News

Aadhaar-PAN linking ಆಧಾರ್-‌ ಪ್ಯಾನ್‌ ಜೋಡಣೆಗೆ ಕೊನೆಯ ಗಡುವು; ಆದಾಯ ತೆರಿಗೆ ಇಲಾಖೆ ಕೊನೆಯ ಎಚ್ಚರಿಕೆ ಏನು ?

27 June, 2023 11:14 AM IST By: Hitesh
Last date for Aadhaar-PAN linking; What is the last warning of Income Tax Department?

ಆಧಾರ್‌  ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆ ಮಾಡುವುದಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ.

ಈ ಅವಧಿಯ ಒಳಗಾಗಿ ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆ ಮಾಡದೆ ಇದ್ದರೆ, ನೀವು ಸಂಕಷ್ಟ ಎದುರಿಸಬೇಕಾಗುತ್ತದೆ.

ಕೇಂದ್ರ ಸರ್ಕಾರವು ಈಗಾಗಲೇ ಹಲವು ಬಾರಿ ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್ ಕಾರ್ಡ್‌ ಜೋಡಣೆಗೆ ಅವಕಾಶವನ್ನು ನೀಡಿದೆ.

ಇದೇ ಸಂದರ್ಭದಲ್ಲಿ ಶುಲ್ಕ ಪಾವತಿಯೊಂದಿಗೂ ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆ ಮಾಡುವುದಕ್ಕೆ ಕೊನೆಯ ಗಡುವನ್ನು ವಿಧಿಸಲಾಗಿದೆ.

ಆದರೆ, ಈ ಬಾರಿಯೂ ಅಂದರೆ ಜೂನ್‌ 30ರ ಒಳಗಾಗಿ ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆ ಮಾಡದೆ ಇದ್ದರೆ, ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಲಿದೆ.

ದಂಡ ಮೊತ್ತದೊಂದಿಗೆ ಜೋಡಣೆ

ಕೇಂದ್ರ ಸರ್ಕಾರ ಅಂದರೆ ಆದಾಯ ತೆರಿಗೆ ಇಲಾಖೆಯು ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌

ಜೋಡಣೆಯನ್ನು 1,000 ರೂಪಾಯಿ ಶುಲ್ಕ ಪಾವತಿಯೊಂದಿಗೆ ಜೋಡಣೆ ಮಾಡುವುದಕ್ಕೆ ಅವಕಾಶ ನೀಡಿದೆ.

ನೀವು ಇಲ್ಲಿಯ ವರೆಗೆ ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆ ಮಾಡದಿದ್ದರೆ, 1000 ರೂಪಾಯಿಯನ್ನು ಪಾವತಿ ಮಾಡುವುದರೊಂದಿಗೆ

ಜೂನ್‌ 30ರ ಒಳಗಾಗಿ ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆ ಮಾಡಿಕೊಳ್ಳಬಹುದಾಗಿದೆ.

ಒಂದೊಮ್ಮೆ ನೀವು ಇದನ್ನೂ ತಪ್ಪಿದರೆ, ಅಂದರೆ ಜೂನ್‌ 30ರ ಒಳಗಾಗಿ ಆಧಾರ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆ ಮಾಡದೆ  

ಇದ್ದರೆ ಭಾರೀ ದಂಡ ಪಾವತಿ ಅಥವಾ ಪ್ಯಾನ್‌ ಕಾರ್ಡ್‌ ಕಳೆದುಕೊಳ್ಳಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಭಾರೀ ದಂಡಕ್ಕೆ ವಿರೋಧ: ಈಗಾಗಲೇ ನೀವು ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ ಜೋಡಣೆ ಮಾಡಿದ್ದರೆ, ನೀವು ಸೇಫ್‌.

ಆದರೆ, ಇಲ್ಲಿಯ ವರೆಗೂ ಆಧಾರ್‌ ಹಾಗೂ ಪ್ಯಾನ್‌ ಜೋಡಣೆ ಮಾಡದಿದ್ದರೆ, ನೀವು ಒಂದು ಸಾವಿರ ರೂಪಾಯಿ ಪಾವತಿ ಮಾಡಬೇಕು.

ಇದು ಅಲ್ಲದೇ ಕಳೆದ ಬಾರಿ ಗಡುವು ಮುಗಿದ ಮೇಲೆಯೂ ಪ್ಯಾನ್‌- ಆಧಾರ್‌ ಜೋಡಣೆ ಮಾಡದವರಿಗೆ

ಬರೋಬ್ಬರಿ 10,000 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ಸರ್ಕಾರದ ಈ ಕ್ರಮಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಿತ್ತು. 10 ಸಾವಿರ ರೂಪಾಯಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೇಳಿರುವುದು ಸೂಕ್ತವಲ್ಲ

ಎಂದು ಹೇಳಲಾಗಿತ್ತು. ಆದರೆ, 10 ಸಾವಿರ ವಿಧಿಸುವ ಪ್ರಕ್ರಿಯೆ ಜಾರಿಗೆ ಬಂದಿರಲಿಲ್ಲ.

ಇದೀಗ ಸರ್ಕಾರ ಜೂನ್‌ 30ರ ನಂತರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.   

ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಜೋಡಣೆಗೆ ಜೂನ್‌ 30 ಕೊನೆಯ ದಿನಾಂಕವಾಗಿದೆ.

ಜೂನ್‌ 30ರ ಒಳಗಾಗಿ ನೀವು ಒಂದು ಸಾವಿರ ರೂಪಾಯಿ ಶುಲ್ಕ ಮೊತ್ತವನ್ನು ಪಾವತಿಸುವುದರೊಂದಿಗೆ

ಆಧಾರ್‌ ಹಾಗೂ ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡಬಹುದಾಗಿದೆ.

ಒಂದೊಮ್ಮೆ ನೀವು ಸರ್ಕಾರ ನೀಡಿರುವ ಗಡುವಿನ ಒಳಗಾಗಿ ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡದೇ ಇದ್ದರೆ,

ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರೀಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಅಲ್ಲದೇ ಹೆಚ್ಚಿನ ದರದಲ್ಲಿ ಟಿಡಿಎಸ್‌ ಕಡಿತ, ಬಾಕಿ ಇರುವ ಮರುಪಾವತಿಗಳು ಹಾಗೂ ಅವುಗಳ ಮೇಲಿನ ಬಡ್ಡಿದರದಿಂದ ವಂಚಿತರಾಗುವ ಸಾಧ್ಯತೆ ಇದೆ.

ಅಲ್ಲದೇ ಟಿಸಿಎಸ್‌ ಅನ್ನು ಹೆಚ್ಚಿನ ಮೊತ್ತದಲ್ಲಿ ಸಂಗ್ರಹಿಸುವುದಾಗಿ ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

ಹೆಚ್ಚಿನ ಮಾಹಿತಿಗೆ ನೀವು www.incometax.gov.inಗೆ ಭೇಟಿ ನೀಡಬಹುದು. 

ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆಯ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ದಿಷ್ಟ ಷರತ್ತುಗಳನ್ನು ವಿಧಿಸಿದೆ.

ಇದನ್ನು ಪಾಲನೆ ಮಾಡದೆ ಇದ್ದರೆ, ಭಾರೀ ಮೊತ್ತದ ದಂಡ ವಿಧಿಸುವುದಾಗಿಯೂ ಎಚ್ಚರಿಕೆಯನ್ನು ನೀಡಲಾಗಿದೆ.

ಆದಾಯ ತೆರಿಗೆ ಇಲಾಖೆ ನೀಡಿದ ಪ್ರಮುಖ ಎಚ್ಚರಿಕೆಗಳು

* ಯಾವುದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್‌ ಕಾರ್ಡ್‌ ಪಡೆಯಬಾರದು.

* ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಕಾರ್ಡ್‌ ಇದ್ದರೆ 10,000 ದಂಡ ವಿಧಿಸಲಾಗುವುದು.

*  ಸಿಂಗಲ್‌ ಪ್ಯಾನ್‌ ಕಾರ್ಡ್‌ನ ಸ್ಥಿತಿಯನ್ನು ಪರಿಶೀಲನೆ ಮಾಡುವುದಕ್ಕೆ

ನೀವು www.incometax.gov.in ಗೆ ಭೇಟಿ ನೀಡಬಹುದಾಗಿದೆ.

* ಬಲ್ಕ್‌ ಪ್ಯಾನ್‌ಗಳನ್ನು ಪರಿಶೀಲಿಸಲು https://report.insight.gov.in ಗೆ

ಭೇಟಿ ನೀಡಬಹುದು ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.