ಹಣ್ಣುಗಳ ರಾಜ ಎಂದೇ ಖ್ಯಾತಿ ಗಳಿಸಿದ ಮಾವಿನ ಹಣ್ಣಿನ ದರ್ಬಾರು ಶುರುವಾಗಿದೆ. ಪ್ರತಿಯೊಬ್ಬರಿಗೂ ಈ ಕಾಲದಲ್ಲಿ ಬಾಯಲ್ಲಿ ನೀರೂರಿಸುವ, ರುಚಿಯಾದ ಮಾವಿನ ಹಣ್ಣು ತಿನ್ನಬೇಕು ಅನ್ನುವ ಆಸೆ ಇರುತ್ತೆ.
ಆದರೆ ಏರುತ್ತಿರುವ ಸೂರ್ಯನ ಬಿಸಿಲು ಅಂಗಡಿಗಳಿಗೆ ಹೋಗಿ ಮಾವು ಖರೀದಿಸಲು ಬಿಡುತ್ತಿಲ್ಲ. ಜೊತೆ ಜೊತೆಗೆ ಇತ್ತೀಚಿನ ಈ ಆನ್‌ಲೈನ್ ಜಮಾನದಲ್ಲಿ ಎಲ್ಲವೂ ಸರಳವಾಗಿ ಬಿಟ್ಟಿದೆ. ಕುಂತಲ್ಲಿಯೇ ಎಲ್ಲವೂ ಬಂದು ಬಿಡುವ ಈ ಕಾಲದಲ್ಲಿ ಇದೀಗ ಮಾವಿಗೂ ಜೂಡ ಆನಲೈನ್ ಟಚ್ ನೀಡುವ ವಿಭಿನ್ನ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.
ಹೌದು ರಾಜ್ಯದಲ್ಲಿ ಬೆಳೆಯುವ ಲೋಕಲ್ ಮಾವಿನ ಹಣ್ಣುಗಳನ್ನು ಆನ್‌ಲೈನ್ ವೇದಿಕೆಯ ಮೂಲಕ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (KSMD&MCL) ಯಾವುದೇ ಮಧ್ಯವರ್ತಿಗಳಿಲ್ಲದೆ ಉತ್ಪನ್ನವನ್ನು ನೇರವಗಿ ರೈತರಿಂದ ಗ್ರಾಹಕರಿಗೆ ಮಾರಾಟ ಮಾಡಲು ಮೇ 16 ರಂದು ವಿಶೀಷ್ಟವಾದ ಸೇವೆಯುಳ್ಳ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಆನ್‌ಲೈನ್ ಪೋರ್ಟಲ್‌ಗೆ ಕರ್ನಾಟಕದ ಟ್ರೇಡ್‌ಮಾರ್ಕ್ ಮಾವು ಕರ್ಸಿರಿಯ ಹೆಸರನ್ನು ಇಡಲಾಗಿದೆ. ಭಾರತ ಅಂಚೆ ಸಹಯೋಗದೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ. ಇದನ್ನು www.karsirimangoes.karnataka.gov.in ಗೆ ಭೇಟಿ ನೀಡಿ ಮಾವುಗಳನ್ನು ಆರ್ಡರ್ ಮಾಡಬಹುದು.
ಇದರ ಮೂಲಕ ಕನಿಷ್ಠ ವೆಚ್ಚದಲ್ಲಿ ಮನೆ ಬಾಗಿಲಿಗೆ ರುಚಿಕರವಾದ, ತಾಜಾ ಮಾವಿನಹಣ್ಣುಗಳನ್ನು ಸವಿಯುವ ಭಾಗ್ಯ ಗ್ರಾಹಕರಿಗೆ ದೊರೆಯಲಿದೆ. ಇದು ಗ್ರಾಹಕರು ಮತ್ತು ರೈತರನ್ನು ನೇರವಾಗಿ ಸಂಪರ್ಕಿಸುವ ಆಲೋಚನೆಯೂ ಹೌದು.
ಅಲ್ಫೋನ್ಸೋ, ಬಂಗನಪಲ್ಲಿ, ನೀಲಂ, ದಶೆಹರಿ, ಕೇಸರ್, ಬೆನೇಶನ್, ತೋತಾಪುರಿ, ಮಾಲ್ಗೋವಾ, ಮಲ್ಲಿಕಾ, ರಸಪುರಿ ಮತ್ತು ಸೆಂಧುರ ಮಾವಿನ ತಳಿಗಳು ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿವೆ. ದಾಳಿಂಬೆ, ಪೇರಳೆ, ಆವಕಾಡೊ ಮತ್ತು ಅಂಜೂರದಂತಹ ತಾಜಾ ಮತ್ತು ವಿದೇಶಿ ಹಣ್ಣುಗಳು ಕೂಡ ಶೀಘ್ರದಲ್ಲೇ ಪೋರ್ಟಲ್‌ನಲ್ಲಿ ಲಭ್ಯವಾಗಲಿವೆ.
3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?PM
GatiShakti: ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್ಬ್ಯಾಂಡ್ ಸೇವೆ ನೀಡಲು “GatiShakti Sanchar” ಪೋರ್ಟಲ್ ಪ್ರಾರಂಭ!
ಏನಿದರ ವಿಶೇಷತೆಗಳು..?
ಬೆಂಗಳೂರು ನಿವಾಸಿಗಳು ಮಾತ್ರ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಆರ್ಡರ್‌ಗಳನ್ನು ನೀಡಬಹುದು.
ಈ ವೆಬ್‌ಸೈಟ್‌ಗೆ ಕನಿಷ್ಠ 3 ಕೆಜಿ ಆರ್ಡರ್ ಅತ್ಯಗತ್ಯ.
ಮಾವಿನ ತಳಿಗಳ ಫೋಟೋಗಳನ್ನು ಮತ್ತು ಬೆಲೆಗಳನ್ನು ಇದರಲ್ಲಿ ಪ್ರದರ್ಶಿಸಲಾಗುತ್ತದೆ. ಇದರಿಂದ ನಮಗೆ ಬೇಕಾದ ಮಾವನ್ನು ಆಯ್ಕೆಮಾಡುವುದು ಸುಲಭವಾಗುತ್ತದೆ.
ಇದಾದ ನಂತರ ಮಾವು ಬೆಳೆದ ರೈತರು ತಾವು ಬೆಳೆದ ಹಣ್ಣುಗಳನ್ನು ಪೋಸ್ಟ್ ಆಫೀಸ್ಲ್ಲಿ ಜೆನರಲ್ ಪ್ಯಾಕಿಂಗ್ ಮಾಡಿ ನೀಡಿದ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ.
PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ
IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!