KPSC Recruitment 2023 : ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ ೨೩೦ ವಾಣಿಜ್ಯ ತೆರಿಗೆ ಪರಿವೀಕ್ಷಿಕರ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿಗಳನ್ನು ಆಹ್ವಾನಿಸಿದೆ. ಸೆಪ್ಟೆಂಬರ್ ೧ ರಿಂದ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಸೆಪ್ಟೆಂಬರ್ ೩೦ ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಹೆಚ್ಚಿನ ವಿವರ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಇಲಾಖೆಯ ಹೆಸರು : ವಾಣಿಜ್ಯ ತೆರಿಗೆಗಳ ಇಲಾಖೆ, ಹುದ್ದೆಯ ಪದನಾಮ : ವಾಣಿಜ್ಯ ತೆರಿಗೆ ಪರಿವೀಕ್ಷಕರು , ಹುದ್ದೆಗಳ ಸಂಖ್ಯೆ : 230 , ವೃಂದ : ಗ್ರೂಪ್ 'ಸಿ' ಉಳಿಕೆ ಮೂಲ, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ : 01-09-2023, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-09-2023
ವಿಶೇಷ ಸೂಚನೆ :
ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದ್ದು.
ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ / ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು.
ನಿಯಮಾನುಸಾರ ಆನ್ ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳ ಆಧಾರದ ಮೇಲೆ ಮಾತ್ರವೆ ದಾಖಲೆಗಳ ಪರಿಶೀಲನೆ ಮಾಡಲಾಗುವುದರಿಂದ ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಅಧಿಸೂಚನೆಯ ಅನುಬಂಧದಲ್ಲಿ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದ್ದು. (ದಾಖಲೆಗಳು ಸ್ಪಷ್ಟವಾಗಿರುಬೇಕು) ತಪ್ಪಿದ್ದಲ್ಲಿ, ಅವರ ಮೀಸಲಾತಿ/ಅಭ್ಯರ್ಥಿತ್ವವನ್ನು ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸುವ ಸಮಯದಲ್ಲಿ, ಮೀಸಲಾತಿಯನ್ನು ಕೋರದೆ ತದನಂತರದಲ್ಲಿ, ಮೀಸಲಾತಿಯನ್ನು ಪರಿಗಣಿಸುವಂತೆ ಕೋರಿ ಸಲ್ಲಿಸುವ ಮನವಿ/ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.
2.1 ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ ಸಹಿ ವಯೋಮಿತಿ, ವಿದ್ಯಾರ್ಹತ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಡ್ ಮಾಡಿದ ನಂತರ ಶುಲವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು / ಭಾವಚಿತ್ರ/ ಸಹಿಯನ್ನು ಮಾಡದೇ ಇರುವ ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
3) ಅರ್ಜಿ ಸಲ್ಲಿಸುವ ಹಂತಗಳು/ ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಆನ್-ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಿದ ಮಾತ್ರಕ್ಕೆ ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ಎಲ್ಲಾ ಷರತ್ತುಗಳನ್ನು ಪೂರೈಸಿರುತ್ತಾರೆ ಎಂದಲ್ಲ. ತದನಂತರದಲ್ಲಿ ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಹಾಗೂ ಯಾವುದೇ ಹಂತದಲ್ಲಿ ನ್ಯೂನತೆಗಳು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಈ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದು ಬಾರಿಯ ನೋಂದಣಿ ಪ್ರಕ್ರಿಯೆಯನ್ನು ಒಳಗೊಂಡಿದ್ದು, (OTR-ONE TIME REGISTRATION) ಅಭ್ಯರ್ಥಿಗಳು ನೀಡಿರುವ ಮಾಹಿತಿಯನ್ನು ಮುಂದಿನ ಎಲ್ಲಾ ಅಧಿಸೂಚನಗಳಿಗೂ ಪರಿಗಣಿಸಲಾಗುವುದರಿಂದ, ಅಭ್ಯರ್ಥಿಗಳು Profile Creation / ರುಜುವಾತುಗಳು ಸೃಷ್ಟಿಸುವ ಹಂತದಲ್ಲಿ ಅತೀ ಜಾಗರೂಕತೆಯಿಂದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕಾಗಿದೆ. ಅಭ್ಯರ್ಥಿಗಳು ಸೂಚನೆಗಳನ್ನು ಹಂತಹಂತವಾಗಿ ಓದಿಕೊಳ್ಳತಕ್ಕದ್ದು, ಎಲ್ಲಾ ಸೂಚನೆಗಳನ್ನು ಓದಿದ ನಂತರವೇ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು.
ಸೂಚನೆ:
1. “ವೈಯಕ್ತಿಕ ವಿವರದಲ್ಲಿ” SSLC ಯನ್ನು 2002 ಅಥವಾ ಅದಕ್ಕಿಂತ ಹಿಂದೆ ಅಧ್ಯಯನ ಮಾಡಿದ ಅಭ್ಯರ್ಥಿಗಳು ವಿವರಗಳನ್ನು ಸ್ವತ: [Manual Entry] ನಮೂದು ಮಾಡಬೇಕಾಗಿರುತ್ತದೆ. 2003 ಮತ್ತು ನಂತರದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳು SSLC ನೋಂದಣಿ ಸಂಖ್ಯೆಯನ್ನು ನಮೂದಿಸಿದಲ್ಲಿ ವಿವರಗಳು ಸ್ವಯಂಚಾಲಿತವಾಗಿ ಅಧ್ಯಯನ ಮಾಡಿದ ಬೋರ್ಡಿನಿಂದ ನೇರವಾಗಿ ದಾಖಲಾಗುತ್ತದೆ.
2. “ವೈಯಕ್ತಿಕ ವಿವರದಲ್ಲಿ” CBSE ಯನ್ನು 2003 ಅಥವಾ ಅದಕ್ಕಿಂತ ಹಿಂದೆ ಅಧ್ಯಯನ ಮಾಡಿದ ಅಭ್ಯರ್ಥಿಗಳು ವಿವರಗಳನ್ನು ಸ್ವತ: (Manual Entry] ನಮೂದು ಮಾಡಬೇಕಾಗಿರುತ್ತದೆ. 2004 ಮತ್ತು ನಂತರದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳು CBSE ನೋಂದಣಿ ಸಂಖ್ಯೆಯನ್ನು ನಮೂದಿಸಿದಲ್ಲಿ ವಿವರಗಳು ಸ್ವಯಂಚಾಲಿತವಾಗಿ ಅಧ್ಯಯನ ಮಾಡಿದ ಬೋರ್ಡಿನಿಂದ ನೇರವಾಗಿ ದಾಖಲಾಗುತ್ತದೆ.
3. “ವಿದ್ಯಾರ್ಹತೆಯ ವಿವರದಲ್ಲಿ" PUC ತರಗತಿಯನ್ನು 2007 ಅಥವಾ ಅದಕ್ಕಿಂತ ಹಿಂದೆ ಅಭ್ಯಸಿಸಿದ್ದಲ್ಲಿ ಅಥವಾ ಯಾವುದೇ ಡಾಟಾ ಬಾರದೇ ಇದ್ದಲ್ಲಿ ಸ್ವತಃ ವಿವರಗಳನ್ನು ನಮೂದಿಸುವುದು.
4. PUC ತರಗತಿಯನ್ನು 2008 ಮತ್ತು ನಂತರದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳು PUC ನೋಂದಣಿ ಸಂಖ್ಯೆಯನ್ನು ನಮೂದಿಸಿದಲ್ಲಿ ವಿವರಗಳು ಸ್ವಯಂಚಾಲಿತವಾಗಿ ಅಧ್ಯಯನ ಮಾಡಿದ ಬೋರ್ಡಿನಿಂದ ನೇರವಾಗಿ ದಾಖಲಾಗುತ್ತದೆ.
5. “ಗುರುತಿನ ಪುರಾವೆ /ವಿವರದಲ್ಲಿ" Adhar / Kutumba ID /Ration Card ನ ಸಂಖ್ಯೆಗಳನ್ನು ನಮೂದಿಸಿದಲ್ಲಿ ನಿಮ್ಮ ಖಾಯಂ ವಿಳಾಸದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯಲಾಗುವುದು.
6. “ಮೀಸಲಾತಿ ವಿವರದಲ್ಲಿ ನೀವು ಮೀಸಲಾತಿ ಯನ್ನು ಪಡೆಯಲು ಇಚ್ಚಿಸಿದಲ್ಲಿ ನಿಮ್ಮ ಜಾತಿ ಮೀಸಲಾತಿ / HK ಮೀಸಲಾತಿ ಪ್ರಮಾಣ ಪತ್ರದ RD ಸಂಖ್ಯೆಯನ್ನು ನಮೂದಿಸಿದಲ್ಲಿ API ಮೂಲಕ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆಯಲಾಗುವುದು ಅಥವಾ ಸ್ವತ: ಅಭ್ಯರ್ಥಿಗಳು [Manual Entry ] ವಿವರಗಳನ್ನು ದಾಖಲಿಸಲು ಅವಕಾಶ ನೀಡಲಾಗಿರುತ್ತದೆ.
7. ಅಭ್ಯರ್ಥಿಗಳು KPSC ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ, ಅರ್ಜಿ ಸಲ್ಲಿಸಬೇಕು, ಇದರ ಹೊರತಾಗಿ ಯಾವುದೇ ಇತರ ಮೂಲಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೊಸದಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು, ಅರ್ಜಿದಾರರು https://kpsconline.karnataka.gov.in ಗೆ ಭೇಟಿ ನೀಡಬೇಕು ಮತ್ತು ತಮ್ಮನ್ನು ನೋಂದಾಯಿಸಿಕೊಳ್ಳಲು "ಹೊಸ ಅರ್ಜಿದಾರರ ನೋಂದಣಿ" (New Registration) ಲಿಂಕ್ ಅನ್ನು ಕಿಕ್ ಮಾಡಬೇಕು,
- ನೋಂದಣಿ ಮತ್ತು ಲಾಗಿನ್ ರುಜುವಾತುಗಳನ್ನು ರಚಿಸಲು ನೀವು ಮಾನ್ಯವಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರುವಿರಿ ಎಂದು ಖಚಿತ ಪಡಿಸಿಕೊಳ್ಳಿ,
- ಒಮ್ಮೆ ನೀವು ನೋಂದಾಯಿಸಿದ ಮತ್ತು ನಿಮ್ಮ ಲಾಗಿನ್ ರುಜುವಾತು (USER ID AND PASSWORD) ಗಳನ್ನು ಪಡೆದ ನಂತರ, "ಅರ್ಜಿದಾರರ ವಿವರಗಳ ನೋಂದಣಿ" (APPLICANT DEATIL REGISTRATION) ಕಿಕ್ ಮಾಡುವ ಮೂಲಕ ನಿಮ್ಮ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಲು ಮುಂದುವರಿಯಿರಿ,
- ಅಭ್ಯರ್ಥಿಗಳು ತಮ್ಮ ವಿವರಗಳನ್ನು ಒಮ್ಮೆ ಮಾತ್ರ ಭರ್ತಿ ಮಾಡಬೇಕಾಗುತ್ತದೆ ಮತ್ತು ಈ ವಿವರಗಳನ್ನು ಎಲ್ಲಾ ಭವಿಷ್ಯದ KPSC ಅಧಿಸೂಚನೆಗಳಿಗೆ ಬಳಸಲಾಗುತ್ತದೆ, ಆದ್ದರಿಂದ ನಿಮ್ಮ USER ID ಮತ್ತು Password ಗಳನ್ನು ಜೋಪಾನವಾಗಿ ಕಾಯ್ದಿಟ್ಟುಕೊಳ್ಳಿ, ನೀವು ನಿಮ್ಮ ಲಾಗಿನ್ ನಲ್ಲಿ ಮಾತ್ರ ನಿಮ್ಮ ಮಾಹಿತಿಯನ್ನು ನವೀಕರಿಸಬಹುದು. 6. ನಿಮ್ಮ ಅರ್ಜಿದಾರರ ವಿವರ ಪುಟದಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಓದಗಿಸಿ ಮತ್ತು "ಬಳಿಸು" (SAVE) ಬಟನ್ ಅನ್ನು ಬಳಸಿಕೊಂಡು ಅದನ್ನು ಉಳಿಸಲು ಖಚಿತಪಡಿಸಿಕೊಳ್ಳಿ.
- ನೀವು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು, ಸಹಿ ಅಪ್‌ಲೋಡ್ ಮಾಡಬೇಕಾಗುತ್ತದೆ, ಭಾವಚಿತ್ರವು 200 KB ಮೀರಬಾರದು ಮತ್ತು ಸಹಿ 70 KB ಒಳಗೆ ಇರಬೇಕು,
ಗಮನಿಸಿ: ಕೇವಲ ಸಹಿಯನ್ನು ಮತ್ತು ಭಾವಚಿತ್ರವನ್ನು JPEG/JPGಸ್ವರೂಪದಲ್ಲಿ ಅಪ್‌ಲೋಡ್ ಮಾಡಬೇಕು.
- ನಿಮ್ಮ ರುಜುವಾತುಗಳೊಂದಿಗೆ (USER ID AND PASSWORD) ಲಾಗಿನ್ ಮಾಡಿದ ನಂತರ, " Apply to Post " ಅಡಿಯಲಿ. ನೀವು ಸಕ್ರಿಯ ಅಧಿಸೂಚನೆಗಳನ್ನು ನೋಡುತ್ತಿರಿ. ನೀವು ಅರ್ಜಿ ಸಲ್ಲಿಸಲು ಬಯಸುವ ಅಧಿಸೂಚನೆಯ ಪಕ್ಷದಲ್ಲಿರುವ" Apply Post " ಲಿಂಕ್ ಅನ್ನು ಕ್ಲಿಕ್ ಮಾಡಿ.
- "Apply Post" ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ನೀವು ಅಧಿಸೂಚನೆಯ ಪ್ರಕಾರ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದೀರಾ ಎಂದು ತಂತ್ರಾಂಶವು ಪರಿಶೀಲಿಸುತ್ತದೆ. ನೀವು ಅನರ್ಹರಾಗಿದ್ದರೆ, ಸಿಸ್ಟಮ್ ಸೂಕ್ತವಾದ ಸಂದೇಶವನ್ನು ಪ್ರದರ್ಶಿಸುತ್ತದೆ. 10. ಅರ್ಹತಾ ಷರತ್ತುಗಳನ್ನು ಪೂರೈಸಿರುವ ಅಭ್ಯರ್ಥಿಗಳಿಗೆ ಮಾತ್ರ ಅವರ ಅರ್ಜಿಯನ್ನು ಮುಂದುವರಿಸಲು ತಂತ್ರಾಂಶವು ಅನುಮತಿಸುತ್ತದೆ,
- ಅರ್ಜಿಯ ಅಂತಿಮ ಸಲಿಕೆಗೆ ಮೊದಲು ಅರ್ಜಿಯಲ್ಲಿನ ಎಲ್ಲಾ ಸಂಬಂಧಿತ ಕ್ಷೇತ್ರಗಳನ್ನು ಸರಿಯಾಗಿ ಭರ್ತಿ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ನಿರ್ದಿಷ್ಟ ಹುದ್ದೆಗೆ ಅರ್ಜಿ ಸಲ್ಲಿಸಿದ ನಂತರ ಬದಲಾವಣೆಗೆ ಅವಕಾಶವಿರುವುದಿಲ್ಲ.
- ನಿರ್ದಿಷ್ಟ: ಅಧಿಸೂಚನೆಗಾಗಿ ಅರ್ಜಿ ಶುಲ್ಕವನ್ನು ಪಾವತಿಸಲು ವಿಫಲವಾದರೆ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. SC/ST/CAT-1/ ದೈಹಿಕ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಶುಲ್ಕವನ್ನು ಪಾವತಿಸಲು ಕೆಳಗಿನ ವಿಧಾನವನ್ನು ಅನುಸರಿಸಿ:
ಹಂತ 1: ನೀವು ಅರ್ಜಿ ಸಲ್ಲಿಸಲು ಬಯಸುವ ನಿರ್ದಿಷ್ಟ ಅಧಿಸೂಚನೆಗಾಗಿ" APPLY Post" ಲಿಂಕ್ ಅನ್ನು ಕಿಕ್ ಮಾಡಿ.
ಹಂತ 2: ಆಯ್ಕೆ ಮಾಡಿದ ಅಧಿಸೂಚನೆಗಾಗಿ ಆಫ್ರಿಕೇಶನ್ ಅನ್ನು ಪರಿಶೀಲಿಸಿ.
ಹಂತ 3: "Pay Now" ಬಟನ್ ಅನ್ನು ಕ್ಲಿಕ್ ಮಾಡಿ ಅದು ನಿಮ್ಮನ್ನು ಪಾವತಿ ಪರದೆಗೆ ಮರು ನಿರ್ದೇಶಿಸುತ್ತದೆ. ಅಲಿ, ನೀವು UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಆಯ್ಕೆ ಮಾಡಬಹುದು.
ಹಂತ 4: ಪಾವತಿ ಯಶಸ್ವಿಯಾದಲಿ, ಪಾವತಿಯ ಯಶಸ್ಸನ್ನು ದೃಢೀಕರಿಸುವ ಮೂಲಕ ನಿಮ್ಮನ್ನು ಅರ್ಜಿ ಹಾಕಲು ಮರು ನಿರ್ದೇಶಿಸುತ್ತದೆ.
ಹಂತ 5: ನೀವು" Applied Post " ಬ್ರೆಡ್‌ನಿಂದ ಅರ್ಜಿಯನ್ನು (APPLICATION COPY) ಡೌನ್ ಲೋಡ್ ಮಾಡಬಹುದು.
ಹಂತ 6: ಪಾವತಿ ವಹಿವಾಟು ವಿಫಲವಾದಲ್ಲಿ, Applied Post ವಿಭಾಗದಲ್ಲಿ. "Re-Pay" ಲಿಂಕ್ ಅನ್ನು ಕಿ ಮಾಡಿ ಮತ್ತು ಹಂತ 3 ಅನ್ನು ಪುನರಾವರ್ತಿಸಿ,
- ಆಯೋಗದ ಅಧಿಸೂಚನೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ ಆಯೋಗವು ಪರೀಕ್ಷೆಯನ್ನು ನಿಗದಿಪಡಿಸಿದಾಗ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು ನೀವು ಸೂಚನೆಯನ್ನು SMS ಮೂಲಕ ಸ್ವೀಕರಿಸುತ್ತೀರಿ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಂದರೆಗಳು ಎದುರಾದಲ್ಲಿ ಈ ಕೆಳಕಂಡ ಹೆಲೈನ್ ನಂಬರ್ ಅನ್ನು ಸಂಪರ್ಕಿಸಲು ಸೂಚಿಸಿದೆ : HELP LINE NO:080-30574957/30574901