News

ರಾಜ್ಯದಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರ, ಹೇಗಿತ್ತು ಗ್ರಹಣ; ಇಲ್ಲಿದೆ ವಿವರ

25 October, 2022 6:06 PM IST By: KJ Staff
ಶಿವಮೊಗ್ಗದ ಹೊಳೆಹೊನ್ನೂರಿನಲ್ಲಿ ಗೋಚರಿಸಿದ ಗ್ರಹಣ (ಚಿತ್ರಕೃಪೆ: ಪ್ರಮೋದ್‌ ಎಚ್‌.ಎಸ್‌)

ರಾಜ್ಯದಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರ, ಹೇಗಿತ್ತು ಗ್ರಹಣ; ಇಲ್ಲಿದೆ ವಿವರ

ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! 

ಪಾರ್ಶ್ವ ಸೂರ್ಯಗ್ರಹಣವು ಮಂಗಳವಾರ ಸಂಜೆ ರಾಜ್ಯದಲ್ಲಿ ಸಂಭವಿಸಿದೆ. ಅದರ ಅಪೂರ್ವ ದೃಶ್ಯಗಳನ್ನು ಹಲವರು ಸೆರೆಹಿಡಿದಿದ್ದಾರೆ.  

ರಾಜ್ಯದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಕೆಲವು ನಿಮಿಷಗಳ ಕಾಲ ಗೋಚರಿಸಿದೆ. 

ಸೂರ್ಯಾಸ್ತದ ಸಮಯವಾದ್ದರಿಂದ ದಿಗಂತವು ಶುಭ್ರವಾಗಿ ಗೋಚರಿಸುವಂತಿದ್ದರೆ, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಇತರೆ ಭಾಗಗಳಿಂದಲೂ ಗ್ರಹಣವನ್ನು ನೋಡಬಹುದು ಎಂದು ಮೊದಲೇ ಅಂದಾಜಿಸಲಾಗಿತ್ತು. ಅದರಂತೆಯೇ ರಾಜ್ಯದ ಹಲವು ಭಾಗದಲ್ಲಿ ಗ್ರಹಣ ಗೋಚರಿಸಿದೆ.  

ರಾಜ್ಯದ ವಿವಿಧೆಡೆ ಗೋಚರಿಸುವ ಗ್ರಹಣವನ್ನು ತಾರಾಲಯದ www.taralaya.org ಯೂಟ್ಯೂಬ್ ಚಾನಲ್‌ನಲ್ಲಿ ಮಧ್ಯಾಹ್ನ 2.30ರಿಂದ ನೇರ ಪ್ರಸಾರ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.   

ಗ್ರಹಣ

ಕ್ಯಾಮಾರದಲ್ಲಿ ಸೆರೆಯಾದ ಗ್ರಹಣದ ಚಿತ್ರ

ಶಿವಮೊಗ್ಗದ ಹೊಳೆಹೊನ್ನೂರಿನಲ್ಲಿ ಮಂಗಳವಾರ ಸಂಜೆ ಸುಮಾರ 5.20 ಮತ್ತು 5.25ರ ಆಸುಪಾಸಿನಲ್ಲಿ ಗ್ರಹಣ ಗೋಚರಿಸಿದ್ದು, ಪ್ರಮೋದ್‌ ಎಚ್‌.ಎಸ್‌ ಎಂಬವರ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಿವು.