News

ಬಾಕಿ ಉಳಿದ 13,814 ಪ್ರಕರಣಗಳಿಗೆ ಶೀಘ್ರ ಮುಕ್ತಿ

16 July, 2020 10:09 AM IST By:

ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತ ಬೆನ್ನಲ್ಲೆ 79ಎ,ಬಿ ಪ್ರಕರಣಗಳ ಇತ್ಯರ್ಥಕ್ಕೆ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79 ಎ ಹಾಗೂ 79ಬಿ ಉಲ್ಲಂಘನೆಯ ಸಂಶಯದಡಿ ದಾಖಲಾಗಿರುವ ಪ್ರಕರಣಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಉಪ ವಿಭಾಗಾಧಿಕಾರಿ (ಎಸಿ), ತಹಶೀಲ್ದಾರ ವಿವಿಧ ಹಂತದಲ್ಲಿ ಬಾಕಿಯಿರುವ 13814 ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕ್ರಮಕೈಗೊಳ್ಳಬೇಕು.ಅಲ್ಲದೆ ಬಾಕಿಯಿರುವ ಈ ಪ್ರಕರಣಗಳ ಇತ್ಯರ್ಥಕ್ಕಾಗಿ ಭೂಮಿ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು  ಮಾಡಬೇಕೆಂದು ಭೂಮಿ ಉಸ್ತುವಾರಿ ಕೋಶದ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಕಾಯ್ದೆ ತಿದ್ದುಪಡಿಗೆ ಮೊದಲು (ಜುಲೈ 13ರ ಮೊದಲು) ಉಪ ವಿಭಾಗಾಧಿಕಾರಿಗಳು ಇತ್ಯರ್ಥಪಡಿಸಿರುವ ಜಮೀನುಗಳ ಪಹಣಿಯನ್ನು ಸರ್ಕಾರದ ಹೆಸರಿಗೆ ಮಾಡಬೇಕು. 2012 ರ ನವೆಂಬರ್ 28ಕ್ಕಿಂತ ಮೊದಲು ದಾಖಲಾಗಿರುವ ಪ್ರಕರಣಗಳಲ್ಲಿ ಖರೀದಿದಾರರ ಹೆಸರಿಗೆ ಪಹಣಿ ಮಾಡಿಕೊಡಬೇಕು. ಮ್ಯುಟೇಷನ್ ಮಾಡುವ ಸಂದರ್ಭದಲ್ಲಿ ಕಲಂ 79 ಎ ಹಾಗೂ 79ಬಿ  ಉಲ್ಲಂಘನೆಯ ಸಂಶಯದಡಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ರದ್ದುಪಡಿಸಬೇಕೆಂದು ಹೇಳಿದ್ದಾರೆ.

ಜಿಲ್ಲಾವಾರು ಬಾಕಿಯಿರುವ ಪ್ರಕರಣಗಳು:

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1811, ಬೆಂಗಳೂರು ನಗರದಲ್ಲಿ 1080, ಮಂಡ್ಯ 996, ದಾವಣಗೆರೆ 975, ತುಮಕೂರು 975, ಕೋಲಾರ 856, ಚಿತ್ರದುರ್ಗ 714, ಬಳ್ಳಾರಿ 696, ಚಾಮರಾಜ ನಗರ 590, ರಾಮನಗರ 557, ಶಿವಮೊಗ್ಗ 510, ಬೆಳಗಾವಿ 500, ಚಿಕ್ಕಬಳ್ಳಾಪುರ 392, ಧಾರವಾಡ 373, ಕಲಬುರಗಿ 359, ಗದಗ 326, ಬೀದರ್ 221, ಹಾವೇರಿ 213, ರಾಯಚೂರು 171, ಕೊಪ್ಪಳ 153, ವಿಜಯಪುರ 118,ಚಿಕ್ಕಮಗಳೂರ 111, ಯಾದಗಿರಿ 89, ಉಡುಪಿ 84, ಹಾಸನ 74, ಉತ್ತರ ಕನ್ನಡ 65, ಬಾಗಲಕೋಟೆ 24 ಪ್ರಕರಣಗಳಿವೆ.

Read More:ಸ್ವಯಂ ಉದ್ಯೋಗ ಆರಂಭಿಸಬೇಕೇತಡಮಾಡದೆ ಇಲ್ಲಿ ಅರ್ಜಿ ಸಲ್ಲಿಸಿ