ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಯೋಜನೆ ಪ್ರಾರಂಭವಾಗಿದ್ದು, ಕಲಬುರಗಿ ಜಿಲ್ಲೆಯ ರೈತರು ಆಂಡ್ರಾಯ್ಡ್ ಮೊಬೈಲ್ ಮೂಲಕ ಗೂಗಲ್ ಪ್ಲೇಸ್ಟೋರ್‌ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ 2021-22ನೇ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಜಮೀನಿನ ಸರ್ವೇ ನಂಬರ್, ಹಿಸ್ಸಾ ನಂಬರವಾರು ತಾವು ಬೆಳೆದ ಕೃಷಿ ಬೆಳೆ ಹಾಗೂ ಬಹುವಾರ್ಷಿಕ ತೋಟಗಾರಿಕೆ, ಅರಣ್ಯ ಮತ್ತು ಇತರೆ ಬೆಳೆಯ ಮಾಹಿತಿ ಛಾಯಾಚಿತ್ರ ಸಹಿತ ಸ್ವತ: ರೈತರೆ ಬೆಳೆ ಸಮೀಕ್ಷೆ ಮಾಹಿತಿಯನ್ನು ದಾಖಲಿಸಿಕೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಆಧಾರ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿ ಮೂಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೂಬೈಲ್ ಸಂಖ್ಯೆಗೆ ಓಟಿಪಿ ಬರಲಿದ್ದು, ಒಟಿಪಿಯನ್ನು ಬಳಸಿ ಆ್ಯಪ್‌ನ್ನು ಸಕ್ರಿಯಗೊಳಿಸಿಕೊಂಡು ನಂತರ ಜಿಲ್ಲೆ, ತಾಲೂಕು, ಹೊಬಳಿ, ಗ್ರಾಮ, ಸರ್ವೆ ನಂಬರ್, ಮಾಲೀಕರ ಹೆಸರು ಆಯ್ಕೆಮಾಡಿ ಕ್ಷೇತ್ರವನ್ನು ನಮೂದಿಸಿ ಸರ್ವೇ ನಂಬರ್‌ನ ಗಡಿರೇಖೆ ಒಳಗೆ ನಿಂತು ಬೆಳೆಗಳ ವಿವರ ದಾಖಲಿಸಿ ಛಾಯಾಚಿತ್ರ ತೆಗೆದು ಅಪ್‌ಲೋಡ್ ಮಾಡಬಹುದಾಗಿದೆ. http:/play.google.com/store/apps/details?id=com.csk.Khariffarmer2021.cropsurvey ಲಿಂಕ್ ಬಳಸಿ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂದಪಟ್ಟ ಗ್ರಾಮದ ಖಾಸಗಿ ನಿವಾಸಿ (ಪಿಆರ್), ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೇಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಹಾಗರಗುಂಡಗಿ ಗ್ರಾಮದಲ್ಲಿ ಜಾನುವಾರುಗಳ ಆರೋಗ್ಯ ಶಿಬಿರ
ವಿಶ್ವ ಪ್ರಾಣಿ ಜನ್ಯ ರೋಗಗಳ ದಿನಾಚರಣೆ ಅಂಗವಾಗಿ ಕಲಬುರಗಿ ಪಶುಸಂಗೋಪನಾ ಇಲಾಖೆ ಹಾಗೂ ಸ್ನಾತಕೋತ್ತರ ಸರ್ಕಾರಿ ಪಶುವೈದ್ಯರ ಸಂಘ (ಬೆಂಗಳೂರು) ಇವರ ಸಹಯೋಗದಲ್ಲಿ ಕಲಬುರಗಿ ತಾಲೂಕಿನ ಪಶು ಆಸ್ಪತ್ರೆಯ ಫರಹತಾಬಾದ್ ವ್ಯಾಪ್ತಿಯ ಹಾಗರಗುಂಡಗಿ ಗ್ರಾಮದಲ್ಲಿ ಸೋಮವಾರ ಪಶು ಆರೋಗ್ಯ ಶಿಬಿರ ಹಾಗೂ ಕುರಿ/ಮೇಕೆಗಳಿಗೆ ಪಿ.ಪಿ.ಆರ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಜಂತುನಾಶಕ ವಿತರಣೆ ಹಾಗೂ ಪಿ.ಪಿ.ಆರ್ ಲಸಿಕೆ/ಪ್ರಾಣಿ ಜನ್ಯ ರೋಗದ ಜಾಗೃತಿ, ಆಡು ಮತ್ತು ಆಕಳುಗಳಲ್ಲಿ ನುರಿತ ತಜ್ಞ ಪಶುವೈದ್ಯರಿಂದ ಪೋರ್ಟೇಬಲ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮುಖಾಂತರ ಗರ್ಭಪರೀಕ್ಷೆ ಮಾಡಲಾಯಿತು. ಶಿಬಿರದಲ್ಲಿ 8 ಕೃತಕ ಗರ್ಭಧಾರಣೆ, ಎರಡು ಎತ್ತುಗಳಿಗೆ ಕಣ್ಣಿನ ಶಸ್ತçಚಿಕಿತ್ಸೆ ಹಾಗೂ ಎರಡು ಎತ್ತುಗಳಿಗೆ ಸೆಟಕ್ನಾಲು ಶಸ್ತçಚಿಕಿತ್ಸೆ ಮಾಡಲಾಯಿತು.
ಕಲಬುರಗಿ ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಬಿ.ಎಸ್. ಪಾಟೀಲ್, ಕಲಬುರಗಿ ತಾಲೂಕಿನ ಸಹಾಯಕ ನಿರ್ದೇಶಕ ಡಾ.ಎಸ್.ಎಸ್.ಟಕ್ಕಳಕಿ, ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಯಲ್ಲಪ್ಪಾ ಇಂಗಳೆ, ಡಾ. ವಿಜಯ್ ಕುಮಾರ್ ತೆಲಗಾರ, ಡಾ.ಜಯಪ್ರಕಾಶ್ ಗಿಣ್ಣಿ, ಡಾ.ದೇವೇಂದ್ರ ಬಿರಾದಾರ, ಡಾ. ಸುನೀಲ್ ಜಿರೋಬೆ, ಡಾ.ಶರಣಗೌಡ, ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.