News

ಕೃಷಿ ಮೇಳ 2023: ರೈತರಿಗೆ ಬೀಜಸಂತೆ, ಬೀಜೋತ್ಪಾದನೆ ಮಾಹಿತಿ!

17 November, 2023 11:09 AM IST By: Hitesh
ಕೃಷಿ ಮೇಳ 2023 ರೈತರಿಗೆ ವರದಾನ!

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ((Krishi Mela) ಇಂದಿನಿಂದ ನಾಲ್ಕು ದಿನ ನಡೆಯಲಿರುವ ಕೃಷಿ ಮೇಳ ಹಲವು ವಿಶೇಷತೆಗಳಿಂದ ಕೂಡಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳ 2023 (Krishi Mela) ಹಲವು ವಿಶೇಷತೆಗಳಿಂದ ಕೂಡಿದೆ. ಈ ಬಾರಿಯ ಕೃಷಿ ಮೇಳದ ಘೋಷಾವಾಕ್ಯವು

“ಆಹರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು” ಎಂದು ಘೋಷಿಸಲಾಗಿದೆ.  

ಅಲ್ಲದೇ ಕೃಷಿ ಮೇಳದಲ್ಲಿ ಮೊದಲ ಬಾರಿಗೆ “ಬೀಜ ಸಂತೆ” ಗೆ  (Bengaluru) ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ.

ಕರ್ನಾಟಕದಲ್ಲಿ ಈ ಬಾರಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬೀಜ ಸಂತೆಯನ್ನು ಹಮ್ಮಿಕೊಂಡಿರುವುದಾಗಿ ವಿವಿ ತಿಳಿಸಿದೆ.   

ಬೆಂಗಳೂರಿನ ಹೆಬ್ಬಾಳದಲ್ಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ Gkvk)ಯಲ್ಲಿ ಕೃಷಿ ಮೇಳ 2023 ಆಯೋಜಿಸಲಾಗಿದ್ದು,

ಕೃಷಿ ಮೇಳವು ನವೆಂಬರ್‌ 17ರಿಂದ ನವೆಂಬರ್‌ 20ರ ವರೆಗೆ ನಡೆಯಲಿದೆ. 

Gkvk ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳ 2023 ಇಂದಿನಿಂದ

ಬೀಜೋತ್ಪಾದನೆ ಬಗ್ಗೆ ರೈತರಿಗೆ ಪ್ರಮುಖ ಮಾಹಿತಿ

ಈ ಬಾರಿಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ 2023ರಲ್ಲಿ ವಿಶೇಷವಾಗಿ ಬೀಜೋತ್ಪಾದನೆಯ ಕುರಿತಾಗಿದೆ.

ಕರ್ನಾಟಕದಲ್ಲಿ ಈ ಬಾರಿ ಬರಗಾಲ ಎದುರಾಗಿದೆ.

ಇಂತಹ ಸಂದರ್ಭದಲ್ಲಿ ಬೀಜೋತ್ಪಾದನೆಯನ್ನು ಪರಿಚಯಿಸುವ ಮೂಲಕ  ಬೀಜೋತ್ಪಾದನೆಯಿಂದ ಆದಾಯಗಳಿಸಲು

ರೈತರಿಗೆ ಮಾರ್ಗದರ್ಶನ ನೀಡಲು ಉದ್ದೇಶಿಸಲಾಗಿದೆ.

ಅಷ್ಟೇ ಅಲ್ಲದೇ  ಸಿರಿಧಾನ್ಯ, ಎಣ್ಣೆಕಾಳು ಹಾಗೂ ತರಕಾರಿ ಬೀಜಗಳ ಮಾರಾಟ, ಬರಗಾಲ ಎದುರಾದ ಸಂದರ್ಭದಲ್ಲಿ

ಕಡಿಮೆ ನೀರು ಬಳಸಿಕೊಂಡು ತಳಿಗಳನ್ನು ಬೆಳೆಯುವುದಕ್ಕೆ ಉತ್ತೇಜಿಸುವುದು ಸೇರಿದಂತೆ ಹಲವು ವಿಶೇಷತೆಗಳಿವೆ.   

ಬೀಜಸಂತೆ ಆಯೋಜನೆ ಏಕೆ  ?

ಕೃಷಿ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿ ಬೆಂಗಳೂರು ಕೃಷಿ ವಿವಿಯ ಕುಲಪತಿಗಳು ಬೀಜಸಂತೆ ಆಯೋಜನೆ ಮಾಡುವುದಕ್ಕೆ

ನಿರ್ದೇಶನ ನೀಡಿದ್ದರು. ಅಷ್ಟೇ ಅಲ್ಲದೇ ಈ ಬಾರಿಯ ಕೃಷಿ ಮೇಳದಲ್ಲಿ ಉತ್ತಮ ಹಾಗೂ ಗುಣಮಟ್ಟದ ಬಿತ್ತನೆ ಬೀಜಗಳ ಮಾರಾಟಕ್ಕೆ

ಅವಕಾಶವನ್ನೂ ಕಲ್ಪಿಸಲಾಗಿದೆ. 

ವಿಜ್ಞಾನಿಗಳ ಮಾರ್ಗದರ್ಶನದಲ್ಲಿ 1500 ಎಕರೆಗೂ ಅಧಿಕ ಪ್ರದೇಶದಲ್ಲಿ ಸಾವಿರಾರು ರೈತರು ಬೀಜೋತ್ಪಾದನೆ ಮಾಡುತ್ತಿದ್ದಾರೆ.  

Bangalore Krishi Mela: ಬೆಂಗಳೂರಿನ ಕೃಷಿ ಮೇಳದಲ್ಲಿ 1.6 ಲಕ್ಷ ಜನರು ಭಾಗಿ!