ರೈತರು ಉತ್ಪಾದಿಸುವ ಬೆಳಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ತಾವು ಉತ್ಪಾದಿಸುವ ಬೆಳೆಗಳಿಗೆ ಯಾರೋ ಬೆಲೆ ನಿರ್ಧರಿಸುತ್ತಾರೆ. ಹಾಗಾಗಿ ರೈತರ ಉತ್ಪಾದನೆಗಳು ಹೆಚ್ಚು ಬ್ರ್ಯಾಂಡ್ (Brand) ಆಗುವುದಿಲ್ಲ. 25 ವರ್ಷಗಳಿಂದ ರೈತರ ಸೇವೆ ಮಾಡುತ್ತಾ ಬರುತ್ತಿರುವ ಕೃಷಿ ಜಾಗರಣ ತಂಡವು ಒಂದು ವಿಚಾರಕ್ಕೆ ಬಂದು ಫೇಸ್ ಬುಕ್ ಲೈವ್ ಕಾರ್ಯಕ್ರಮ ಆರಂಭಿಸಿದೆ.
ನಮ್ಮ ರೈತರು ಉತ್ಪಾದನೆಗಾಗಿ ಅಥವಾ ಮನೆಗಾಗಿ ಯಾವುದೇ ವಸ್ತುಗಳನ್ನು ಖರೀದಿಸಲಿ ಅದೆಲ್ಲಾ ಯಾವುದಾದರೊಂದು ಬ್ರ್ಯಾಂಡ್ ಹೆಸರಿನ ಮೇಲೆ ಮಾರಾಟವಾಗುತ್ತಿರುತ್ತವೆ. ರೈತರ ಉತ್ಪನ್ನಗಳನ್ನೇ ಬೇರೆಯವರು ಬ್ರ್ಯಾಂಡ್ ಮಾಡಿ ಮಾರಾಟ ಮಾಡುತ್ತಾರೆ. ಉದಾಹರಣೆಗೆ ಟೊಮ್ಯಾಟೋ ಉತ್ಪಾದಿಸುವ ರೈತರ ಟೊಮ್ಯೋಟೋಗೆ ಯಾವುದೇ ಬ್ರ್ಯಾಂಡ್ ಇಲ್ಲ, ಆದರೆ ಟೊಮ್ಯೋಟೋದಿಂದ ತಯಾರಾಗುವ ಕೆಚಪ್ ಸದಾ ಬ್ರ್ಯಾಡ್ ಮೇಲೆ ಮಾರಾಟವಾಗುತ್ತದೆ. ಹೀಗೆ ಹಲವಾರು ರೈತರ ಉತ್ಪನ್ನಗಳು ಬೇರೆಯವರ ಬ್ರ್ಯಾಂಡ್ ಮೇಲೆ ಮಾರಾಟವಾಗುತ್ತಿರುತ್ತವೆ.
ರೈತರು ಉತ್ಪಾದಿಸುವ ಬೆಳೆಗಳನ್ನೇಕೆ ಬ್ರ್ಯಾಂಡ್ ಮಾಡಬಾರದೆಂಬ ವಿಚಾರ ಬಂದಾಗ ಜೂನ್ ತಿಂಗಳಿಂದ ಕೃಷಿ ಜಾಗರಣವು ಫಾರ್ಮರ್ ದ ಬ್ರ್ಯಾಂಡ್ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸುತ್ತಿದೆ. ದೇಶದ ಎಲ್ಲಾ ರಾಜ್ಯದ ಆಯಾ ಭಾಷೆಗಳಲ್ಲಿ ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಗತಿಪರ ರೈತರಿಗೆ ಕೃಷಿ ಜಾಗರಣ ವತಿಯಿಂದ ಫೇಸ್ ಬುಕ್ (Face book live program) ಲೈವ್ ಕಾರ್ಯಕ್ರಮದ ಮೂಲಕ ರೈತರನ್ನು ಉದ್ಯಮಿಯನ್ನಾಗಿ ಮಾಡಲಾಗುತ್ತಿದೆ. ಇಲ್ಲಿಯವರೆಗೆ ದೇಶದ ಸುಮಾರು 100ಕ್ಕೂಹೆಚ್ಚು ರೈತರು ಅವರ ಉತ್ಪನ್ನಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಕಾರ್ಯಕ್ರಮದ ವತಿಯಿಂದ ರೈತರು ತಮ್ಮ ಗುಣಮಟ್ಟದ ತರಕಾರಿ, ಹಣ್ಣುಹಂಪಲ, ಹೂವು, ಮೀನು, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಹಾಗೂ ಜೈವಿಕ ಉತ್ಪನ್ನಗಳನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲು ಸಹಾಯವಾಗುತ್ತದೆ. ಉದ್ಯಮಿಗಳು ರೈತರಲ್ಲಿಗೆ ಬಂದು ಖರೀದಿ ಮಾಡಬೇಕೆಂಬುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ..
ದೇಶದ ಉದ್ಯಮಿಗಳು, ವ್ಯಾಪಾರಸ್ಥರು ರೈತರ ಬಳಿಯೇ ಹೋಗಿ ಅವರ ಉತ್ಪನ್ನಗಳನ್ನು ಖರೀದಿಸಲಿ, ರೈತರ ಆದಾಯ (Farmers income) ದುಪ್ಟಟ್ಟಾಗಲಿ ಎಂಬ ಆಶಾಭಾವನೆಯಿದೆ. ಇದೇ ರೀತಿ ನಿಮ್ಮ ಸಹಕಾರ ಸದಾ ಸಿಗುತ್ತದೆ ಎಂಬ ವಿಶ್ವಾಸ ನಮ್ಮದಾಗಿದೆ.
FTB ಫಾರ್ಮರ್ಸ್ ದ ಬ್ರ್ಯಾಂಡ್ ಗಳ ಅಭಿಪ್ರಾಯ: (Opinion of farmer the brand farmer)
ಎಲೆಮರೆಕಾಯಿಯಂತಿರುವ ರೈತರು ಮುಖ್ಯವಾಹಿನಿಗೆ:
ದೇಶದ ಮೂಲೆ ಮೂಲೆಯಲ್ಲಿರುವ ರೈತರಿಗೆ ಜ್ಞಾನ ಪಸರಿಸುವ ಕಾರ್ಯಕ್ರಮ ಇದಾಗಿದೆ. ಮನೆಯಲ್ಲಿಯೇ ಕುಳಿತು ರೈತರ ಅನುಭವ ಅವರು ಮಾಡಿದ ವ್ಯವಸಾಯದ ಕುರಿತು ತಿಳಿದುಕೊಳ್ಳಬಹುದು. ಇದನ್ನು ನಿರಂತರವಾಗಿ ಮಾಡಬೇಕು. ಎಲೆಮರೆ ಕಾಯಿಯಂತಿರುವ ರೈತರಿಗೆ ಅನುಕೂಲವಾಗುತ್ತದೆ. ಎಷ್ಟೋ ರೈತರು ಇನ್ನೂ ಬೆಳಕಿಗೆ ಬಂದಿಲ್ಲ. ಅವರಿಗೆ ಅನುಕೂಲವಾಗುವುದಲ್ಲದೆ ಉತ್ತೇಜನ ಕೊಟ್ಟಂತಾಗುತ್ತದೆ. ಈ ಲೈವ್ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರೆಸಿ. ಇನ್ನೂ ಹೆಚ್ಚು ರೈತರು ಬೆಳಕಿಗೆ ಬರಲಿ. ಯಾರೂ ಎಲ್ಲವೂ ಕಲಿತಿರಲ್ಲ. ನಿರಂತವಾಗಿ ಕಲಿತಿರಬೇಕು. ಜ್ಞಾನ ಹಂಚಿಕೆಯಾದಾಗ ಎಲ್ಲೋ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯುತ್ತದೆ.
ಭತ್ತದ ಬೋರೇಗೌಡ, ಪ್ರಗತಿಪರ ರೈತ (Bhattada Boregowda)
ಮಂಡ್ಯ ತಾಲೂಕು
ಮೊ.8971438272
ನಿರಂತರವಾಗಿ ನಡೆಯಲಿ ಪೇಸ್ ಬುಕ್ ಲೈವ್ ಕಾರ್ಯಕ್ರಮ:
ಈ ಕಾರ್ಯಕ್ರಮ ನಿರಂತರವಾಗಿ ಮಾಡಿದರೆ ಒಬ್ಬರಿಂದ ಇನ್ನೊಬ್ಬ ರೈತರಿಗೆ ಮಾಹಿತಿ ಮುಟ್ಟುತ್ತದೆ. ಬಹಳಷ್ಟು ರೈತರಿಗೆ ಸಮಗ್ರ ಕೃಷಿ ಮಾಡಲು ಆಸಕ್ತಿ ಇರುತ್ತದೆ ಆದರೆ ಹೇಗೆ ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಫೇಸ್ ಬುಕ್ ಲೈವ್ ಕಾರ್ಯಕ್ರಮ ನೋಡಿದ ಮೇಲೆ ಬಹಳಷ್ಟು ರೈತರು ನಮಗೆ ಇನ್ನೂ ಕರೆ ಮಾಡುತ್ತಿದ್ದಾರೆ. ನಮಗೂ ಮಾಹಿತಿ ಕೊಡಿ ಎಂದು ಕೇಳಿದ್ದಾರೆ. ಕೆಲವರು ಎರೆಹುಳ ಘಟಕ, ಹಾಗೂ ನಾವು ಮಾಡುವ ವ್ಯವಸಾಯದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.
ಮಲ್ಲಿನಾಥ ಕೊಲ್ಸೂರ ಮೇಳಕುಂದಾ, ಪ್ರಗತಿಪರ ರೈತ (Mallinath Melkunda)
ಕಲಬುರಗಿ ತಾಲೂಕು
ಮೊ.9945208188
ರೈತ ಉಪಯೋಗಿ ಕಾರ್ಯಕ್ರಮ:
ಫೇಸ್ ಬುಕ್ ಲೈವ್ ಕಾರ್ಯಕ್ರಮ ರೈತರಿಗೆ ತುಂಬಾ ಅನುಕೂಲವಾಗುವುದು, ಕೆಲವು ರೈತರಿಗೆ ಬೆಳೆಗಳ ಬಗ್ಗೆ ಇನ್ನೂ ಸರಿಯಾಗಿ ಮಾಹಿತಿ ಗೊತ್ತಿರಲ್ಲ, ಬೆಳೆ ವೈವಿದ್ಯತೆ, ಹೊಸ ಹೊಸ ತಳಿ, ಕೃಷಿಯಲ್ಲಿ ತಂತ್ರಜ್ಞಾನ, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಹೇಗೆ ಪಡೆಯಬೇಕೆಂಬುದರ ಕುರಿತು ಮಾಹಿತಿ ಸಿಗುತ್ತದೆ. ಒಂದೇ ಬೆಳೆ ಹಾಕುವುದರಿಂದ ಲಾಭ ಕಡಿಮೆ ಇಳುವರಿಯೂ ಕಡಿಮೆ. ಸಮಗ್ರ ಕೃಷಿಯಲ್ಲಿ ತರಕಾರಿ, ಹೂವು, ತೋಟಾಗರಿಕೆ ಮಾಡಬಹುದು. ರಾಸಾಯನಿಕದಿಂದ ತಾತ್ಕಾಲಿಕವಾಗಿ ಇಳುವರಿ ಹೆಚ್ಚು ಪಡೆಯಬಹುದು ಆದರೆ ಸಾವಯವದಿಂದ ದೀರ್ಘ ಕಾಲದವರಿಗೆ ಇಳುವರಿ ಹೆಚ್ಚು ಪಡೆಯಬುದು ಹೀಗೆ ಅನೇಕ ಮಾತಿಗಳನ್ನು ಪಡೆಯಬಹುದು ಕೃಷಿ ಜಾಗರಣವು ಆರಂಭಿಸಿದ ಫೇಸ್ ಬುಕ್ ಲೈವ್ ಕಾರ್ಯಕ್ರಮದಿಂದ ಹೆಚ್ಚು ಲೈಕ್, ಎಸ್ಎಂಎಸ್ ಬಂದಿದೆ. ಸಾಮಾಜಿಕ ಜಾಲಾತಾಣದಲ್ಲಿಯೂ ರೈತರನ್ನು ಪರಿಚಯಿಸಿದಂತಾಗುತ್ತದೆ. ಒಳ್ಳೆಯ ಕಾರ್ಯಕ್ರಮ ನಿರಂತವರಾಗಿ ಮುಂದುವರಿಸಿ..
ರಾಜೇಗೌಡ ಬಿದರಿಕಟ್ಟೆ, ಪ್ರಗತಿಪರ ರೈತ (Rajegowda Bidarikatte)
ಮಂಡ್ಯ ತಾಲೂಕು
ಮೊ.9449425391
ಇದೊಂದು ವಿನೂತನ ಕಾರ್ಯಕ್ರಮ:
ಫೇಸ್ ಬುಕ್ ಲೈವ್ ಕಾರ್ಯಕ್ರಮದ ಮೂಲಕ ರೈತರನ್ನು ಪರಿಚಯಿಸುತ್ತಿರುವುದು ವಿನೂತನ ಕಾರ್ಯಕ್ರಮವಾಗಿದೆ. ಇಡೀ ಕೃಷಿ ಲೋಕದಲ್ಲಿ ಇದೊಂದು ವಿಶಿಷ್ಟ ಕಾರ್ಯಕ್ರಮ, ತಂತ್ರಜ್ಞಾನ ಹೇಗೆ ಬಳಸಬೇಕೆಂಬುದರ ಕುರಿತು ಮಾಹಿತಿ ಕೊಟ್ಟಂತಾಗುತ್ತದೆ. ತಂತ್ರಜ್ಞಾನ ಬೆಳೆದಂತೆ ಕೃಷಿಕರೂ ಹೊಸ ಹೊಸದನ್ನು ಕಲಿಯಬೇಕು. ಒಳ್ಳೆಯ ಸಾಧಕರನ್ನು ಸಾಧಕರೊಂದಿಗೆ ಸಮಾಲೋಚನೆ ಮಾಡಿದಂತಾಗುತ್ತದೆ. ಫೇಸ್ ಬುಕ್ ಲೈವ್ ಕಾರ್ಯಕ್ರಮ ನೋಡಿದ ಮೇಲೆ ಬಹಳಷ್ಟು ಲೈಕ್ ಬಂದಿವೆ. ಕೋಳಿ ಸಾಕಾಣಿಕೆ, ಅರಣ್ಯ ಕೃಷಿ ಹೇಗೆ ಮಾಡಬೇಕೆಂಬುದರ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಈ ಕಾರ್ಯಕ್ರಮ ಹೀಗೆ ಮುಂದುವರೆಸಿ, ರೈತರಿಗೆ ಅನುಕೂಲವಾಗುತ್ತದೆ.