ಇಂದು ವಿಶ್ವ ಹುಲಿ ದಿನಾಚರಣೆ (Tigerday) ಆಚರಿಸಲಾಗುತ್ತಿದ್ದು, ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಗೆ ಶೇ. 70 ರಷ್ಟು ಭಾರತದಲ್ಲಿಯೇ ಹೆಚ್ಚು ಅವಾಸಸ್ಥಾನವಿರುವುದು ಹೆಮ್ಮೆಯ ಸಂಗತಿ. ಜಗತ್ತಿನಲ್ಲಿರುವ ಹುಲಿಗಳಲ್ಲಿ ಸರಿಸುಮಾರು ಮುಕ್ಕಾಲುಪಾಲು ಭಾರತದಲ್ಲೇ ಹುಲಿಗಳ ಸಂಖ್ಯೆಯಿದೆ. 1973 ರಲ್ಲ ಭಾರತದಲ್ಲಿ ಒಂಬತ್ತು ಹುಲಿ ರಕ್ಷಿತಾರಣ್ಯ ಇದ್ದವು. ಈಗ ಅವುಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಜಗತ್ತಿನ ಒಟ್ಟು ಹುಲಿಗಳ ಪೈಕಿ ಶೇ. 70 ರಷ್ಟು ವ್ಯಾಘ್ರಗಳಿಗೆ ಭಾರತ ಅವಾಸ ಸ್ಥಾನವಾಗಿದೆ.
ಹುಲಿಗಳ ಸಂಖ್ಯೆಯಲ್ಲಿ ಕರ್ನಟಕ ಎರಡೇ ಸ್ಥಾನ(Karnataka 2nd place):
ದೇಶದಲ್ಲಿಯೇ ಅತಿಹೆಚ್ಚು ಹುಲಿಗಳಿರುವ ಪ್ರದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಜ್ಯ ಈಗ ಎರಡನೇ ಸ್ಥಾನಕ್ಕೆ(Karnataka slipped second position) ಕುಸಿದಿದೆ. 526 ಹುಲಿಗಳ ಸಂಖ್ಯೆಯೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನಕ್ಕೇರಿದ್ದರೆ, ಕರ್ನಾಟಕ 524 ಹುಲಿಗಳೊಂದಿಗೆ 2ನೇ ಸ್ಥಾನಕ್ಕಿಳಿದಿದೆ. 442 ಹುಲಿಗಳ ಸಂಖ್ಯೆಯೊಂದಿಗೆ ಉತ್ತರಖಂಡ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರಸ್ತುತ ಕಾಳಿ, ಭದ್ರಾ, ನಾಗರಹೊಳೆ, ಬಿಳಿಗಿರಿ ರಂಗನಬೆಟ್ಟ, ಬಂಡಿಪುರದಲ್ಲಿ ಹುಲಿ ಸಂರಕ್ಷಿತ ಧಾಮಗಳಿವೆ.
ಶೇ. 80 ರಷ್ಟು ಹುಲಿಗಳು ಭಾರತದಲ್ಲಿ:
ಜಗತ್ತಿನಲ್ಲಿ ಇರುವ ಹುಲಿ (Tiger)ಗಳ ಪೈಕಿ ಶೇ 80ರಷ್ಟು ಭಾರತದ ಕಾಡುಗಳಲ್ಲಿವೆ. ಭಾರತದ ವಿವಿಧ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ 2,967 ಹುಲಿಗಳಿವೆ ಎಂದು ‘ಸ್ಟೇಟಸ್ ಆಫ್ ಟೈಗರ್ಸ್: ಕೊ ಪ್ರಿಡೇಟರ್ಸ್ ಎಂಡ್ ಪ್ರೇ ಇನ್ ಇಂಡಿಯಾ’ ಎಂಬ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. ಹುಲಿಗಳ ಸಂಖ್ಯೆ ಏರಿಕೆ ಮತ್ತು ಸಂರಕ್ಷಣೆಯಲ್ಲಿ ಬಹುದೊಡ್ಡ ಯಶಸ್ಸು ದಕ್ಕಿದೆ. ಈ ಯಶಸ್ಸು ಅಭೂತಪೂರ್ವವಾದುದು. ಯಾಕೆಂದರೆ, 2006ರ ಹುಲಿಗಣತಿ ಪ್ರಕಾರ ದೇಶದಲ್ಲಿ ಇದ್ದ ಹುಲಿಗಳ ಸಂಖ್ಯೆ 1,411. 2010 ಮತ್ತು 2014ರ ಗಣತಿಯಲ್ಲಿ ಇದು ಕ್ರಮವಾಗಿ 1,706 ಮತ್ತು 2,226ಕ್ಕೆ ಏರಿಕೆಯಾಯಿತು. ದೇಶದಾದ್ಯಂತ ಎಲ್ಲಾ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ. 2006ರ ಗಣತಿಯಲ್ಲಿ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳನ್ನು ಪತ್ತೆ ಮಾಡಲಾಗಿತ್ತು. ನಂತರದ ಎರಡು ಗಣತಿಗಳು ನಡೆದಾಗ ಕರ್ನಾಟಕದಲ್ಲಿ ಹೆಚ್ಚು ಹುಲಿಗಳು ಪತ್ತೆಯಾಗಿದ್ದವು. ಈಗ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳು ಪತ್ತೆಯಾಗಿವೆ.
ಏನಿದು ಹುಲಿ ದಿನ (What is Tiger day)?
ವರ್ಷದಿಂದ ವರ್ಷಕ್ಕೆ ನಶಿಸಿಹೋಗುತ್ತಿರುವ ಹುಲಿಗಳನ್ನು ಸಂರಕ್ಷಿಸಲು ಹುಲಿಗೂ ಒಂದು ದಿನ ಗುರುತಿಸಲಾಗಿದೆ. ಹುಲಿ ಸಂರಕ್ಷಣೆ ಮತ್ತು ಸಾರ್ವಜನಿಕರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010 ರ ಜುಲೈ 29ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್‌ಪೀಟರ್‌ಬರ್ಗ್‌ನಲ್ಲಿ ಆಚರಿಸಲಾಯಿತು. ಹುಲಿ ಸಂರಕ್ಷಣೆ ಜಾಗೃತಿಗಾಗಿ ಪ್ರತಿವರ್ಷ ಜುಲೈ 29 ರಂದು ಟೈಗರ್ ಡೇ ಆಚರಿಸಲಾಗುತ್ತದೆ.
ರಾಷ್ಟ್ರೀಯ ಪ್ರಾಣಿ ಘೋಷಣೆ:
1973ರ ಏಪ್ರೀಲ್ ತಿಂಗಳಲ್ಲಿ ಹುಲಿಯನ್ನು ಭಾರತ ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಣೆ ಮಾಡಿದೆ.
ರಕ್ಷಿತಾರಣ್ಯ ಹುಲಿಗಳ ಸಂಖ್ಯೆ
ಕಾರ್ಬೆಟ್ 231
ನಾಗರಹೊಳೆ 127
ಬಂಡಿಪುರ 126
ರಾಜ್ಯವಾರು ಹುಲಿಗಳ ಸಂಖ್ಯೆ
ಸ್ಥಾನ ರಾಜ್ಯ ಹುಲಿ ಸಂಖ್ಯೆ
1 ಮಧ್ಯಪ್ರದೇಶ 526
2 ಕರ್ನಾಟಕ 524
3 ಉತ್ತರಖಂಡ 442