News

ಈ ಯೋಜನೆಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಿಗಲಿದೆ ಬರೋಬ್ಬರಿ 37,500 ರೂ ಸಬ್ಸಿಡಿ

27 April, 2022 9:42 AM IST By: Maltesh
ಸಾಂದರ್ಭಿಕ ಚಿತ್ರ

ರಾಷ್ಟ್ರೀಯ ಕೃಷಿ  ವಿಕಾಸ (RKVY) ಯೋಜನೆಯನ್ನು 20007 ರಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಒಂದು ಯೋಜನೆಯಾಗಿ ಪ್ರಾರಂಭಿಸಲಾಯಿತು. ಯೋಜನೆಯು ಪ್ರಾರಂಭವಾದಾಗಿನಿಂದ ಬಹಳ ಸಾಧನೆಯನ್ನು ಮಾಡಿದೆ. ಎರಡು ಯೋಜನಾ ಅವಧಿಗಳಲ್ಲಿ (11 ಮತ್ತು 12 ನೇ) ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯು ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಲು ರಾಜ್ಯಗಳನ್ನು ಉತ್ತೇಜಿಸುತ್ತದೆ. ಕೇಂದ್ರೀಯ ಪ್ರಾಯೋಜಿತ ಯೋಜನೆ (ರಾಜ್ಯ ಯೋಜನೆಗಳು) - ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ (RKVY) ಯನ್ನು ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ- ಕೃಷಿ ಮತ್ತು ಸಂಬಂಧಿತ ವಲಯಕ್ಕೆ ಸಂಭಾವನೆ ನೀಡುವ ವಿಧಾನಗಳ ಮುಂದುವರಿಕೆಗಾಗಿ ಕ್ಯಾಬಿನೆಟ್ (1ನೇ ನವೆಂಬರ್ 2017 ರಂತೆ) ಅನುಮೋದನೆ ನೀಡಿದೆ.

ಮೂರು ವರ್ಷಗಳವರೆಗೆ ಅಂದರೆ 2017-18 ರಿಂದ 2019-20 ರ ಹಣಕಾಸು ಹಂಚಿಕೆಯೊಂದಿಗೆ ರೂ. ರೈತರ ಪ್ರಯತ್ನವನ್ನು ಬಲಪಡಿಸುವ ಮೂಲಕ ಕೃಷಿಯನ್ನು ಲಾಭದಾಯಕ ಆರ್ಥಿಕ ಚಟುವಟಿಕೆಯನ್ನಾಗಿ ಮಾಡುವ ವಿಶಾಲ ಉದ್ದೇಶಗಳೊಂದಿಗೆ 15,722 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.

ಈ ಯೋಜನೆಯಲ್ಲಿ ಶೇ 50ರಷ್ಟು ಸಬ್ಸಿಡಿ

ನೀರು ಸಂರಕ್ಷಣೆ ಚಿಕ್ಕ ಹೊಂಡಗಳ ನಿರ್ಮಾಣಕ್ಕೆ (ಲೈನಿಂಗ್ ಸಹಿತ/ಲೈನಿಂಗ್ ರಹಿತ) 75000 ರೂಪಾಯಿ ಘಟಕ ವೆಚ್ಚಕ್ಕೆ ಶೇ. 50 ರಷ್ಟು ಅಂದರೆ 37500 ರೂಪಾಯಿ ಸಹಾಯಧನ ನೀಡಲಾಗುವುದು.  ಬದುಗಳ ನಿರ್ಮಾಣ, ಟ್ರೆಂಚ್ ಗಳ ನಿರ್ಮಾಣಕ್ಕೆ 4000 ರೂಪಾಯಿ ವೆಚ್ಚದಲ್ಲಿ 2000 ರೂಪಾಯಿ ಸಹಾಯಧನ ನೀಡಲಾಗುವುದು.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಸ್ಥಳೀಯವಾಗಿ ಬೇಡಿಕೆಗನುಗುಣವಾಗಿ ಎರೆಹುಳು ಗೊಬ್ಬರ, ಅಜೋಲ್ಲಾ, ಮರ ಆಧಾರಿತ ಕೃಷಿ ಕೈತೋಟ ಇತರೆ ಶೇ. 25 ರಷ್ಟು ರಿಯಾಯಿತಿ ಸಿಗಲಿದೆ. ಎರೆಹುಳು ಗೊಬ್ಬರ ಘಟಕಕ್ಕೆ 17500 ರೂಪಾಯಿಯಾದರೆ ಅದರಲ್ಲಿ 8500 ರೂಪಾಯಿ ಸಬ್ಸಿಡಿ ನೀಡಲಾಗುವುದು. ಅಜೊಲ್ಲಾ ತಯಾರಿಕೆಗೆ 1000 ರೂಪಾಯಿ ಸಹಾಯಧನ ನೀಡಲಾಗುವುದು.

ಸೌಲಭ್ಯ ಪಡೆಯಲು ಯಾವ ಯಾವ ದಾಖಲೆ ಬೇಕು?

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ರೈತರು ಸ್ವಂತ ಜಮೀನು ಹೊಂದಿರಬೇಕು. ಪಹಣಿ ಪತ್ರ ಹೊಂದಿರಬೇಕು. ಆಧಾರ್ ಕಾರ್ಡ್ ಇರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು. ಇನ್ನಿತರ ದಾಖಲೆಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ ಸಲ್ಲಿಸಬೇಕು.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ರೈತರು ಎಲ್ಲಿ ಸಂಪರ್ಕಿಸಬೇಕು?

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು, ಅರ್ಜಿಯ ಮಾದರಿ ಸೇರಿದಂತೆ ಇನ್ನಿತರ ಮಾಹಿತಿ ಕುರಿತು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕು.

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ