ಕೃಷಿ ಜಾಗರಣದ KJ ಚೌಪಾಲ್ ಕಾರ್ಯಕ್ರಮವು ಮುಂದೊಂದು ದಿನ ಉನ್ನತ ದರ್ಜೆಯ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ ಎಂದು, ಟೆಕ್ನೋ ಲೀಗಲ್ ಎಕ್ಸ್ಪರ್ಟ್ ಹಾಗೂ ಕ್ರಷಿ ವ್ಯವಹಾರಗಳ ತಜ್ಞ ವಿಜಯ್ ಸರ್ದಾನ್ ಅವರು ಹೇಳಿದರು.
ಇಂದು ಕೃಷಿ ಜಾಗರಣದ KJ ಚೌಪಾಲ್‌ನಲ್ಲಿ ನಡೆದ MoU ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ರೈತ ಕೇಂದ್ರಿತ ಸಂವಾದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೃಷಿ ಜಾಗರಣದ ಜೊತೆ ಕೈಜೋಡಿಸಿದ್ದಾರೆ. ಇದರಲ್ಲಿ ಕೃಷಿ ತಜ್ಞರೊಂದಿಗೆ ಸಂಕ್ಷಿಪ್ತ ಚರ್ಚೆ ನಡೆಸಲಿದ್ದಾರೆ ಮತ್ತು ವಿವಿಧ ಕೃಷಿ ವಿಷಯಗಳಲ್ಲಿ ಪ್ರಮುಖ ಉದ್ಯಮ ಪ್ರಮುಖರೊಂದಿಗೆ ಚರ್ಚೆಗಳನ್ನು ನಡೆಸಿ, ರೈತರ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶವನ್ನು ಒಳಗೊಂಡಿದೆ.
ಕೃಷಿ ಜಾಗರಣದ ಪ್ರಧಾನ ಸಂಪಾದಕ ಎಂಸಿ ಡೊಮಿನಿಕ್ ಮತ್ತು ಅಚೀವರ್ಸ್ ರಿಸೋರ್ಸಸ್‌ನ (Achivers Resources) ನಡುವೆ ಬುಧವಾರ ನವದೆಹಲಿಯಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.ಎಂಒಯು ಸಹಿ ಸಮಾರಂಭದಲ್ಲಿ ಎಂಸಿ ಡೊಮಿನಿಕ್ ಅವರು ವಿಜಯ್ ಸರ್ದಾನ ಅವರು ಭಾರತೀಯ ಕೃಷಿ ವಲಯದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಬಳಿಕ ಮಾತನಾಡಿದ ವಿಜಯ್ ಸರ್ದಾನ್ ಅವರು ಪ್ರಸ್ತುತ ಕೃಷಿ, ಕೃಷಿ-ವಲಯ ಪದ್ಧತಿಗಳನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಅವರು ಹೇಳಿದರು. "ಇಂದು ಕೃಷಿಗೆ ಸಂಬಂಧಿಸಿದವರಿಗೆ ಗಮನಾರ್ಹ ದಿನವಾಗಿದೆ, ಅದು ದೇಶದಲ್ಲಿ ಅಥವಾ ಜಾಗತಿಕವಾಗಿ ಬೇರೆಲ್ಲಿಯೇ ಇರಲಿ"."ಕೃಷಿ ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ರೈತರು ಸೇರಿದಂತೆ ಉದ್ಯಮದಲ್ಲಿನ ಅನೇಕ ಪ್ರಭಾವಿಗಳ, ಅವರೊಂದಿಗೆ ಉಪಯುಕ್ತವಾದ ಸಂಭಾಷಣೆಯನ್ನು ಹೊಂದಿರುವ ಒಂದು ವೇದಿಕೆಗೆ ತರುವುದು ಹೊಸ ಉಪಕ್ರಮದ ಹಿಂದಿನ ಉದ್ದೇಶವಾಗಿದೆ ಎಂದರು.
ಸರ್ದಾನ ಅವರು ಕಾರ್ಪೊರೇಟ್ ಬೋರ್ಡ್‌ಗಳು ಮತ್ತು ತಜ್ಞರ ಸಮಿತಿಗಳಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಟೆಕ್ನೋ-ಕಾನೂನು, ಟೆಕ್ನೋ-ವಾಣಿಜ್ಯ ಮತ್ತು ಟೆಕ್ನೋ-ಆರ್ಥಿಕ ನೀತಿ ಪರಿಣಿತರು, ಹಾಗೆಯೇ ಅಗ್ರಿಬಿಸಿನೆಸ್ ಮೌಲ್ಯ ಸರಣಿ ಹೂಡಿಕೆ ತಂತ್ರ ಮತ್ತು ವ್ಯಾಪಾರ ಸಲಹೆಗಾರರಾಗಿದ್ದಾರೆ. ಅಷ್ಟೇ ಅಲ್ಲದೆ ಅವರು ಪ್ರಸಿದ್ಧ ಅಂಕಣ ಬರಹಗಾರರು, ಬ್ಲಾಗರ್, ಟಿವಿ ಪ್ಯಾನಲಿಸ್ಟ್ ಮತ್ತು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹೆಸರಾಂತ ಮಾಡರೇಟರ್ ಮತ್ತು ಸ್ಪೀಕರ್ ಕೂಡ ಆಗಿದ್ದಾರೆ.