News

ಡಿಸೆಂಬರ್ 17 ರಿಂದ 20ರ ವರೆಗೆ ದೇವಸ್ಥಾನಕ್ಕೆ ಪ್ರವೇಶ ನಿಷೇದ

16 December, 2020 8:54 AM IST By:

ದಕ್ಷಿಣ ಕರ್ನಾಟಕದ ಪ್ರಖ್ಯಾತ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೂರು ದಿನಗಳ ಕಾಲ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ರಥೋತ್ಸವ ಸೇವೆಗಳಿಗೆ ಮುಂಚಿತವಾಗಿ ನೋಂದಾಯಿಸಿಕೊಂಡ ಭಕ್ತರಿಗೆ ಮಾತ್ರ ಅವಕಾಶವಿರುತ್ತದೆ.

ಕರ್ನಾಟಕದಲ್ಲಿ ಪ್ರಮುಖ ದೇವಾಲಯವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿವರ್ಷವೂ ಆಚರಣೆಗಳು ನಡೆಯುತ್ತವೆ. ಅದರಲ್ಲಿ ಚೌತಿ, ಪಂಚಮಿ ಮತ್ತು ಶಷ್ಠಿ ರಥೋತ್ಸವ ಹಾಗೂ ಮುಂತಾದ ಆಚರಣೆಗಳು ನಡೆಯುತ್ತವೆ. ಈ ಬಾರಿ ಕೊರೋನಾದ ಸಲುವಾಗಿ ಎಲ್ಲಾ ಖ್ಯಾತ ದೇವಸ್ಥಾನಗಳಲ್ಲಿ ವಿಜ್ರಂಭಣೆಯಿಂದ ನಡೆಯಬೇಕಿದ್ದ ಜಾತ್ರೆಗಳು ಈ ಬಾರಿ ಸರಳ ರೂಪದಲ್ಲಿ ಆಗಿವೆ, ಇದರ ಹಿಂದಿರುವ ಮುಖ್ಯ ಉದ್ದೇಶ ಅಂದರೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು.

ಕೊರೋನಾ ಬಂದ ಮೇಲೆ ಎಲ್ಲೆಂದರಲ್ಲಿ ಜನ ದಟ್ಟಣೆ ತಪ್ಪಿಸಲು ಹಲವಾರು ಹಬ್ಬ, ಜಾತ್ರೆ ಗಳನ್ನು ಈ ಬಾರಿ ಜನದಟ್ಟಣೆ ಮಾಡದೇ ಸರಳ ರೀತಿಯಲ್ಲಿ ನಡೆಸಲಾಗಿತ್ತು. ಅದೇ ರೀತಿ ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೊರೋನಾ ಹಬ್ಬುವುದನ್ನು ನಿಲ್ಲಿಸಲು ಹಾಗೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸಲು ಡಿಸೆಂಬರ್ 17 ರಿಂದ 20ರ ವರೆಗೆ ಭಕ್ತರ ಪ್ರವೇಶವನ್ನು ನಿಷೇದಿಸಲಾಗಿದೆ .

ಆದರೆ ಮುಂಚಿತವಾಗಿಯೇ ಆನ್ಲೈನ್ ಮೂಲಕ ಬುಕಿಂಗ್ ಮಾಡಿದಂತ ಭಕ್ತಾದಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ ಎಂದು ದಕ್ಷಿಣ ಕನ್ನಡದ ಜಿಲ್ಲಾದಿಕಾರಿಯಾದ ಡಾ.ರಾಜೇಂದ್ರ ಕೆ.ವಿ. ಅವರು ಹೇಳಿದ್ದಾರೆ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು . ಉಲ್ಲಂಘನೆ ಮಾಡಿದವರ ವಿರುದ್ದ ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020 ಯಡಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು