪ್ರಗತಿಪರ ರೈತ ಮಹಿಳೆ ಹಾಗೂ ಪರಿಸರ ಪ್ರೇಮಿ ಮಂಗಳಾ ಕಿರಣ ನೀಲಗುಂದ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.

ಗೂಗಲ್ ಮೀಟ್ ವೇದಿಕೆಯಲ್ಲಿ ಕಾರ್ಯಾಗಾರ ನಡೆಯಲಿದ್ದು, ಆಸಕ್ತರು https://meet.google.com/mib-nswp-abs ಲಿಂಕ್ ಒತ್ತುವ ಮೂಲಕ ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ.ಅಶೋಕ ಪಿ. ಅವರು ತಿಳಿಸಿದ್ದಾರೆ.