News

ಪ್ರಮುಖ ಬೆಳೆಗಳ ಮಾರುಕಟ್ಟೆ ವಿಶ್ಲೇಷಣೆ ಕುರಿತು ಜೂನ್ 18ರಂದು ಉಪನ್ಯಾಸ

17 June, 2021 10:57 PM IST By:

ದಾವಣಗೆರೆ ನಗರದ ಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಭಾರತದ ಸ್ವಾತಂತ್ರೊö್ಯÃತ್ಸವ ಅಮೃತ ಮಹೋತ್ಸವದ ಅಂಗವಾಗಿ ಜೂನ್ 18ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ‘ದಾವಣಗೆರೆ ಜಿಲ್ಲೆಯ ಪ್ರಮುಖ ಬೆಳೆಗಳ ಮಾರುಕಟ್ಟೆ ವಿಶ್ಲೇಷಣೆ’ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮಾರುಕಟ್ಟೆ ಮತ್ತು ಸಹಕಾರ ವಿಭಾಗದ ನಿವೃತ್ತ ಪ್ರಧ್ಯಾಪಕರಾಗಿರುವ ಡಾ. ವೆಂಕಟರೆಡ್ಡಿ ಟಿ.ಎನ್. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದು, ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳಿಗೆ ಲಭ್ಯವಿರುವ ಮಾರುಕಟ್ಟೆ ಆಯ್ಕೆಗಳು ಹಾಗೂ ಬೆಳೆಗಳನ್ನು ಉತ್ತಮ ರೀತಿಯಲ್ಲಿ ಮಾರುಕಟ್ಟೆ ಮಾಡುವುದು ಹೇಗೆ ಎಂಬ ಬಗ್ಗೆ ರೈತ ಬಾಂಧವರಿಗೆ ತಿಳಿಸಿಕೊಡಲಿದ್ದಾರೆ.

ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ದಾವಣಗೆರೆ ಒಂದೊಮ್ಮೆ ಹತ್ತಿಯ ಕಣಜ ಎಂದೇ ಪ್ರಖ್ಯಾತವಾಗಿತ್ತು. ಆದರೆ ಐತಿಹಾಸಿಕ ದಾವಣಗೆರೆ ಕಾಟನ್ ಮಿಲ್ಸ್ ಬಾಗಿಲು ಹಾಕಿದ ನಂತರ ಆ ಹೆಸರು ಅಳಿಸಿಹೋಗಿದೆ. ಜೊತೆಗೆ ಇಲ್ಲಿನ ರೈತರೂ ಮೊದಲಿನಷ್ಟು ಹತ್ತಿ ಬೆಳೆಯುತ್ತಿಲ್ಲ. ಈಗ ಭತ್ತ, ಮೆಕ್ಕೇಜೋಳ, ಮತ್ತು ಅಡಕೆ ಜಿಲ್ಲೆಯ ಪ್ರಮುಖ ಬೆಳೆಗಳಾಗಿ ಗುರುತಿಸಿಕೊಂಡಿವೆ. ಇದರೊಂದಿಗೆ ತೊಗರಿ, ಹತ್ತಿಗಳನ್ನು ಹೆಚ್ಚಿನ ರೈತರು ಬೆಳೆಯುತ್ತಾರೆ. ಜೊತೆಗೆ ತೆಂಗು, ಮಾವು, ಟೊಮೇಟೊ ಮತ್ತು ಹಸಿ ಮೆಣಸಿನ ಕಾಯಿ ಬಬೆಳೆಗಳನ್ನು ಬೆಳೆಯುವ ಪಪ್ರದೇಶ ಕೂಡ ಜಿಲ್ಲೆಯಲ್ಲಿ ಹೆಚ್ಚಾಗಿದೆ.

ರೈತರು ಬೆಳೆಗಳನ್ನೇನೋ ಬೆಳೆಯುತ್ತಾರೆ. ಆದರೆ ತಾವು ಬೆಳೆದ ಬೆಳೆಯನ್ನು ಸೂಕ್ತ ಬೆಲೆಗೆ ಮಾರುವುದು ಹೇಗೆ ಎಂಬ ತಿಳಿವಳಿಕೆ ಬಹಳಷ್ಟು ಮಂದಿಗೆ ಇಲ್ಲ. ಇಂದು ತಂತ್ರಜ್ಞಾನ ವ್ಯಾಪಕವಾಗಿ ವಿಕಸನಗೊಂಡಿದ್ದು, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದೆ. ಹೀಗಾಗಿ ಕೃಷಿಕರು ಬೆಳೆಗಳನ್ನು ಬೆಳೆದ ನಂತರ ಅವುಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳುವುದು ಹೇಗೆ. ಉತ್ತಮ ಹಾಗೂ ನ್ಯಾಯಯುತ ಬೆಲೆ ಪಡೆದು ಹೆಚ್ಚಿನ ಲಾಭ ಗಳಿಸುವುದು ಹೇಗೆ ಎಂಬ ಬಗ್ಗೆ ಡಾ. ವೆಂಕಟರೆಡ್ಡಿ ಅವರು ಮಾಹಿತಿ ನೀಡಲಿದ್ದಾರೆ.

ಗೂಗಲ್ ಮೀಟ್ ವೇದಿಕೆಯಲ್ಲಿ ಉಪನ್ಯಾಸ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತರು https://meet.google.com/txe-rvqs-qnj  ಈ ಲಿಂಕ್ txe-rvqs-qnj ಈ ಮೀಟಿಂಗ್ ಐಡಿ ಬಳಸಿಕೊಂಡು ಉಪನ್ಯಾಸದಲ್ಲಿ ಪಪಾಲ್ಗೊಳ್ಳಬಹುದು ಎಂದು ಕೃಷಿ ವಿಸ್ತರಣಾ ತಜ್ಞರಾಗಿರುವ ರಘುರಾಜ್ ಅವರು ಮಾಹಿತಿ ನೀಡಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ಪ್ರಸೆಂಟ್ ನೌ ಮೇಲೆ ಕ್ಲಿಕ್ ಮಾಡದೆ, ಆಸ್ಕ್ ಟು ಜಾಯಿನ್ ಮೇಲೆ ಒತ್ತಬೇಕು ಎಂದು ತರಳಬಾಳು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.