News

ಇಂದಿನಿಂದ ಕೊಪ್ಪಳ ಮಾವು ಮೇಳ ಆರಂಭ..ವಿದೇಶಿ ಮಾವು ತಳಿಗಳ ಪ್ರದರ್ಶನ

23 May, 2023 1:44 PM IST By: Maltesh
Koppal Mango Mela starts from today

ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ 'ಕೊಪ್ಪಳ ಮಾವು ಮೇಳ-2023"ನ್ನು ಮೇ 23ರಿಂದ ಮೇ 31ರವರೆಗೆ ನಗರದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇಂದಿನಿಂದ ಆರಂಭವಾಗಿದೆ.

ಮಾವು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ 'ಕೊಪ್ಪಳ ಕೇಸರ್ ಮಾವು' ಹಾಗೂ ದೇಶಿ ಮತ್ತು ವಿದೇಶಿ ಮಾವುತಳಿಗಳ ಪ್ರದರ್ಶನ ಇರಲಿದೆ. ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ ಮಾವಿನ ಹಣ್ಣು, ವಿವಿಧ ಮಾವಿನ ತಳಿಗಳ ರುಚಿಯನ್ನು ಸವಿಯಿರಿ, ರೈತರಿಂದ ನೇರವಾಗಿ ಗ್ರಾಹಕರಿಗೆ, ರೈತರಿಂದ ಖರೀದಿಸಿ ರೈತರನ್ನು ಪ್ರೋತ್ಸಾಹಿಸಿ, ಎಂಬ ಉದ್ದೇಶಗಳೊಂದಿಗೆ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜನೆ ಮಾಡಲಾಗಿದೆ.

ಮಾವು ಮೇಳದಲ್ಲಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಲಾಭ ಪಡೆಯುವುದರ ಜೊತೆಗೆ ರೈತರಿಗೆ ಪ್ರೋತ್ಸಾಹಿಸುವಂತೆ ಕೊಪ್ಪಳ ತೋಟಗಾರಿಕೆ ಉಪ ನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್.ಆರ್.ಆರ್ ಕೇಂದ್ರಗಳ ವಿವರ: ಎಲ್ಲಾ ಸಾರ್ವಜನಿಕರು ಮರುಬಳಕೆ ವಸ್ತುಗಳನ್ನು ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಆರ್.ಆರ್.ಆರ್ ಸಂಗ್ರಹಣೆಯಾದ ಘನ ತ್ಯಾಜ್ಯ ವಿಲೇವಾರಿ ವಾಹನಗಳ ನಿಲುಗಡೆ ಸ್ಥಳ, ನಗರಸಭೆಯ ನೀರು ಸರಬರಾಜು ಘಟಕ, ವಾರ್ಡ ನಂಬರ್-01 ಮಹೆಬೂಬ ನಗರ, ಜೆ.ಪಿ ಮಾರುಕಟ್ಟೆಯ ನಗರಸಭೆಯ ಐ.ಡಿ.ಎಸ್.ಎಂ.ಟಿ ಮಳಿಗೆ, ದಿವಟರ್ ಸರ್ಕಲ್ ಜವಹಾರ್ ರಸ್ತೆ ನಗರಸಭೆಯ ಐ.ಡಿ.ಎಸ್.ಎಂ.ಟಿ ಮಳಿಗೆ, ಘನ ತ್ಯಾಜ್ಯ ವಿಲೇವಾರಿ ಘಟಕ, ನಗರಸಭೆ ಕಾರ್ಯಾಲಯ ಕೊಪ್ಪಳ ಆರ್.ಆರ್.ಆರ್ ಸಂಗ್ರಹಣ ಕೇಂದ್ರಕ್ಕೆ ತಂದುಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯದ ಆರೋಗ್ಯ ಶಾಖೆಗೆ ಸಂಪರ್ಕಿಸುವಹುದಾಗಿದೆ ಎಂದು ಕೊಪ್ಪಳ ನಗರಸಭೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಕೊಪ್ಪಳ ನಗರಸಭೆಯಲ್ಲಿ ಮರುಬಳಕೆ ವಸ್ತುಗಳ ಸಂಗ್ರಹಣ ಕೇಂದ್ರ ಆರಂಭ

ಕೊಪ್ಪಳ ನಗರಸಭೆಯಲ್ಲಿ ಮರುಬಳಕೆ ವಸ್ತುಗಳ ಸಂಗ್ರಹಣ ಕೇಂದ್ರವನ್ನು ತೆರೆಯಲಾಗಿದೆ. ಮರುಬಳಕೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಈ ಆರ್.ಆರ್.ಆರ್ ಕೇಂದ್ರಗಳಲ್ಲಿ ನೀಡುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ಕೊಪ್ಪಳ ನಗರಸಭೆಯಲ್ಲಿ ಎಸ್.ಬಿ.ಎಂ ಯೋಜನೆಯಡಿಯಲ್ಲಿ ``ಮೇರಿ ಲೈಫ್ ಮೇರಿ ಸ್ವಚ್ಛ ಶೆಹರ್'' ಅಂದರೆ ನನ್ನ ಜೀವನ ನಮ್ಮ ಸ್ವಚ್ಛ ಸುಂದರ ನಗರ ಕಾರ್ಯಕ್ರಮದಡಿ ಈ ಯೋಜನೆ ರೂಪಿಸಲಾಗಿದೆ.

ನಗರದ ಸಾರ್ವಜನಿಕರು ತಮ್ಮ ಮನೆ ಮತ್ತು ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಅಂದರೆ ಆರ್.ಆರ್.ಆರ್ (ರೆಡ್ಯೂಸ್ ರೀಯೂಸ್ & ರೀಸೈಕಲ್) ಆಗುವಂತ ವಸ್ತುಗಳಾದ ಬಳಕೆಯಾದ ಪ್ಲಾಸ್ಟಿಕ್, ಹಳೆಬುಕ್ಸ್, ಎಲೆಕ್ಟ್ರಿಕ್ ಸಾಮಾನುಗಳು, ಹಳೆಬಟ್ಟೆ, ಗೊಂಬೆಗಳು, ನ್ಯೂಸ್ ಪೇಪರ್ ಮತ್ತು ಉಪಯೋಗಕ್ಕೆ ಬಾರದ ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಇವುಗಳ ಕಲೆಕ್ಷನ್ (ಸಂಗ್ರಹ) ಕೇಂದ್ರಗಳನ್ನು ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ತೆರೆಯಲಾಗಿದೆ.